Sunday, July 6, 2008

ಲೆಕ್ಕವಿಲ್ಲದ ಕನಸುಗಳಲ್ಲಿ ಇದು 50ನೆಯದು... :-)

ಕರುಳ ಚಿಗುರು ಕಳಚಿದಾಗ
ದೇಹ ಬರಿದು ಬರಿದು...
ಮಮತೆಯೊರತೆಯೊಸರಬೇಕು
ಮನಸು ಬರಿದು ಬರಿದು...!

ನಲಿಯುತಿರಲಿ ಮಗುವು, ಬೇಲಿ
ಮೀರಿ ಬೆಳೆದು ಹೊಳೆಯಲಿ...
ಬಂಧವೆಂದು ಬಂಧನದಲಿ
ಅಂತ್ಯ ಕಾಣದಿರಲಿ...!

ಇಂತು ತಿಳಿದ ತಾಯಿ ಮಗುವ
ಹೊರಗೆ ಆಡಬಿಟ್ಟಳು...
ಬರಿದು ಮನವು, ಖಾಲಿ ಹೃದಯ
ಅಡಗಿಸುತಲೆ ನಕ್ಕಳು...

4 comments:

  1. ಶೂನ್ಯದಿಂದ ಆರಂಭವಾಗಿ ಶೂನ್ಯದಲ್ಲೇ ಕೊನೆಯಾಗುವ ಪರಿ ತುಂಬಾ ಚೆನ್ನಾಗಿ ಮೂಡಿದೆ.. ಸುಂದರ ಕವನ. ಶುಭಾಶಯಗಳು.. ಕನಸುಗಳ ಮೆರವಣಿಗೆ ಹೀಗೇ ಸಾಗಲಿ.

    ReplyDelete
  2. ಶ್ರೀ, ಹೂಂ. . . ಎಷ್ಟು ಚೆನ್ನಾಗಿ ಬರೆದಿದ್ದೀರಿ!

    ReplyDelete
  3. ತೇಜಸ್ವಿನಿ, ಶ್ರೀದೇವಿ,
    ಧನ್ಯವಾದ...
    ಶ್ರೀನಿಧಿ,
    ಗೊತ್ತಿತ್ತು ನಂಗೆ ಹೀಗೇ ಹೇಳ್ತೀರ ಅಂತ! :)
    ವಿಕಾಸ್,
    :-)

    ReplyDelete