Saturday, November 22, 2008

ಕರಿಪರದೆ


ಆರ್ಕಿಡ್ ಹೋಟೆಲ್ ಕಟ್ಟಿದ ಹೋಟೆಲಿಯರ್ ವಿಠಲ ಕಾಮತ್ ಆತ್ಮಕಥೆ ಓದುತ್ತಿದ್ದೆ, ಅದರಲ್ಲಿದ್ದ ಸಾಲುಗಳು...

डूबता सूरज् हूँ, कोई पूजता नहीँ...

कल सुबह निकलूँगा, देवता बन जावूँगा...

ಜಗತ್ತಿನಲ್ಲಿ ಗೆಲುವು ಎಷ್ಟು ಮುಖ್ಯ ಎನ್ನುವ ಕಹಿ ಸತ್ಯದ ಬಗ್ಗೆ ಪ್ರಾಕ್ಟಿಕಲ್ ಆಗಿ ಬರೆದ ಸಾಲುಗಳು, ಯಾಕೋ ಅರಗಿಸಿಕೊಳ್ಳಲು ಕಷ್ಟವಾದರೂ ಸತ್ಯವೆನಿಸಿದವು.

-----------------------------

ಯಾಕೋ ಮಾತಿನ ಜಗತ್ತು ಸಾಕಾಗಿದೆ, ಕನಸು ಕಟ್ಟುವುದು ನಿಲ್ಲಬೇಕಿದೆ... ಮೌನ ಒಂದಿಷ್ಟು ದಿನ ಬೇಕೆನಿಸಿದೆ.

ಸದ್ಯಕ್ಕೆ ಬರಹಕ್ಕೆ ಟಾಟಾ. ಮತ್ತೆ ಬರೀತೀನಿ ಯಾವತ್ತಾದ್ರೂ, ನೋಡೋಣ.

5 comments:

  1. ಶ್ರೀ,
    Not fair. ಬರೆಯೋದು ಯಾಕೆ ನಿಲ್ಲಿಸ್ತೀರಿ? ಬರೆಯುವವರು ಬರೆದರೇನೆ ಕನಸು ಕಟ್ಟೋಕಾಗೋದು, ಮುಂದೆ ಹರಿಯೋಕಾಗೋದು. ನಾನು ಕೇಳೊಲ್ಲ. ನೀವು ಬರೀಲೇ ಬೇಕು.

    ReplyDelete
  2. ಅನಿವಾರ್ಯವಾಗಿ ಕಮೆಂಟ್ ಮಾಡರೇಶನ್ ಹಾಕಿದ್ದೇನೆ, ಕ್ಷಮಿಸಿ... - ಶ್ರೀ

    ಸಿಮೆಂಟು ಮರಳಿನ ಮಧ್ಯೆ - has left a new comment on your post "ಕರಿಪರದೆ":

    waw..!!
    ಸೋಲಿನಿಂದ ಬೇಸರವಾದಾಗ ಸ್ಪೂರ್ತಿ ಕೊಡುವಂಥಹ ವಾಖ್ಯಗಳು..!!

    great..!!


    ತೇಜಸ್ವಿನಿ ಹೆಗಡೆ- has left a new comment on your post "ಕರಿಪರದೆ":

    ಶ್ರೀ,

    ತುಂಬಾ ಇಷ್ಟವಾಯಿತು ಸಾಲುಗಳು.. ಸದಾ ನೆನಪಿನಲ್ಲುಳಿಯುವಂತಹವು. ಆದರ ನಮ್ಮಲ್ಲಿ ಸಂಧ್ಯಾಕಲದಲ್ಲೂ ವಂದನೆ ಸಲ್ಲಿಸುವ ಪರಂಪರೆಯಿದೆ.. (ಸಂಧ್ಯಾವಂದನೆ). ಇದರರ್ಥ ಮುಳುಗುವ ಸೂರ್ಯನಿಗೂ ಕೊನೆಯ ನಮಸ್ಕಾರ ಹಾಕಿ ಉದಯಿಸುವ ಸೂರ್ಯನಿಗಾಗಿ ಪ್ರಾರ್ಥಿಸುವುದು. ಸೋಲೇ ಗೆಲುವಿನ ಮೆಟ್ಟಲು ಎನ್ನುವುದನ್ನು ನಮ್ಮ ಪೂರ್ವಜರು ಎಷ್ಟು ಚೆನ್ನಾಗಿ ಅರ್ಥೈಸಿದ್ದಾರಲ್ಲವೇ?

