Saturday, October 25, 2008

ದೇವರು ಹೆಚ್ಚಿದ ದೀಪ...


ಮಾನವನೆದೆಯಲಿ ಆರದೆ ಉರಿಯಲಿ
ದೇವರು ಹೆಚ್ಚಿದ ದೀಪ
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ

ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ
ಕೆನ್ನೆಯ ಸವರುವ ಪ್ರೀತಿ
ಇರಿಯುವ ಮುಳ್ಳಿನ ನಡುವೆಯೆ ನಗುವುದು
ಗುಲಾಬಿ ಹೂವಿನ ರೀತಿ...

ಉರಿಯನು ಕಾರುವ ಆಗಸ ತಾರದೆ
ತಂಪನು ತೀಡುವ ಮಳೆಯ?
ಲಾವಾರಸವನು ಕಾರುವ ಧರೆಯೇ
ನೀಡದೆ ಅನ್ನದ ಬೆಳೆಯ?

ಹಮ್ಮು ಬಿಮ್ಮುಗಳ ಮರುಳುಗಾಡಿನಲಿ
ಎಲ್ಲೋ ತಣ್ಣನೆ ಚಿಲುಮೆ
ತಾಪವ ಹರಿಸಿ ಕಾಪಾಡುವುದು
ಒಳಗೇ ಸಣ್ಣಗೆ ಒಲುಮೆ...
- ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ನಿಮ್ಮ ಮನೆ-ಮನಗಳಲ್ಲಿ ಹೊಸಬೆಳಕು ಚೆಲ್ಲಲಿ,
ಬೆಳಕಿನ ಹಬ್ಬದ ಶುಭಾಶಯಗಳು

5 comments:

Unknown said...

ಜಗದಲ್ಲೆಲ್ಲಾ ತುಂಬಿದೆ ಅಜ್ಞಾನದ ತಿಮಿರಾಂಧಕಾರ
ಅರಿವನು ಮೂಡಿಸಲು ರೂಪಿಸುವ, ದೀಪಗಳ ಹಾರ
ಕತ್ತಲೆ, ದೌರ್ಜನ್ಯ, ಮೋಸ, ಅಟ್ಟಹಾಸಗಳು ಮೇರೆ ಮುಟ್ಟುತಿಹ ಕಾಲ
ಬೆಳಕು, ಶಕ್ತಿ, ಜ್ಞಾನ, ನ್ಯಾಯಗಳ ಜಗಕೆ ನೀಡಿ ಜಗವ ಉದ್ಧರಿಸುವ ಕಾಲ

ಉಪಶಮಿತ ಮೇಘನಾದಂ
ಪ್ರಜ್ವಲಿತ ದಶಾನನಂ ರಮಿತರಾಮಂ|
ರಾಮಾಯಣಮಿದಂ ಸುಭಗಂ
ದೀಪದಿನಂ ಹರತು ವೋ ದುರಿತಂ||

ज्यॊत से ज्यॊत जलाते चलो
प्रेम की गंगा बहाते चलो
राह में आये जो दीन दुःखी
सब को गले से लगाते चलो

दीपावली की बहुत बहुत हार्दिक शुभकामानायें, ये दिवाली आपके जीवन में सुख समृद्धि लाये, हर तरफ हरियाली हो, हर तरफ प्यार की बरसात हो, भाईचारा बना रहे, शांती हो

Lakshmi Shashidhar Chaitanya said...

ನಿಮಗೂ ದೀಪದ ಹಬ್ಬದ ಹಾರ್ದಿಕ ಶುಭಾಶಯಗಳು.

sunaath said...

ಶ್ರೀ,
ದೀಪಾವಳಿಯ ಶುಭಾಶಯಗಳು.

ಹರೀಶ ಮಾಂಬಾಡಿ said...

ಶುಭಾಶಯ

Anonymous said...

ಗೂಡೂ ಸಹ ಹಕ್ಕಿಗಾಗಿ ಕಾಯುವದೆ? ಸುಂದರವಾದ ಕಲ್ಪನೆ.
http://www.interiordesignersbangalore.com
http://www.interiordesignersinbangalore.com
http://www.architectsbangalore.com
http://www.seekangroup.com
http://www.architectsban.webs.com as