Saturday, November 29, 2008

ಈಶ್ವರ್ ಅಲ್ಲಾ...

ಸುಮ್ಮನಿರೋಣ ಅಂದುಕೊಂಡಿದ್ದು ನಿಜ. ಆದರೆ ಯಾಕೋ ಬೇಜಾರಾಗಿದೆ. ಯಾಕೋ ಬರೆಯಲೇಬೇಕೆನ್ನಿಸಿದೆ.
ईश्वर अल्लाह तेरे जहाँ में
नफ़रत क्यों है जंग है क्यों
तेरा दिल तो इतना बड़ा है
इन्साँ का दिल तंग है क्यों...

क़दम क़दम पर सरहद क्यों है
सारी ज़मीं जो तेरी है
सूरज के फेरे करती है
फिर भी कितनी अंधेरी है
इस दुनिया के दामन पर
इन्साँ के लहू का रंग है क्यों...

ईश्वर अल्लाह तेरे जहाँ में
नफ़रत क्यों है, जंग है क्यों
तेरा दिल तो इतना बड़ा है
इन्साँ का दिल तंग है क्यों...

गूँज रही हैं कितनी चीखें
प्यार की बातें कौन सुने
टूट रहे हैं कितने सपने
इनके टुकड़े कौन चुने
दिल के दरवाज़ों पर ताले
तालों पर ये ज़ंग है क्यों...

ईश्वर अल्लाह तेरे जहाँ में
नफ़रत क्यों है, जंग है क्यों
तेरा दिल तो इतना बड़ा है
इन्सां का दिल तंग है क्यों...

ಜಾವೇದ್ ಅಖ್ತರ್ ಬರೆದ ಚಂದದ ಈ ಹಾಡು, 1947-EARTH ಚಿತ್ರದ್ದು. ಎ ಆರ್ ರೆಹಮಾನ್ ಸಂಗೀತ, ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರದಲ್ಲಿ, ದೇಶವಿಭಜನೆಯ ಸಮಯದಲ್ಲಿ ಆದ ದಂಗೆಗಳ ಸಮಯ ನಡೆದ ಘಟನೆಗಳ ಕುರಿತು ಚಿತ್ರಣವಿದೆ... ಸ್ವಾರ್ಥಕ್ಕೆ ಅಡಿಯಾಳಾಗುವ ಮಾನವ, ಧರ್ಮದ ಹೆಸರಲ್ಲಿ ತನ್ನ ಸ್ವಾರ್ಥಸಾಧನೆ ಹೇಗೆ ಮಾಡಿಕೊಳ್ಳುತ್ತಾನೆಂಬುದನ್ನು ಎಳೆಎಳೆಯಾಗಿ ಬಿಡಿಸಲಾಗಿದೆ... ನಂದಿತಾ ದಾಸ್, ಅಮೀರ್ ಖಾನ್, ರಾಹುಲ್ ಖನ್ನಾರ ಅದ್ಭುತ ನಟನೆಯಿದೆ... ಬೆಚ್ಚಿಬೀಳಿಸುವಂತಹ ಕೋಲ್ಡ್-ಬ್ಲಡೆಡ್ ಮರ್ಡರ್-ನ ದೃಶ್ಯಗಳಿವೆ... ಜತೆಗೆ ಈ ಚಂದದ ಹಾಡೂ ಕೂಡ. ಈ ಚಿತ್ರ ನೋಡದವರಿಗೆ ನೋಡಲಿಕ್ಕಿದು ಸಕಾಲ.