    ಮೌನ ಬೇಕೆನಿಸುವುದು ಸಹಜ. ಆದರೆ ಮೌನ ಮೂಕವಾಗಬಾರದಷ್ಟೇ. ಆದಷ್ಟು ಬೇಗ ಮತ್ತಷ್ಟು ಕನಸುಗಳನ್ನು ಹೊತ್ತು ಬನ್ನಿ ಎಂದೇ ಹಾರೈಸುವೆ. ಕನಸುಗಳಿಗೆ ಮೌನದ ಹಂಗಿಲ್ಲ ತಾನೆ? :)

    ಬೇಗ ಕರಿಪರದೆಯ ಸರಿಸಿ ಬಿಳಿಪರದೆಯನ್ನು ಕಾಣಿಸಿ...

    --------------

    rasraj has left a new comment on your post "ಕರಿಪರದೆ":

    ಶೀ ದೇವಿ 'ಮೇಡಂ'

    ಚಾಮರಾಜ ಸವಡಿಯವರ ಪ್ರತಿಕ್ರಿಯೆ ನೀವು ನೀಡಿರುವ ಪ್ರತಿಕ್ರಿಯೆಗೆ ನನ್ನದು ..... ;)

    ಬರಹ ನಿಲ್ಲಿಸಿರುವುದಕ್ಕೆ thanks ಹೇಳೋದಿಲ್ಲ.

    ಆದರೆ ನಿಮ್ಮ recent ಬರಹಕ್ಕೆ ಪ್ರತಿಕ್ರಿಯಿಸಬೇಕು ಅಂದುಕೊಂಡಿದ್ದೆ ಆಗಿರಲಿಲ್ಲ..... ಆದರೆ ಈಗ ಬರೆಯಲೇಬೇಕಾಗಿದೆ......

