Saturday, May 19, 2007

. . . . . ಏನರ್ಥ...?

ಮುತ್ತಿರುವ ಸಾಗರದಿ ಮುಳುಗಹೊರಟಿರುವಾಗ

ನೀರಿಗಂಜುವ ಮನಕೆ ಏನರ್ಥ...?

ಮುಂದಿರುವ ಬೆಳಕನ್ನೆ ನೋಡುತ್ತ ನಡೆವಾಗ

ಬೆಂಬಿಡದ ನೆರಳಿಗೆ ಏನರ್ಥ...?

ಮನಸು ಮಾತಿನ ಶರಣು ಹೋಗಹೊರಟಾಗೆಲ್ಲ

ಬಿಡದೆ ಕಾಡುವ ಮೌನಕೇನರ್ಥ...?

4 comments:

Anveshi said...

"ಮನಸು ಮಾತಿನ ಶರಣು ಹೋಗಹೊರಟಾಗೆಲ್ಲ
ಬಿಡದೆ ಕಾಡುವ ಮೌನಕೇನರ್ಥ...?"

ಮೌನವೇಕೆ ಕಾಡಬೇಕು?
ಹಾಗಂದ್ರೆ ಏನರ್ಥ !!!

Shree said...

ಅರ್ಥಗಳನ್ನು ಹುಡುಕಿ ಹೊರಟಾಗ ಎಲ್ಲದರಲ್ಲೂ ನೂರಾರು ಅರ್ಥ ಕಾಣ್ತದೆ ಅಲ್ವಾ ಅನ್ವೇಷಿಗಳೆ? ಅಸತ್ಯದ ಜತೆ ಅರ್ಥಾನೂ ಹುಡುಕಿ..!! :p

Enigma said...

:) arthanartahgala amdya jeevana

Shiv said...

ಮಾತಿಗೂ ಮೌನಕೂ ಇರುವ ಅಂತರವೆಂದರೆ ಬಹುಷಃ ಮಾತಿನಲ್ಲಿ ಮೌನದ ಭಾವವನ್ನು ಹೇಳಲಾಗುವುದಿಲ್ಲ. ಆದರೆ ಮೌನದಲ್ಲಿ ಮಾತು ಸಾಧ್ಯ..