Monday, April 2, 2007

ನೋವಲ್ಲಿ ಹುಟ್ಟುವ ಕವಿತೆ...

Our sweetest songs are those that tell of saddest thoughts...
- Percy Bysshe Shelley

ನೋವಲ್ಲಿ ಹುಟ್ಟುವ ಕವಿತೆಗೆ
ಅದೇನು ಶಕ್ತಿ...
ಅರಳಿ ನಳನಳಿಸುತ್ತದೆ...
ಜಗವ ಘಮಿಸುತ್ತದೆ...
ನೋವು ಹೀರುತ್ತದೆ...
ಸ೦ಗಾತಿಯಾಗುತ್ತದೆ...
ಸಾ೦ತ್ವನವಾಗುತ್ತದೆ...
ಮನವ ಬೆಳಗುತ್ತದೆ...
ಅಮೃತವಾಗುತ್ತದೆ...
ಅಮರವಾಗುತ್ತದೆ...

( ಇದು ಕವಿತೆಯಲ್ಲ :-) )

3 comments:

  1. ಇಲ್ಲಿಯವರೆಗೆ..
    .....
    ಅಮರವಾಗುತ್ತದೆ

    ಮುಂದುವರಿದ ಭಾಗ :)

    ಅಮರವಾಗಿ ಹಾಡಾಗುತ್ತದೆ
    ಮನದ ಮಾತಾಗುತ್ತದೆ
    ಮಾತಾಗಿ ಮೌನವಾಗುತ್ತದೆ
    ಮೌನಕ್ಕೆ ಮನೆಯಾಗುತ್ತದೆ
    ಮತ್ತೆ ನೋವಿನ ಮನೆ ಕಾಣುತ್ತದೆ

    ReplyDelete
  2. ನೋವಿನ ಮನೆ ಕ೦ಡಾಗ
    ಮತ್ತೆ ಕವಿತೆ ಹುಟ್ಟುತ್ತದೆ,
    ಮತ್ತೆ ಅಮರವಾಗುತ್ತದೆ!! :-)

    ReplyDelete
  3. ಕವಿತೆಯಲ್ಲದಿದ್ದರೂ ಅದ್ಭುತವಾಗಿದೆ ಬಿಡಿ...!!
    ಅದಕ್ಕೆ ಅಲ್ಲವೆ ಹೆಚ್ಚಿನ "ದರ್ದ್ ಬರೆ ನಗ್ಮೆ" ಹಿಟ್ ಆಗಿರೋದು!!
    ನೋವಿಗಿರೋ ಶಕ್ತಿಯೇ ಅಂತಹುದು.. ಬೇಗ ಓದುಗರ ಒಳತೋಟಿಯನ್ನು ತಡವುತ್ತದೆ!!

    ReplyDelete