    (: .....:) ಪ್ರತಿಕ್ರಿಯೆಗೆ ನೀವು ನೀಡಿದ ಉತ್ತರದ ಬಳಿಕ ನನಗೆ ತಿಳಿದದ್ದು ಇಷ್ಟು..ಈ ಟಿ.ವಿಯಲ್ಲಿ ಡೇ ಓನ್ ಇಂದ ಇದ್ದೇನೆ ಎಂದು ಹೇಳಿಕೊಂಡಿರುವ ನಿಮಗೆ ಸವಡಿ ಹಾಸನದ ವರದಿಗಾರರು ಆಗಿದ್ದರು ಎಂಬ ನಿತ್ಯ ಸತ್ಯವೇ ಗೊತ್ತಿಲ್ಲ ಅನ್ನುವುದು. ಇದೇ ನಿಮ್ಮ ಕಾರ್ಯಕ್ಷಮತೆಗೆ ಮೊದಲ ಸಾಕ್ಷಿ. ಹಾಗೂ ನಿಮ್ಮ ಸಂಸ್ಥೆಯ ಕೆಲಸಗಾರರ ಬಗ್ಗೆ ಯಾವ ರೀತಿ ಭಾವನೆ, ಜ್ಞಾನ ಇಟ್ಟುಕೊಂಡಿದ್ದೀರಿ ಅಂತಾ ತಿಳಿಯುತ್ತದೆ. ಸವಡಿ ಮೊದಲಿಗೆ ಲಂಕೇಶ್ ಬಳಿಕ ಹಾಯ್ ಬೆಂಗಳೂರುಲ್ಲಿ ಕೆಲಸ ಮಾಡಿ ಈಟಿವಿ ಬಳಗ ಸೇರಿಕೊಂಡಿದ್ದರು... ಯಡವಟ್ಟಿಯವರ ಕಾರಣಕ್ಕೆ ಈಟಿವಿ ತೊರೆದಿದ್ದರು. ಹಾಗಾಗಿ ಈಟಿವಿ ಒಳ ಹೊರಗು ಅವರಿಗೆ ಚೆನ್ನಾಗಿ ಗೊತ್ತು. ಸವಡಿ ಪತ್ರಕರ್ತ ಮಾತ್ರವಲ್ಲದೆ ಸಾಕಷ್ಟು ಸಾಹಿತ್ಯ ಓದಿಕೊಂಡು... ಬರೆದುಕೊಂಡು ಬಂದಿರುವ ಸಾಹಿತ್ಯ ಕೃಷಿಕ.
    ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದೇನೆ ಅನ್ನುವುದು ನಿಮ್ಮ ದಾಷ್ಟ್ಯವಲ್ಲದೆ ಮತ್ತೇನಲ್ಲ ಅನ್ನೋದು ನನ್ನ ಅಭಿಪ್ರಾಯ.. ಯಾಕೆ ಆಂದರೆ ಒಂದಿ ತಿಂಗಳ ಮಗು ನಾನು ಚೆನ್ನಾಗಿ ನಡೆಯುತ್ತೇನೆ. ಅಪ್ಪ- ಅಮ್ಮನಿಗೆ ಸರಿಸಮಾನಾಗಿ, ಇನ್ನು ಒಂದು ಹೆಜ್ಜೆ ಮುಂದಿಟ್ಟು ಹೇಳೀವುದಾದ್ರೆ ನಾನೇ ಅವರಿಗೆ ನಡಿಗೆ ಕಲಿಸಿರುವೆ ಅನ್ನೋ ತರ. ದಯವಿಟ್ಟು ಇಂತ ಸ್ವರತಿಯನ್ನ ಬಿಟ್ಟು ಬಿಡಿ ಕಲಿಯಿರಿ ಕಲಿಸಿರಿ ಚೆನ್ನಾಗಿ ಬೆಳೆಯಿರಿ. ನಿಮ್ಮ ಹೆಚ್ಚಿನ ಲೇಖನಗಳಲ್ಲಿ ನಾನು ಜಿಲ್ಲಾ ವರದಿಗಾರರ ಉಸ್ತುವಾರಿ ಹೊತ್ತಿದ್ದೇನೆ ಅನ್ನುವ ಮಾತು ಪದೇ ಪದೇ ಬರುತ್ತಿದೆ. ನೀವು ನಿಮ್ಮನ್ನು ಗುರುತಿಸಿಕೊಳ್ಳಲು ಹೀಗೆ ಬರೆಯುತ್ತೀರಾ ಇಲ್ಲ ಇದೊಂದು ಚಾಳಿಯ. mobile ಹಿಡಿದು ವರದಿಗಾರರಲ್ಲಿ ಮಾತನಾಡಿದ ಮಾತ್ರಕ್ಕೆ ಜಿಲ್ಲಾ ಸಚಿವರಾಗಲಿ ಸಾಧ್ಯವಿಲ್ಲ.ಅದೊಂದು ದೊಡ್ಡ ಹುದ್ದೆ ನೀವು ಹೇಳೀದಂತೆ ವಶೀಲಿಯಿಂದ ವಸ್ತು ಸ್ಠಿತಿ ಏನು ಎಂದು ಗೊತ್ತಿಲ್ಲದ ಹಿರಿಯರಿಗೆ ಬಕೆಟ್ ಹಿಡಿದು. ನೀವು ಉಸ್ತುವಾರಿ ಹೊತ್ತಿರಬಹುದು. ಕೇವಲ ನಮ್ಮನ್ನು ನಾವು ಹೊಗಳಿಕೊಂಡು ನಾ ಹಾಗೆ,,,, ಹೀಗೆ ಎನ್ನುವುದಿದೆಯಲ್ಲ. ಕನ್ನಡಿ ನೋಡಿಕೊಂಡು ನಾ ಸುಂದರ ನಾ ಸುಂದರಿ ಎಂದ ಹಾಗೇ... ಇದನ್ನ ವೀಕ್ಷಕರು ನೋಡಿ ಹೇಳಬೇಕು ಅಲ್ವಾ ಮೇಡಂ... ದಯವಿಟ್ಟು ಜಿಲ್ಲಾ ವರದಿಗಾರರ ಸಮಸ್ಯೆ ಗೊತ್ತು ಅಂತಾ ಹೇಳಿದ್ದೀರಾ... ದಯವಿಟ್ಟು ಪರಿಹರಿಸಿ ನಿಮ್ಮ ಬಗ್ಗೆ ಅಮೇಲೆ........ ಆದರೆ ವೇತನ ಬಗ್ಗೆ ಎತ್ತಿರುವ ಮಾತಿಗೆ thanks......

