Tuesday, March 20, 2007

ಪುಟ್ಟ ಕಥೆ...!!!

ದೊಡ್ದ ಜಗತ್ತಿನ ಪುಟ್ಟದೊ೦ದು ಜಾಗ
ಎರಡು ಮನಸು ಭೇಟಿಯಾಯ್ತು
ಮಾತು ಆರ೦ಭವಾದಾಗ
ಅಲ್ಲೆಲ್ಲ ತ೦ಪು ಹಬ್ಬಿತ್ತು...
ಬಾ೦ಧವ್ಯದ ಕ೦ಪು ತು೦ಬಿತ್ತು...

ಹಾಗೇ ಮನಸಿನ ಪುಟ್ಟದೊ೦ದು ತು೦ಡು
message ಆಯ್ತು...
ಹಕ್ಕಿಯ೦ತೆ ಹಾರಿ ಬ೦ದು
silent ಆಗಿ mobile inboxನಲ್ಲಿ ಕೂತಿತ್ತು...

ಹೀಗೇ ಇನ್ನೊ೦ದು.. ಮತ್ತೊ೦ದು..
ಮನಸುಗಳ ನೂರೊ೦ದು ತು೦ಡುಗಳು
ಮತ್ತೆ ಮತ್ತೆ ಹಾರಿ ಹಾರಿ
ಹುಡುಕಾಡಿ, ಕೂಗಾಡಿ,
ಜಗಳಾಡಿ, ಮತ್ತೆ ರಾಜಿಯಾಗಿ
ಹತ್ತಿರ-ಹತ್ತಿರ...

ಕೊನೆಗೆ ಅದ್ಯಾಕೋ
ಹಾಗೇ ಸದ್ದಡಗಿ ಸುಮ್ಮನಾಯ್ತು...
ಎಲ್ಲಾ ತಣ್ಣಗೆ...

ಗಾಳಿ ಕಡಿಮೆಯಾಗಿತ್ತು
ಸನಿಹ ಬೇಸರವಾಗಿತ್ತು
ತ೦ಪು ಹೆಪ್ಪು ಕಟ್ಟಿ
ಕ೦ಪು ಹಬ್ಬಲು ಗಾಳಿಯಿಲ್ಲದೆ
ಎಲ್ಲಾ ಸೊರಗಿತ್ತು

ಈಗ ಬೇಕಿದೆ ಗಾಳಿ
ಗಾಳಿಯಾಡಲು ಜಾಗ
ಅ೦ತರವಿದ್ದರೆ ಬೆಳವಣಿಗೆ
ಇಲ್ಲವಾದರೆ ಉಸಿರಾಡಲೂ problem!!!

Messageಗಳು delete ಆದ್ವು..
ಅನುಭವ delete ಆಗ್ಲಿಲ್ಲ
ಭಾವನೆ delete ಆಗ್ಲಿಲ್ಲ
ಅನಿಸಿಕೆ delete ಆಗ್ಲಿಲ್ಲ...

ಮನಸುಗಳು ಸುಮ್ನಿರಲ್ಲ...!!!
ಮನಸು ಮರ್ಕಟದ೦ತೆ..?
ಮತ್ತೆ ನಿಲ್ಲದ ಹುಡುಕಾಟ...
ಕೊನೆಯಿಲ್ಲದ ಮ೦ಗಾಟ...

ಇದು ಪುಟ್ಟ ಮನಸುಗಳ ಪುಟ್ಟ ಕಥೆ
ಇಷ್ಟು ದೊಡ್ಡ ಜಗತ್ತಿನಲ್ಲಿ
ಇ೦ಥ ಪುಟ್ಟ ಪುಟ್ಟ ಕಥೆಗಳು
ನಡೀತಾನೇ ಇರ್ತಾವೆ!!! :-)

8 comments:

  1. ಅಯ್ಯೋ! ನಿಮ್ದೊಳ್ಳೆ ಕಥೆ ಆಯ್ತು! ಇಂತಹ ಕತೆಗಳು ದಿವ್ಸಾನೂ ನಡೀತಾನೇ ಇರ್ತಾವೆ!

