Friday, December 12, 2008

......


ಮೊಗತುಂಬಿದ ಗತ್ತು ಕರಗಿಸಿ
ನಗುವಿನ ಮುಖವಾಡ ಸರಿಸುತ್ತ
ಖಾಲಿಖಾಲಿಯ ಹೊತ್ತುಬರುವ
ನೀಲಿನೀಲಿಯ ಈ ಹೊತ್ತು
ನೀ ನನ್ನೊಡನಿರಬೇಕಿತ್ತು...

ನಾನಲ್ಲದ ನಾನು
ನನ್ನಿಂದ ಹೊರಬಂದು
ನಾನು ನಾನಾಗುವ ಹೊತ್ತು
ನೀ ನನ್ನೊಡನಿರಬೇಕಿತ್ತು...

ಮನತುಂಬಿದ ಸೊನ್ನೆಗೆ ಅರಿವಿದೆ
ಕಣ್ಣಂಚಲರಳಿದ ಹನಿಗೆ ಅನಿಸಿದೆ
ಸೋಗಲಾಡಿ ನಗುವಿಗೂ ಬೇಕಿದೆ

ನೀನಿದ್ದರೆ ಚೆನ್ನಾಗಿತ್ತು...
ನೀನಿರಬೇಕಿತ್ತು...

ನೀ ನನ್ನೊಡನಿರಬೇಕಿತ್ತು...

12 comments:

  1. ಶ್ರೀ...
    ಪ್ರತಿಪದವನ್ನೂ ಪ್ರೀತಿಸಬೇಕೆನ್ನಿಸಿತು.
    ಕೊನೆಯಲ್ಲಿ ನನಗೂ ಹಾಗೆನ್ನಿಸಿತು ‘ಈ ಹೊತ್ತು ನೀ ನನ್ನೊಡನಿರಬೇಕಿತ್ತು.’
    ಚಂದ ಬರ್ದಿದೀರಾ....

    ReplyDelete
  2. ಶ್ರೀಯವರೆ...

    ಭಾವ,ಲಯಗಳ.. ಗತ್ತು...
    ನಿಮ್ಮ ಕವನದ ಗುಟ್ಟು...
    ತುಂಬಾ ಚೆನ್ನಾಗಿದೆ...
    ಅಭಿನಂದನೆಗಳು...

    ReplyDelete
  3. ಶ್ರೀ,
    ತುಂಬಾ ಸೊಗಸಾದ ಗೀತೆ.

    ReplyDelete
  4. ಶ್ರೀ,

    ನಾನು ನಾನಾಗುವ ಹೊತ್ತು
    ನೀ ನನ್ನೊಡನಿರಬೇಕಿತ್ತು..

    ಸೊಗಸಾಗಿದೆ ಈ ಸಾಲುಗಳು..

    ReplyDelete
  5. "ಒಲಿದ ಜೀವ ಜೊತೆಯಲಿರಲು ಬಾಳೇ ಸುಂದರ...." ಅಲ್ಲವಾ? ಚೆನ್ನಾಗಿದೆ.

    ReplyDelete
  6. ಹಾಯ್ ಶ್ರೀಯವರೆ,
    ಬರೀ 'ಚೆಂದದ ಕವಿತೆ' ಎನ್ನುವುದಕ್ಕಿಂತಲೂ ಮತ್ತೇನೋ ಇದೆಯೆನಿಸಿತು ..

    ಕನಸುಗಳ ನನ್ನ ಬ್ಲಾಗುಗಳನ್ನೊಮ್ಮೆ (ಕನ್ನಡ & ಇಂಗ್ಲಿಷ್) ಬಿಡುವಾದಾಗ ನೋಡಿ.
    ~ಸುಷ್ಮಸಿ೦ಧು

    ReplyDelete
  7. ಕವನ ತುಂಬಾ ಚೆನ್ನಾಗಿದೆ. ಇಷ್ಟವಾಯಿತು.

    ReplyDelete
  8. ಶ್ರೀ,
    ರೀ ನೀವು
    ಕವಿತೆ ಚೆನ್ನಾಗಿ ಬರೆಯುತ್ತಿರಿ
    ಧನ್ಯವಾದಗಳು.

    ReplyDelete
  9. ಅಂತಃಸ್ಸತ್ವ ಕದಡುವ, ಕಾಡುವ ಕವನ.

    -ಚಂದಿನ

    ReplyDelete
  10. asdddddddddddddddddddddd

    ReplyDelete