Saturday, February 16, 2008

ಎರಡು ಹನಿಗಳು...

*************************
ಕೇಳದೇ ಇದ್ದಿದ್ದು
ನೂರಾರು ಕೊಟ್ಟು
ಕೇಳಿದ್ದೊಂದೂ ಕೊಡದೆ
ಆಟವಾಡಿಸುವ ಬದುಕಿಗೆ

ಕೊನೆಯದಾಗಿ ಕೇಳಿದ್ದು
ನಿನ್ನನ್ನು...

ಕೇಳದೆ ಇದ್ದಿದ್ದು
ನಿನ್ನನ್ನು...

***************************

ಇಲ್ಲಿರುವುದೆಲ್ಲ ಕೋಮಾಗಳೇ...
ಎಂದು ತಿಳಿದೂ ತಿಳಿದೂ
ಒಂದೇ ಒಂದು
ಪೂರ್ಣವಿರಾಮ
ಕಾಣುವಾಸೆ

ಕೋಮಾದೊಡನೆ
ಮುಂದೆ ಹೋಗಲೇ ಬೇಕು

ಪೂರ್ಣವಿರಾಮದೊಡನೆಯೂ
ಮುಂದೋಡುವಾಸೆ!!!
**********************

6 comments:

  1. ಬದುಕು ಅಷ್ಟೊಂದು ಗೊಂದಲ ಅನ್ನಿಸುತ್ತ.....

    ReplyDelete
  2. ಗೆಳೆಯ,
    ಕೋಮಾ ok;
    ಪೂರ್ಣವಿರಾಮ ಯಾಕೆ?

    ReplyDelete
  3. ಕೊನೆಯದಾಗಿ ಕೇಳಿದ್ದು
    ನಿನ್ನನ್ನು...

    ಕೇಳದೆ ಇದ್ದಿದ್ದು
    ನಿನ್ನನ್ನು...

    SAlugaLu tumba manassige tumba hiDisidavu.

    Rohini Joshi

    ReplyDelete
  4. HanigaLu ishtavadavu... tumba chennagi mooDi bandive...

    ReplyDelete
  5. ಹೌದು ರಾಧ!
    ಸುನಾಥ, ಕೋಮಾ ಸಾಕು, ಪೂರ್ಣವಿರಾಮ ಬೇಕು, ಅಷ್ಟೆ...! :)
    ಅಶ್ವಿನಿ, ರೋಹಿಣಿ, ಧನ್ಯವಾದ :)

    ReplyDelete
  6. "ಎರಡು ಹನಿಗಳು" ಏನನ್ನೂ ನೇರ ಹೇಳದೆಯೇ ನೂರುಮಾತುಗಳ ಹೇಳಿವೆ. ಇಂತಹ ಹನಿಗಳಿಗೆ ಪೂರ್ಣವಿರಾಮ ಬೀಳದಿರಲಿ.

    ReplyDelete