Tuesday, May 8, 2007

ಎಲ್ಲಾ ಚಿತ್ರಗಳಲ್ಲೂ ಒಂದೊಂದು ಕಥೆಯಿದೆ...

ಪುಟ್ಟ Hide & Seek ಬಿಸ್ಕೆಟ್ ತಿಂತಾ ಕೂತಿದ್ದ. ನಾನು ಕ್ಯಾಮರಾ ಹಿಡಿದುಕೊಂಡು ಪಕ್ಕಕ್ಕೆ ಹೋಗಿದ್ದೇ, 'ಫೋಟೋ ಬೇಡ, ಆನು ಅಂಗಿ ಹಾಕಿದ್ಲೆ' (ಫೋಟೋ ಬೇಡ, ನಾನು ಅಂಗಿ ಹಾಕಿಲ್ಲ) ಅಂತ ಓಡಿದ. ಹಿಂದಿನಿಂದ ನಾನೂ ಓಡಿದೆ. ಇನ್ನೇನು ಬಾಗಿಲು ಮುಚ್ಚಿಕೊಂಡು ಅಡಗುವುದರಲ್ಲಿದ್ದ, ಅಷ್ಟರಲ್ಲಿ ನನ್ನ ಕ್ಯಾಮರಾಕ್ಕೆ ಸಿಕ್ಕಿಬಿದ್ದ...!!

ನಮ್ಮ ಹಳೆ ಹಳ್ಳಿ ಮನೆ, ಬಾಗಿಲು ಗೋಡೆ ಇತ್ಯಾದಿ ಕಾಣಿಸುತ್ತಿವೆ.. :-)


ಪ್ರಯೋಗವೆಂದುಕೊಂಡು ತೆಗೆದಿದ್ದೇನೆ, ನನ್ನ ಹೊಸ ಕ್ಯಾಮರಾದಲ್ಲಿ. ತಾಳ್ಮೆಯಿಂದ ಪೋಸ್ ಕೊಟ್ಟಿದ್ದಾನೆ ಚಿನ್ನಿ. ನಮ್ಮನೆಯ ದೇವರ ಕೋಣೆ. ದೇವರ ದೀಪದ ಬೆಳಕಿನ ಜತೆಗೆ soft flash ಉಪಯೋಗಿಸಿದ್ದೇನೆ. ಹೇಗಿದೆ? ಪರವಾಗಿಲ್ವಾ?


ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ!!! ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...

11 comments:

  1. ಶ್ರೀ..

    ನಂಗೆ ಎಷ್ಟೊಂದು ಕಥೆ ಕಾಣ್ತಿದೆ.. ಹೈಡ್ ಎನ್ ಸೀಕ್ ಚಿತ್ರ ತುಂಬ ಹಿಡಿಸಿತು. ಭಾವದೀಪ್ತ ಕಣ್ಣಿದ್ದರೆ, ಕ್ಯಾಮೆರಾ ಬೇಕಾಗೆ ಇಲ್ಲ.. ಪದಗಳಲ್ಲಿ ಚಿತ್ರವರಳುತ್ತದೆ. ನೀರಾಟದ ಪೋರಿ ಮತ್ತು ಅವಳನ್ನು ಹಿಡಿದ (ಕ್ಯಾಮೆರಾದಲ್ಲಿ ಮತ್ತು ಕೈಯಲ್ಲಿ!)ಅಕ್ಕ ಏನೇನೋ ಭಾವದಲೆ ಎಬ್ಬಿಸುತ್ತಾರೆ.

    ಒಳ್ಳೆಯ ಪೋಸ್ಟ್..

    ಇಷ್ಟೇನಾ? ಊರಿನ ಹೂರಣದ ಹೋಳಿಗೆಯೇ ಬೇಕು. ಬರೀ ಕೋಸಂಬರಿ ಸಾಕಾಗೋಲ್ಲ..

    ReplyDelete
  2. ಶ್ರೀ,

    ಪುಟ್ಟಿಯ ಕೈ ಹಿಡಿದುಕೊಂಡಿರುವ ಚಿತ್ರ ಬಹಳ ಹಿಡಿಸಿತು. ಇನ್ನೂ ಚೆನ್ನಾಗಿ ಆ ಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ ಎಂದೆನಿಸುತ್ತಿದೆ. ನೈಜವಾಗಿದೆ.

