Thursday, June 12, 2008

ಕರಿಪರದೆ...

ಬಾನ ಕವಿದಿದೆ ಮುಗಿಲು
ಕತ್ತಲಾಗಿದೆ ಹಗಲು

ಬೆಳಕು ಕಾಣದ ಬದುಕು
ದಾರಿ ಮುಚ್ಚಿದೆ ಮುಸುಕು

ಮನಸಿನೊಳಗಿನ ಮುನಿಸು
ಸುಟ್ಟುಬಿಟ್ಟಿದೆ ಕನಸು...

13 comments:

  1. ಶ್ರೀ... ಅವರೆ...
    ನಿಮ್ಮ ನೂರು ಕನಸು ನವಿರಾಗಿದೆ. ಎಲ್ಲ ವಿಷಯಗಳಲ್ಲೂ ಕನಸು ಕಾಣಲು ಪ್ರಯತ್ನಿಸಿದ್ದೀರಿ. ಚುಣಾವಣೆ ಲೇಖನ ಹಿಡಿಸಿತು.
    ನಿಮ್ಮ ಎಲ್ಲ ಕನಸುಗಳಿಗೆ ರೆಕ್ಕೆ ಮೂಡಲಿ...

    ...Laxmikanth...

    ReplyDelete
  2. hey ... ಕೊನೆಯ ಸಾಲುಗಳು ಚೆನ್ನಾಗಿವೆ.

    ReplyDelete
  3. ಅಯ್ಯೋ ಯಾಕ್ರೀ ನೀವೂ ನನ್ನ್ ಮೂಡಲ್ಲಿ ಇದೀರಾ!

    ReplyDelete
  4. ಕವನ ಏನೋ ಚೆನ್ನಾಗಿದೆ, ಆದರೂ ವಿಷಾದದ ಪೊರೆ ಮುಸುಕಿದೆಯಲ್ಲಾ....

    ReplyDelete
  5. Ekaantha,
    Dhanyavaada, bartaa iri...

    Hema, Jenugoodu, Thankz...

    VeNu, adu iruvude haage!

    Sree, kelavu grahagalu jagattalli ande thara irtavanthe :P

    ReplyDelete
  6. ತುಂಬಾ ಭಾರವಾದ ಸಾಲುಗಳು...ಆದರು ಇಷ್ಟವಾದವು.

    ReplyDelete
  7. ನೂರು ಕನ್ಸುಗಳ ಹಿಂದೆ ಕರಿ ಪರ್ದೆ ಹಾಕಿ ..... ಎಲ್ಲಿಗೆ ಹೋದ್ರಿ ..... ಕೊನೆ ಪಕ್ಷ ನಿಮ್ಮ ಬ್ಲಾಗಿನ ಕಡೆಗಾದ್ರು ಬನ್ನಿ... :D

    ReplyDelete
  8. ಬಾನ ಕವಿದಿದೆ ಮುಗಿಲು
    ಕತ್ತಲಾಗಿದೆ ಹಗಲು
    - ಇದು ಮೋಡ ಕವಿದ ಮಳೆಗಾಲ ಕಣ್ರೀ - ಆಷಾಢ ಮುಗಿದು ಶ್ರಾವಣ - ಭಾದ್ರಪದಗಳ ಕಾಲ :)

    ಬೆಳಕು ಕಾಣದ ಬದುಕು
    ದಾರಿ ಮುಚ್ಚಿದೆ ಮುಸುಕು
    - ಒಳಗಣ್ಣ ತೆರೆಯಿರಿ - ಬರಡು ಬದುಕಲ್ಲೂ ಹಯನು ಇರುವುದ ಕಾಣಿರಿ - ಸವಿಯಿರಿ - ಮನದಲಿ ಮಂಡಿಗೆ ಮೆದ್ದು ಹೊಟ್ಟೆ ತುಂಬಿತೆಂದುಕೊಳ್ಳಿ

    ಮನಸಿನೊಳಗಿನ ಮುನಿಸು
    ಸುಟ್ಟುಬಿಟ್ಟಿದೆ ಕನಸು...
    - ಬದಲಾವಣೆಯೇ ಜಗದ ನಿಯಮ - ಕನಸು ಕಮರಿದರೇನು, ಕನಸಲೂ ಕಾಣದಿದ್ದದ್ದು ನನಸಾಗುವುದು - ಅನುಭವಿಸಿದುದೆಲ್ಲವೂ ಮರೆಯಾಗುವುದು

    ಗುರುದೇವ ದಯಾ ಕರೊ ದೀನ ಜನೆ

    ReplyDelete
  9. ಕುಮಾರಸ್ವಾಮಿ,ಕೆಲವ್ರಿಗೆ ನೋವು ಯಾವಾಗ್ಲು ಇಷ್ಟವಾಗುತ್ತಂತೆ...
    ಅಮರ, ಬಂದೆ ಬಂದೆ! :)
    ಶ್ರೀನಿವಾಸ ಸರ್,:) :) :)

    ReplyDelete
  10. ಮನದ ತೆರೆಯ ಸರಿಸು
    ಕಾಯುತ್ತಿದೆ ಬೆಳಕು....
    ವಿಶಾದ ತೀರಾ ಭಾರ ಶ್ರೀ...
    ಬೇಗೆ ಹೊರೆ ಇಳಿಸಿ (ಆದ್ರೂ ನೋವಲ್ಲೂ ಸುಖ ಇದೆ)

    ReplyDelete
  11. ಕನಸು, ಒಪ್ತೀರಲ್ಲ ಕೊನೆಗೂ! :)

    ReplyDelete