Thursday, May 1, 2008

ಒಡೆದು ಬಿದ್ದ ಕೊಳಲು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ
ವಿನೋದವಿರದು ನನ್ನಲಿ...

ಕಿವಿಯನೇಕೆ ತೆರೆಯುತಿರುವೆ
ಎದೆಯೊಳೇನ ಹುಡುಕುತಿರುವೆ
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ !

ನಲ್ಲೆ ಬಂದು ತುಟಿಗೆ ಕೊಳಲನೊತ್ತಿ ಉಸಿರ ಬಿಟ್ಟಳು...
ತನ್ನ ಒಲವಿನಿಂದ ದನಿಯ ಹರಿದು ಇಳಿಸಿ ಬಿಟ್ಟಳು...

ಬಣ್ಣ ಬಣ್ಣದೆಣಿಪ ಹಾರ ನಲ್ಲ ಚೆಲ್ಲಿ ಕೊಟ್ಟನು...
ಕೊಳಲು ಬೇಸರಾಯಿತೇನೊ
ಹೊಸ ಹಂಬಲವಾಯಿತೇನೊ
ಎದೆಯ ಗಾಯ ಮಾಯಿತೇನೊ
ಬಿಸುಟೆದ್ದಳು ಕೊಳಲನು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ..
ವಿನೋದವಿರದು ನನ್ನಲಿ...

+++++++++++++++++++++++++++++++++++++++

ಸತತ ಏಳು ವರ್ಷ ಶಿರಸಿಯ ಗೆಳತಿ ಜ್ಯೋತಿಯ ಕೈಲಿ ಮತ್ತೆ ಮತ್ತೆ ಹಾಡಿಸಿಕೊಂಡು ಕೇಳುತ್ತಿದ್ದ ಹಾಡು... ಕೇಳುವುದು ಬಿಟ್ಟು ಹೆಚ್ಚು-ಕಡಿಮೆ 8 ವರ್ಷ ಆಗಿರಬೇಕೇನೋ? ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನೆನಪಾಯಿತು. ಯಾಕೋ ಮತ್ತೆ ಮತ್ತೆ ನೆನಪಾಗಿ ತುಂಬಾ ಕಾಡುತ್ತಿದೆ! ಕೆಲವು ಹಾಡುಗಳೇ ಹಾಗೆ, ಮರೆಯಲಾಗದ ಹಾಡುಗಳು... ಇದು ಬರೆದಿದ್ದು ಯಾರು ಅಂತ ಗೊತ್ತಿಲ್ಲ, ಭಾವಗೀತೆ, ಪೂರ್ತಿ ಇಲ್ಲ ಅನಿಸ್ತಿದೆ, ನಾನು ಬರೆದಿದ್ದರಲ್ಲಿ ತಪ್ಪುಗಳೂ ಇರಬಹುದು, ಸರಿಯಾದ version ಸಿಕ್ಕಿದ್ರೆ ಕೊಡಿ ಪ್ಲೀಸ್ :) ಕರೆದು ಕೂಡಿಸಿ ಹಾಡಿ ಕೇಳಿಸಿದರೆ ಇನ್ನೂ ಖುಷಿಯಾಗ್ತದೆ!

(ಇದರ ಹುಡುಕಾಟದಲ್ಲಿ ಗೂಗ್ಲ್ ಮಾಡಿದರೆ, ವಿಕ್ರಂ ಬ್ಲಾಗಲ್ಲಿ ಏನೋ ಬರೆದಿರುವ ಸುಳಿವು ಸಿಕ್ಕಿತು... ಚೆಕ್ ಮಾಡೋಣ ಅಂತ ಓಪನ್ ಮಾಡಿದರೆ, For invited readers only ಅಂತ ಬರ್ತಿದೆ! ಯಾರಾದ್ರು ಅದ್ರದ್ದು ಸ್ಕ್ರೀನ್ ಶಾಟ್ ಅಥವಾ ಕಾಪಿ ಕಳಿಸಿ ಪ್ಲೀಸ್...:) )

3 comments:

  1. ಅದು ವಿಕ್ರಂ ಬ್ಲಾಗ್ ಅಲ್ಲ. ಜೋಗಿಯವರದೇ ಇನ್ನೊಂದು ಬ್ಲಾಗು ಅನ್ಸತ್ತೆ. ಅದ್ರಲ್ಲಿ ಜೋಗಿ ಬರೀತಿರೋ ಹೊಸ ಕಾದಂಬರಿ ’ಯಾಮಿನಿ’ಯ ಕೆಲ ಅಧ್ಯಾಯಗಳು ಇವೆ.

    ReplyDelete
  2. ಶ್ರೀ, ನಾನೂ ಈ ಹಾಡಿಗಾಗಿ ಹುಡುಕುತ್ತಿದ್ದೆ. ಧನ್ಯವಾದ. ಹಾಡು ಇನ್ನೂ ಇದೆ ಅನಿಸುತ್ತದೆ. ಮುಂದಿನ ಸಾಲುಗಳು ಹೀಗಿವೆ ಎಂದು ನೆನಪು -

    ಮುರಿದು ಬಿದ್ದ ಕೊಳಲ ಕೊಳಲು ಬರುವನೊಬ್ಬ ಧೀರನು
    ಅಲ್ಲಿವರೆಗೆ ಮೃಣ್ಮಯ, ಬಳಿಕ ನಾವು ಚಿಣ್ಮಯ!

    ReplyDelete
  3. hi, ಇದು ಗೋಪಾಲಕೃಷ್ಣ ಅಡಿಗರ ಕವನ.

    ReplyDelete