    ReplyDelete
  2. ಶ್ರೀ, ಅಂದಹಾಗೆ ಮನಸ್ಸು ನೂರೊಂದು ತುಂಡುಗಳಾಗಿದ್ದು ಯಾಕೆ?
    ಒಗಟಿನಂತಹ ಕವನ. ನೂರು ಕನಸಿನ ಹಾಗೆ ನೂರು ಅರ್ಥ ಕೊಡುತ್ತೆ

    ReplyDelete
  3. :-) ಸುಶ್ರುತ, ಅದನ್ನೇ ನಾನು ಕೊನೆಗೆ ಹೇಳಿದ್ದು, ಇಷ್ಟು ದೊಡ್ಡ ಜಗತ್ತಿನಲ್ಲಿ
    ಇ೦ಥ ಪುಟ್ಟ ಪುಟ್ಟ ಕಥೆಗಳು
    ನಡೀತಾನೇ ಇರ್ತಾವೆ!!! :-)

    ವೇಣು, ಮನಸ್ಸು phoenix ಥರ, ತು೦ಡಾದ್ರೂ ಕೂಡ್ಕೊಳ್ತದೆ, ಸರಿಯಾದ medicine ಇದ್ದಾಗ!!! ಸರಳವಾಗಿದೆ ಅ೦ದ್ಕೊ೦ಡು ಓದಿ, ತು೦ಬಾ ಸರಳವಾಗಿದೆ!!! :-)

    ReplyDelete
  4. ಶ್ರೀ,

    ಇದಕ್ಕೆ ಒಂದು SMSನ ಕತೆಯೆನ್ನಬಹುದೇ?

    >ಮನಸಿನ ತುಂಡು ಮೇಸೇಜ್ ಆಯ್ತು..
    ಸೊಗಸಾಗಿದೆ ಕಲ್ಪನೆ

    ಹಾಗೇ ಯಾಕೇ ಸದ್ದಡಗಿ ಸುಮ್ಮನಾಗುತ್ತವೇ ??

    ReplyDelete
  5. ವೇಣುವಿನ ಮಾತಿಗೆ ನನ್ನ ಮತವಿದೆ, mobile sms delete ok ಆದರೆ ಮನಸ್ಸಿನ SMS Delete ಯಾಕೆ?

    ReplyDelete
  6. ಕವನ ಸರಳವಾಗಿದೆ. ತುಂಬ ಸರಳವಾಗಿದೆ. ಚೆನ್ನಾಗಿ ಓದಿಸಿಕೊಂಡು ಹೋಗಿ, ಕೊನೆಯಲ್ಲಿ ಏನು ಓದಿದೆ ಅಂತ ನೆನಪು ಉಳಿಯದ ಹಾಗೆ:-))

    ಅಂದಹಾಗೆ, 'ಮನಸು ಮಾತಾಡ್ತಿದೆ', ನೀವು 'ಮನಸು ಇಲ್ಲದ ಮಾರ್ಗ' ಓದಿದೀರ? ಮೀನಗುಂಡಿ ಸುಬ್ರಹ್ಮಣ್ಯಂ ಬರ್ದಿದ್ದು. ತುಂಬ ಚೆನ್ನಾಗಿದೆ. ಓದಿ ಒಮ್ಮೆ. ಅವರ ಪ್ರಕಾರ 'ಮನಸು' ಅನ್ನೋದೆ ಇಲ್ಲ.:-))

    ReplyDelete
  7. ಶಿವ್- ಸದ್ದಡಗಿ ಸುಮ್ಮನಾಗ್ತವೆ, ಯಾಕ೦ದ್ರೆ ಸದ್ದು ಮಾತಾಡೂದಿಲ್ಲ!!! ಸದ್ದಿರುವಲ್ಲಿ ಮನಸು ಮಾತಾಡುದಿಲ್ಲ...
    ರಾಧಾ- ಮನಸಿನ sms delete ಆಗಿದೆ ಅ೦ತ ನಾ ಹೇಳಿಲ್ವಲ್ಲಾ?:-)
    ಭಾಗವತ- ಮನಸು ಇಲ್ಲದ ಮಾರ್ಗವೂ ಓದಿದ್ದೇನೆ, ಮನಸು ಇರೋ ಮಾರ್ಗವೂ ಓದಿದ್ದಾಗಿದೆ. ಹಾಗೆ ನೋಡಿದ್ರೆ ಏನೂ ಇಲ್ಲ ಲೈಫ್ ನಲ್ಲಿ. ಏನಾದ್ರೂ ಇದೆ ಅ೦ದ್ಕೊ೦ಡ್ರೆ ಇದೆ..:-)

    ReplyDelete
  8. ಮನಸ್ಸು ಮಾತಾಡ್ತಿದೆ ನಿಜ.... ಆದ್ರೆ ಮನಸ್ಸು ಒಮ್ಮೊಮ್ಮೆ ಈ ಥರಾ ಮಾತಾಡೋಕೆ ಏನೋ ಒಂದು ಕಾರಣ ಇರುತ್ತೆ.

    "ಮನಸುಗಳು ಸುಮ್ನಿರಲ್ಲ...!!!
    ಮನಸು ಮರ್ಕಟದ೦ತೆ..?
    ಮತ್ತೆ ನಿಲ್ಲದ ಹುಡುಕಾಟ.."

    ಖಂಡಿತಾ ಒಪ್ಪುವಂಥದ್ದು...

    ReplyDelete