Saturday, April 18, 2009

ಅಕ್ಕಿ ಬೆಲೆ ಯಾಕೆ ಗಗನಕ್ಕೇರಿದೆ ?


ಅಕ್ಕಿ ಬೆಲೆ ಯಾಕೆ ಗಗನಕ್ಕೇರಿದೆ ಎಂಬ ಪ್ರಶ್ನೆಗೆ ಇದಕ್ಕಿಂತ ಉತ್ತಮ ಉತ್ತರ ಬೇರಿಲ್ಲವೇನೋ!
ಬಿಗ್ ಬಜಾರ್ ಮಾತ್ರವಲ್ಲ, ಎಲ್ಲಾ ಸೂಪರ್ ಮಾರ್ಕೆಟ್ಟುಗಳದೂ ಇದೇ ಕಥೆ. ಅವರೆಲ್ಲ ಸೇರಿಕೊಂಡು ಸಾವಿರಗಟ್ಟಲೆ ಟನ್ ಖರೀದಿಸಿ ಸ್ಟಾಕ್ ಇಟ್ಟುಕೊಂಡರೆ ಶಾರ್ಟೇಜ್ ಆಗದೆ ಇರುತ್ತದೆಯೇ? ಬೆಲೆ ಏರದಿರುತ್ತದೆಯೇ?
ಇದು ಹೊಸಾ ವಿಷಯವೇನಲ್ಲ. ಆದರೆ public ಆಗಿ ಈರೀತಿ ಕಂಪೆನಿಯೊಂದು ತನಗೆ ಗೊತ್ತಿಲ್ಲದೆಯೇ ಒಪ್ಪಿಕೊಂಡಿದ್ದು ಇದೇ ಮೊದಲು.
ಇದು ಅತಿಕೆಟ್ಟ ಜಾಹೀರಾತಿಗೆ ಕೂಡ ಉದಾಹರಣೆ ಅಂತ ನನ್ನ ಅಭಿಪ್ರಾಯ. ನೀವೇನಂತೀರಿ?

5 comments:

Ittigecement said...

ಶ್ರೀ....

ನಿಮ್ಮ ಮಾತು ನೂರಕ್ಕೆ ನೂರು ಸರಿ....
ಇದು ಕಾಳಸಂತೆಯಲ್ಲಿ ಧಾನ್ಯವನ್ನು ಬಚ್ಚಿಟ್ಟ ಹಾಗಲ್ಲವೆ..?
ಇದನ್ನೇ ಬೇರೆ ಯಾರಾದರೂ ಖಾಸಗಿ ವ್ಯಕ್ತಿ ಮಾಡಿದ್ದರೆ...
ಕ್ರಮ ಕೈಗೊಳ್ಳುತ್ತಿದ್ದರಲ್ಲವೆ...?

ಇವರ ಮೇಲೇಕೆ ಇಲ್ಲ....?

ಹರೀಶ ಮಾಂಬಾಡಿ said...

ಬಿಗ್ ಬಜಾರ್ ಅಥವಾ ಅಂಥ ಮಾರ್ಕೆಟ್ನಲ್ಲಿ ಅಕ್ಕಿ ಖರೀದಿಸಲು ಜನ ಮುಗಿಬೀಳುವಂತೆ ಮಾಡಲೆಂದೇ ಇಂಥ ಬಿಗ್ ಖರೀದಿ. ಇಲ್ಲಿ ಯಾರ ಜೇಬಿಗೆ ಭಾರ ಆಗುವುದಿಲ್ಲ? ಕೇವಲ ನಗರ ಪ್ರದೇಶದವರದು ತಾನೇ. ಹಾಗಾದರೆ ಸೆಮಿ ಅರ್ಬನ್ ಮತ್ತು ಹಳ್ಳಿ ಪ್ರದೇಶದವರೆಲ್ಲಾ ಕಿರಾಣಿ ಅಂಗಡಿಗೆ ಹೋಗಿ ಅಕ್ಕಿ ಖರೀದಿಸಬೇಕು. ಅದೂ ದುಬಾರಿ ದರ ಕೊಟ್ಟು.!

ನಾನು ಈಗಸ್ಟೇ ಪತ್ರಿಕೆಯಲ್ಲಿ ಬಿಜೆಪಿಯವರದ್ದು ಜಾಹೀರಾತು ನೋಡಿದೆ. ಅಲ್ಲೂ ಅಕ್ಕಿಯದ್ದೇ ಕಥೆ. ಅವರದ್ದು ರಾಜಕೀಯ ಬಿಡಿ.!
ಜಾಗತೀಕರಣಕ್ಕೆ ಬಲಿಯಾಗುತ್ತಿರುವ ಮತೊಂದು ಉದಾಹರಣೆ ಇದು. ಆದರೆ ಮಹಾ ಮಹಾ ಸೋಶಲಿಸ್ಟರೂ ಸಿಟಿಯೊಳಗೆ ಇದ್ದು ಬಿಗ್ ಬಜಾರ್ ನಲ್ಲೇ ಅಕ್ಕಿ ತಗೋತಾರೆ. ಸೋತುಹೋಗುವುದು ನನ್ನಂಥ ಹಳ್ಳಿ ಜನ.

ಸಂದೀಪ್ ಕಾಮತ್ said...

26,000 ಅಕ್ಕಿಯನ್ನು ಅವರು ಪ್ರತಿವರ್ಷ ಖರೀದಿಸುತ್ತಾರೆ . ನಮ್ಮ ಜೇಬಿಗೆ ಭಾರವಾಗಲೆಂದು!!


ಒಳ್ಳೆಯ ಅನಾಲಿಸಿಸ್ ಶ್ರೀ.

Shrinidhi Hande said...

I elaborated a bit on your post and published a post here at my blog

http://www.enidhi.net/2009/04/rice-price-rise-big-bazaar-ad.htmlI've given credit to you. Hope you've no objections.

raju said...

ಸತ್ಯ ಹೇಳಿದ್ದಾರೆ. ಒಪ್ಪಿಕೊಳ್ಳಲೇ ಬೇಕು