    ----------------------------------

    ಇವೆಲ್ಲಾವನ್ನು ವೈಯುಕ್ತಿಕವಾಗಿ ಬರೆದಿಲ್ಲ.. ಕೇವಲ ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆ ಅಷ್ಟೇ....

    ReplyDelete
  3. ಟೀನಾ, ಪ್ರಕಾಶ್, ತೇಜಸ್ವಿನಿ,
    ಬರೆಯಬೇಕು ಅಂತ ಮನಸಿಗೆ ಅನಿಸಿದಾಗ ತೆಪ್ಪಗೆ ಕೂರುವುದು ನನ್ನಿಂದ ಸಾಧ್ಯವೇ ಇಲ್ಲ ಅನ್ನುವುದು ನಂಗೇ ಗೊತ್ತಾಗ್ತಿದೆ...
    ಥ್ಯಾಂಕ್ಸ್.

    'ರಸರಾಜ'ರೇ,
    ಅನಾನಿಮಸ್ ಆಗಿ ಹೇಡಿಗಳಂತೆ ಹಿಂದಿನಿಂದ ಕಮೆಂಟು ಒಗೆಯುವವರನ್ನು ನಾನು ದ್ವೇಷಿಸುತ್ತೇನೆ. ಯಾವಾಗಲೂ ಎಲ್ಲರಿಗೂ ಎಲ್ಲರ ಬಗ್ಗೂ ಗೊತ್ತಿರಬೇಕಿಲ್ಲ, ಸವಡಿಯವರಿಗೆ ನನ್ನನ್ನೂ ಗೊತ್ತಿರಲಿಕ್ಕಿಲ್ಲ. ಅದು ನನ್ನ-ಅವರ ನಡುವಿನ ವಿಚಾರ. ಮಧ್ಯೆ ಬಾಯಿ ಹಾಕಲು ನೀವ್ಯಾರು? ನನ್ನ ಜತೆಗೆ ಕೆಲಸ ಮಾಡುವವರ ಜತೆಗೆ ನಾನು ಹೇಗಿರುತ್ತೇನೆ ಎಂಬುದು ನನಗೆ ಗೊತ್ತಿದೆ, ಹಾಗೂ ನನ್ನ ಜತೆಗೆ ಇರುವವರಿಗೆ ಗೊತ್ತಿದೆ. ಹಿತಶತ್ರುಗಳು ತಮಗೆ ಬೇಕಾದ್ದು ಹೇಳಿಕೊಳ್ಳಬಹುದು, I don't care.
    ಜಿಲ್ಲಾವರದಿಗಾರರ ಸಮಸ್ಯೆಗಳ ಬಗ್ಗೆ ನಾನು ತಿಳಿದಿದ್ದೇನೆ ಅಂತ ಹೇಳಿದೆನೇ ವಿನ:, ನಾನೇ ಎಲ್ಲರಿಗೂ ಕೆಲಸ ಕಲಿಸಿರುವೆ ಎಂದು ಎಲ್ಲೂ ಹೇಳಿಕೊಂಡಿಲ್ಲ. ಹಾಗೂ ಎಲ್ಲೂ ಅವರ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ನನಗಿದೆ ಅಂತಲೂ ಹೇಳಿಕೊಂಡಿಲ್ಲ.
    ಸಭ್ಯತೆಯ ಹದ ಮೀರಿ ಬಂದ ನಿಮ್ಮ ಕಮೆಂಟಿಗೆ ನನ್ನ ಧಿಕ್ಕಾರ. ಧೈರ್ಯವಿದ್ದರೆ ಎದುರಿಗೆ ಬನ್ನಿ, ಮುಖತ: ಮಾತಾಡೋಣ. ಬಕೆಟ್ ಅಂದರೆ ಏನು ಅಂತ ತಿಳಿದುಕೊಳ್ಳುವ ಕುತೂಹಲ ನನಗಿದೆ.

    ReplyDelete
  4. ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

    ReplyDelete
  5. ಗೂಡೂ ಸಹ ಹಕ್ಕಿಗಾಗಿ ಕಾಯುವದೆ? ಸುಂದರವಾದ ಕಲ್ಪನೆ.
    http://www.interiordesignersbangalore.com
    http://www.interiordesignersinbangalore.com
    http://www.architectsbangalore.com
    http://www.seekangroup.com
    http://www.architectsban.webs.com

    ReplyDelete