--------------------

ಒಬ್ಬನಿದ್ದ, ಸೃಜನಶೀಲ ವ್ಯಕ್ತಿ. ಬರಿಯ ನಗೆಚಾಟಿಕೆ ಹಾರಿಸಿಕೊಂಡು, ಸರಳವಾಗಿದ್ದ ಆತ, ಎಲ್ಲರ ನಡುವಿದ್ದೂ ಎಲ್ಲರಿಗಿಂತ ಭಿನ್ನವಾಗಿದ್ದ. ನಗುವಿದ್ದರೆ ಎಲ್ಲರಿಗೂ ಹಂಚುತ್ತಿದ್ದ ಗೆಳೆಯ, ಅಳುವಿದ್ದರೆ ಬಿಸ್ಮಿಲ್ಲಾಖಾನ್ ಜತೆ ಮಾತ್ರ ಹಂಚಿಕೊಳ್ಳುತ್ತಿದ್ದ.
ಸುಮ್ಮನೆ ಕೂತಲ್ಲಿ ಕೂರಲಾರದವ, ಏನಾದರೂ ವಿಭಿನ್ನವಾಗಿ ಮಾಡುತ್ತಲೇ ಇರುತ್ತಿದ್ದವ. ದೇಶದ ವಿವಿಧೆಡೆಯಿಂದ ಬಂದ ದೃಶ್ಯಗಳನ್ನು ಕತ್ತರಿಸಿ, ಈ ಹಾಡಿಗೆ ಸೂಕ್ತವಾಗುವಂತೆ ದೃಶ್ಯಗಳನ್ನು ಸೂಪರ್-ಇಂಪೋಸ್ ಮಾಡಿದ್ದ. ಸೂಕ್ತವಾದ ದೃಶ್ಯಗಳು ಸಿಗದಿದ್ದಲ್ಲಿ ಸಿಗುವವರೆಗೆ ಹುಡುಕಿ ಹಾಕಿದ್ದ. ಚಲನಚಿತ್ರದಲ್ಲಿರುವ visualizationಗಿಂತ ಭಿನ್ನವಾಗಿ, ಪ್ರಸ್ತುತ ಪರಿಸ್ಥಿತಿಗೆ ಅನ್ವಯವಾಗುವಂತೆ ಅದನ್ನು ದೃಶ್ಯೀಕರಿಸಿ ಎಡಿಟ್ ಮಾಡಿದ್ದ. (ಅದರ ವೀಡಿಯೋ ನನ್ನ ಬಳಿ ಇಲ್ಲ, ಇದ್ದವರು ಇಂಟರ್ನೆಟ್ಟಿಗೆ ಅಪ್-ಲೋಡ್ ಮಾಡಿ, ತುಂಬಾನೇ ಚೆನ್ನಾಗಿದೆ ಅದು.)

--------------------

ಇನ್ನೊಂದು ಪ್ರೋಮೋ ಮಾಡಿದ್ದ ಈತ, ನಂಗಂತೂ ತುಂಬಾ ಇಷ್ಟವಾಗಿತ್ತು ಅದು. abstract ಆಗಿದ್ದರೂ ಸುಲಭವಾಗಿ ಅರ್ಥವಾಗುವ ಯೋಚನಾ ಸರಣಿ... (ಸಿದ್ದೇಶ್, ಅದರ ಆಡಿಯೋ ಸರಿಮಾಡಿ ಅಪ್-ಲೋಡ್ ಮಾಡಿದರೆ ಉತ್ತಮ...)
" ನಮ್ಮ ಊರುಗಳು, ಮತ್ತೆ ನಮಗೆ ಸಿಗಬೇಕಾಗಿದೆ...
ನಮ್ಮ ಮನೆಗಳಲ್ಲಿ ದೀಪಗಳು ಪ್ರೀತಿಯಿಂದ ಉರಿಯಬೇಕಾಗಿದೆ...
ನಾವು, ಬಾಪೂಜಿಯ ಆದರ್ಶಗಳೊಂದಿಗೆ ಬೆಳೆದವರು...
ಬಸವಣ್ಣನ ಕರ್ಮಭೂಮಿ ನಮ್ಮದು...
ಪ್ರಾಮಾಣಿಕತೆ, ನೇರ ನೋಡುವ ಶಕ್ತಿ
ಅನಿಸಿದ್ದನ್ನು ಸ್ಪಷ್ಟವಾಗಿ ಹೇಳುವ ನಿಷ್ಠುರತೆ...
ನಮ್ಮಲ್ಲಿರಬೇಕು..
ಅದೇ ಪ್ರಜಾಪ್ರಭುತ್ವದ ಗೆಲುವು...
ಅದೇ ಪ್ರಜಾಪ್ರಭುತ್ವದ ಹೆಮ್ಮೆ.

ಈ ಹೆಮ್ಮೆಗಾಗಿ, ಈ ಗೆಲುವಿಗಾಗಿ, ನಾವು ನಿಮ್ಮೊಂದಿಗಿದ್ದೇವೆ..."

-----------------------------------
ಈಗ ರವೀಂದ್ರ ಇಲ್ಲ... ಇರಬೇಕಿತ್ತು.

8 comments:

  1. ಶ್ರೀಯವರಿಗೆ

    ಪ್ರತಿದಿನ ನೋಡುತ್ತಿದ್ದೆ. ಕರಿಪರದೆ ಎಂದು ಸರಿಯುವುದೆಂದು?

    ಅಂತೂ ಈ ದಿನ ನಿಮ್ಮ ಬ್ಲಾಗ್ ನಲ್ಲಿ ಬರವಣಿಗೆ ನೋಡಿ ಖುಶಿಯಾಯಿತು. ಆದರೆ ವಿವರಗಳನ್ನು ಓದಿ ಹೃದಯ ಭಾರವಾಯಿತು

    ReplyDelete
  2. ಗೂಂಜ್ ರಹಿ ಹೈ ಕಿತ್ನೆ ಚೀಕೆಂ
    ಪ್ಯಾರ್ ಕಿ ಬಾತ್ ಕೌನ್ ಸುನೇ..
    -ಇಂಥ ಹಾಡುಗಳು ಅ.೨, ಆ.೧೫, ಜ.೨೬ರಂದು ಮಾತ್ರ ನಮ್ಮ ಟಿ.ವಿ, ರೇಡಿಯೋಗಳಲ್ಲಿ ಬರುತ್ತವೆ. ಅಲ್ಲಿಗೆ ನಾವು ದೇಶ, ಒಗ್ಗಟ್ಟು ಬಗ್ಗೆ ನೆನಪು ಮಾಡಿ ಹಾಗೇ ಮರೆಯುತ್ತೇವೆ ಅಲ್ಲವೆ?