    ReplyDelete
  3. ಊರಿನ ಹೂರಣದ ಹೋಳಿಗೆ... ಹ್ಮ್ಮ್. ರೆಡಿ ಮಾಡ್ಬಹುದು, ಸಮಯದ ಅಭಾವ, ಏನ್ಮಾಡ್ಲಿ ಸಿಂಧು..

    ನನ್ ಕೈಲಿ SLR ಇದ್ರೆ ಇನ್ನೂ ಚೆನ್ನಾಗಿ ಆ ಚಿತ್ರ ಬರಬಹುದಿತ್ತು.. ಮತ್ತೆ ಪುಟ್ಟಿ ಫುಲ್ ಜೋಶ್ ನಲ್ಲಿ ಹಾರಡ್ತಿದ್ಲು, ಸ್ವಲ್ಪ ಪೋಸ್ ಕೊಡಕ್ಕೆ ಅವ್ಳು ರೆಡಿ ಇದ್ರೂ ಇನ್ನೂ ಚೆನ್ನಾಗಿ ತೆಗೀಬಹುದಿತ್ತು...

    ReplyDelete
  4. Nice post. ಕೊನೆಯ ಫೋಟೋದ 'ನೀರಿಷ್ಟ'ದ ಪೋರಿಯ ಚಿತ್ರ ತುಂಬಾ ಇಷ್ಟವಾಯ್ತು.. ಬಹುಶಃ ನೀರಿಗೂ ಅವಳು ಇಷ್ಟ ಅನ್ಸುತ್ತೆ.. ಮತ್ತೆ ಕೆಮೆರಾಗೂ... ಅದ್ಕೇ ಅಷ್ಟು ಚೆನ್ನಾಗಿ ಬಂದಿದೆ ಫೋಟೋ..

    ReplyDelete
  5. hide n seek photo muddagide. yeradeneya photo chenagi mudibandide belku bhava yella chenagide
    enigma

    ReplyDelete
  6. Shree,
    Nice photos you have there.
    Which camera do you use ?
    You may please leave ur answer in my blog... 1

    ReplyDelete
  7. enigma.......
    I have seen this name too many times in too many profiles... which'z this enigma?? (Kidding,it feels related, n' what u say tangible, when we know who'z interacting, anyhow no issues!!)

    Anikethan, I use Pentax Optio M20, it'z new to me, yet to get used to that, not getting much time to spend with that. surely wl get some quality time n' go thru ur photography blog.

    ReplyDelete
  8. ಶ್ರೀ,

    ನೀರನ್ನಲ್ಲಿ ಪುಟ್ಟಿ ತುಂಬಾ ಇಷ್ಟವಾಯ್ತು..
    ನೀವು ಕೈ ಹಿಡಿಯದೇ ಪುಟ್ಟಿದು ಮಾತ್ರ ತೆಗೆದಿದ್ದರೆ ಇನ್ನೂ ಚೆನ್ನಾಗಿ ಇರ್ತಿತ್ತು ಅನಿಸುತ್ತೆ ..

    ಅದರೂ ತುಂಬಾ ನೈಜ್ಯವಾಗಿ ಬಂದಿವೆ..

    ದಪ್ಪ ಮರದ ಬಾಗಿಲು...ಈಗಂತೂ ತುಂಬಾ ಅಪರೂಪ ಆಗಿದೆ ಆ ತರದವು

    ReplyDelete
  9. its me its me :) lat time some how it never lemme log in :) now it does

    ReplyDelete
  10. aa photo tegde, e photo tegde antha bari photo takkodu koothkobedi. baravanige kadenu swalpa gamana harisi ok.........

    ReplyDelete
  11. ಹೈಡ್ ಮತ್ತು ಸೀಕ್ ಸ್ನ್ಯಾಪ್ ಕಲಾತ್ಮಕವಾಗಿದೆ....

    ReplyDelete