*************************
ಕೇಳದೇ ಇದ್ದಿದ್ದು
ನೂರಾರು ಕೊಟ್ಟು
ಕೇಳಿದ್ದೊಂದೂ ಕೊಡದೆ
ಆಟವಾಡಿಸುವ ಬದುಕಿಗೆ
ಕೊನೆಯದಾಗಿ ಕೇಳಿದ್ದು
ನಿನ್ನನ್ನು...
ಕೇಳದೆ ಇದ್ದಿದ್ದು
ನಿನ್ನನ್ನು...
***************************
ಇಲ್ಲಿರುವುದೆಲ್ಲ ಕೋಮಾಗಳೇ...
ಎಂದು ತಿಳಿದೂ ತಿಳಿದೂ
ಒಂದೇ ಒಂದು
ಪೂರ್ಣವಿರಾಮ
ಕಾಣುವಾಸೆ
ಕೋಮಾದೊಡನೆ
ಮುಂದೆ ಹೋಗಲೇ ಬೇಕು
ಪೂರ್ಣವಿರಾಮದೊಡನೆಯೂ
ಮುಂದೋಡುವಾಸೆ!!!
**********************
6 comments:
ಬದುಕು ಅಷ್ಟೊಂದು ಗೊಂದಲ ಅನ್ನಿಸುತ್ತ.....
ಗೆಳೆಯ,
ಕೋಮಾ ok;
ಪೂರ್ಣವಿರಾಮ ಯಾಕೆ?
ಕೊನೆಯದಾಗಿ ಕೇಳಿದ್ದು
ನಿನ್ನನ್ನು...
ಕೇಳದೆ ಇದ್ದಿದ್ದು
ನಿನ್ನನ್ನು...
SAlugaLu tumba manassige tumba hiDisidavu.
Rohini Joshi
HanigaLu ishtavadavu... tumba chennagi mooDi bandive...
ಹೌದು ರಾಧ!
ಸುನಾಥ, ಕೋಮಾ ಸಾಕು, ಪೂರ್ಣವಿರಾಮ ಬೇಕು, ಅಷ್ಟೆ...! :)
ಅಶ್ವಿನಿ, ರೋಹಿಣಿ, ಧನ್ಯವಾದ :)
"ಎರಡು ಹನಿಗಳು" ಏನನ್ನೂ ನೇರ ಹೇಳದೆಯೇ ನೂರುಮಾತುಗಳ ಹೇಳಿವೆ. ಇಂತಹ ಹನಿಗಳಿಗೆ ಪೂರ್ಣವಿರಾಮ ಬೀಳದಿರಲಿ.
Post a Comment