    ಇನ್ನು ನಿಮ್ಮ ಬರೆಹ ಮುಂದುವರಿಸಿ
    ಮತ್ತೆ ನಿಲ್ಲಿಸಬೇಡಿ.

    ReplyDelete
  3. ಹ್ರದಯಕ್ಕೆ ತಟ್ಟುವಂತಿದೆ, ಮನಸ್ಸು ಭಾರವಾಗುತ್ತದೆ.. ಸಕಾಲಿಕವಾಗಿ ಬರೆದಿದ್ದೀರಿ..
    ಧನ್ಯವಾದಗಳು..

    ReplyDelete
  4. ಶ್ರೀ,

    ಇಲ್ಲಿದೆ ನನ್ನ ಕನ್ನಡ ಭಾವಾನುವಾದ, ಅದೇ ರಾಗದಲ್ಲಿ ಹಾಡಬಹುದು ಕೂಡ...

    ಈಶ್ವರ ಅಲ್ಲಾ ನಿನ್ನಯ ಲೋಕದಿ
    ದ್ವೇಷವಿದೇಕೆ ಛಲವೇಕೆ?
    ನಿನ್ನಯ ಮನವು ಅನಂತವಾಗಿರೆ
    ಮನುಜನ ಮನವು ತೃಣವೇಕೆ?

    ಅಡಿಗಡಿಗೊಂದು ಗಡಿಗಳು ಏಕೆ
    ಜಗವೆಲ್ಲಾ ನಿನದಿರುವಾಗ?
    ನೇಸರ ನಮ್ಮನು ಸುತ್ತುತಲಿದ್ದರೂ
    ಕತ್ತಲಲಿ ನಮ್ಮ ಬದುಕೇಕೆ?
    ಭೂತಾಯ ಸೀರೆಯ ಅಂಚಿನ ತುಂಬ
    ಮನುಜನ ರಕುತದ ಕಲೆ ಏಕೆ?

    ಕಿವಿಗಪ್ಪಳಿಸಿವೆ ರೋದನಾಕ್ರಂದನ
    ಪ್ರೀತಿ ಪಿಸುಮಾತು ಕೇಳಿಸದು
    ಚೂರು ಚೂರು ಸಾವಿರ ಕನಸು
    ಜೋಡಿಸುವರಾರೂ ಕಾಣಿಸರು
    ಮನದ ಬಾಗಿಲಿಗೆ ಬಿದ್ದಿದೆ ಬೀಗ
    ಬೀಗಕೆ ಹಿಡಿದಿದೆ ತುಕ್ಕೇಕೆ?

    - ಕೇಶವ
    www.kannada-nudi.blogspot.com

    ReplyDelete
  5. ಚಂದ್ರಕಾಂತ, ಹರೀಶ್, ಪ್ರಕಾಶ್, ಥ್ಯಾಂಕ್ಸ್...
    ಕುಲಕರ್ಣಿಯವರೇ, ತುಂಬಾ ಚೆನ್ನಾಗಿದೆ ಅನುವಾದ... ಯಾರಾದರೂ ಇದನ್ನು ಮತ್ತು ಇಂಥದೇ ಹಲವು ಹಾಡುಗಳನ್ನು ಕಂಪೋಸ್ ಮಾಡಿ ಹಾಡಿದರೆ ಚೆನ್ನಾಗಿರುತ್ತದೆಯೇನೋ... (though am not sure whether we are at a time where art and culture heal the wounds...)

    ReplyDelete
  6. ಕುಲಕರ್ಣಿಯವರೆ, ಅನುವಾದ ಚೆನ್ನಾಗಿದೆ. ರಾಗಕ್ಕೆ ಹೊಂದುವಂತಿದೆ. - ಸುಘೋಷ್ ನಿಗಳೆ

    ReplyDelete
  7. ಯಾಕೋ ರವೀಂದ್ರ ಪದೇ ಪದೇ ನೆನಪಾಗ್ತಾನೇ...

    ReplyDelete
  8. ಗೂಡೂ ಸಹ ಹಕ್ಕಿಗಾಗಿ ಕಾಯುವದೆ? ಸುಂದರವಾದ ಕಲ್ಪನೆ.
    http://www.interiordesignersbangalore.com
    http://www.interiordesignersinbangalore.com
    http://www.architectsbangalore.com
    http://www.seekangroup.com
    http://www.architectsban.webs.com

    ReplyDelete