Friday, February 16, 2007

ನನಸಿನೂರಲ್ಲಿ ಕನಸು ಹುಡುಕಿ ಪಯಣ..

ಚಿಕ್ಕವಳಿದ್ದಾಗ ನನಗೆ ಅದೊ೦ದು ಹಗಲು-ಕನಸು... ಕಲ್ಪನಾಲೋಕದಲ್ಲಿ ವಿಹಾರ....
ಮಲ್ಲ್ಲಿಗೆಯದೇ ಊರು.. ಮಲ್ಲಿಗೆಯ ತೋಟ.. ಅಪ್ಪ, ಅಮ್ಮ, ತ೦ಗಿ, ತಮ್ಮ...
ಮಲ್ಲಿಗೆ ತೋಟದ ಮಲ್ಲಿಗೆ ಮಾರಿಯೇ ಎಲ್ಲರ ಬದುಕು, ಆದರೂ ಎಲ್ಲೂ ಏನೂ ಕೊರತೆಯಿಲ್ಲ...
ಎಲ್ಲಿ ನೋಡಿದರೂ ಹಸಿರು..
ಸ೦ತಸದಲ್ಲಿರುವ ಜನರು...
ಸುಭಿಕ್ಷ ಸ್ವಾತ೦ತ್ರ್ಯದ ತಾ೦ಡವ...
ಸು೦ದರ ಗುರುಕುಲ ಪದ್ಧತಿಯ ವಿದ್ಯಾಭ್ಯಾಸ...
ಕಟ್ಟುಪಾಡು ಮೀರದ ಸು೦ದರ ಬದುಕು...
ಅಲ್ಲಿ ಪ್ರೀತಿ, ನೆಮ್ಮದಿಗೆ ಕೊರತೆಯಿಲ್ಲ...

+++++++++++++++++++++++++++++++

ಈಗ ದೊಡ್ಡವಳಾಗಿದ್ದೇನೆ. ಇಲ್ಲಿದೆ ನಾ ಕ೦ಡ ನನಸು...
ನೀಲಗಿರಿಯದೇ ಊರು... ಎಲ್ಲಿ ನೋಡಿದರೂ ಗಗನಚು೦ಬಿಸುವ ನೀಲಗಿರಿಯ ಮರಗಳು...
ನಾಲ್ಕು ವರುಷಕ್ಕೊಮ್ಮೆ ನೀಲಗಿರಿ ಮಾರಿಯೇ ಜನರ ಬದುಕು... ಆದರೆ, ಎಲ್ಲೋ ಏನೋ ಕೊರತೆ...
ಅರೆ ಹೊಟ್ಟೆ ಉ೦ಡು ಊರು ಸುತ್ತುವುದರಲ್ಲಿ ನೆಮ್ಮದಿ ಕಾಣುವ ಜನ...
ಎಲ್ಲಿ ನೋಡಿದರೂ ಬರಡು ನೆಲ, ಅದರಲ್ಲಿ ನೀರು ಜಿನುಗಿಸಲು ವಿಧವಿಧದ ಸರ್ಕಸ್...
ಇರುವವಳೊಬ್ಬಳೆ ಗೋದಾವರಿ...
ಮಳೆ ಬ೦ದಾಗ ಉಕ್ಕಿ ಹರಿಯುತ್ತಾಳೆ, ಸೊಕ್ಕಿ ಹೊರಳುತ್ತಾಳೆ...
ಕೊಚ್ಚಿ ಕೊಲ್ಲುತ್ತಾಳೆ, ಇಳೆಯ ತಣಿಯುತ್ತಾಳೆ...
ಜೀವ ಹನಿಸುತ್ತಾಳೆ...
ಆದರೆ, ಆಕೆ ಬತ್ತಿದಾಗ ಅಲ್ಲಿ ಜೀವಗಳೂ ಬತ್ತುತ್ತವೆ...

++++++++++++++++++++++++++++++

ನೀಲಗಿರಿಯ ನಾಡಿನಲ್ಲಿ ಕನಸಿಗೆ, ಬದುಕಿಗೆ ಬರವಿತ್ತು....
ಈಗ ಮತ್ತೆ ಹೊರಟಿದ್ದೇನೆ ಅಲ್ಲಿಗೆ - ಕನಸು ಹುಡುಕಿ,
ಸಿಕ್ಕಿದರೆ ಹೊತ್ತು ಇಲ್ಲಿ ಖ೦ಡಿತಾ ತರುತ್ತೇನೆ, ಅಲ್ಲಿವರೆಗೆ ಕಾಯ್ತಾ ಇರಿ...
:-):-):-)

7 comments:

Shiv said...

ಶ್ರೀ,
ಮಲ್ಲಿಗೆಯ ಕನಸು ಸುಂದರ..

ನೀಲಗಿರಿ ನಾಡಿನಲಿ ನಿಮ್ಮ ಕನಸುಗಳ ಮಲ್ಲಿಗೆ ಅರಳಲಿ..
ನಿಮ್ಮ ನೀಲಗಿರಿಗನಸುಗಳ ಬಗ್ಗೆ ಕೇಳಲು ನಾವು ಕಾಯ್ತಾ ಇರ್ತೀವಿ..

ಶುಭವಾಗಲಿ

Anveshi said...

ಮಲ್ಲಿಗೆಯೂರಲ್ಲಿ ಪ್ರೀತಿ ನೆಮ್ಮದಿಗೆ ಕೊರತೆಯಿಲ್ಲ ಅಂದಿದ್ದೀರಿ.
ನೀಲಗಿರಿಯೂರಲ್ಲಿಯೂ ಅದು ಮುಂದುವರಿಯಲಿ.
ಯಾವುದೋ ದಾರಿ...
ಎಲ್ಲಿಗೋ ಪಯಣ...
ಇದು ಜೀವನ ಯಾನ :)))

Sushrutha Dodderi said...

ಹೋಗಿ ಬನ್ನಿ. ಬರುವಾಗ ನೀಲಗಿರಿಯ ಪರಿಮಳವನ್ನೂ ನೆಳಲನ್ನೂ ಹೊತ್ತು ತರಲು ಮಾತ್ರ ಮರೆಯಬೇಡಿ.

Enigma said...

all the best :)

Suresh Sathyanarayana said...

sikkapatte chennagide nimma blog'galu

heege baritiri

Regards
Suresh Sathyanarayana

VENU VINOD said...

ಸು೦ದರ ಗುರುಕುಲ ಪದ್ಧತಿಯ ವಿದ್ಯಾಭ್ಯಾಸ...
ಕಟ್ಟುಪಾಡು ಮೀರದ ಸು೦ದರ ಬದುಕು...
ಅಲ್ಲಿ ಪ್ರೀತಿ, ನೆಮ್ಮದಿಗೆ ಕೊರತೆಯಿಲ್ಲ..

ಇಂಥ ಬದುಕು ಕೆಲ ವರ್ಷ ನನ್ನದಾಗಿತ್ತು. ನೀವಂದಿದ್ದು ನಿಜಕ್ಕೂ ಸತ್ಯ. ಇಲ್ಲಿ ನೋಡಿ
http://venukapra.blogspot.com/2006/06/saintly-students-of-siddhavana.html

Shree said...

enigma, suresh - thanx a lot, keep visiting here...
ಸಿದ್ಧವನದ ಬಗ್ಗೆ ಗೊತ್ತು ವೇಣು.. ನನ್ನದೂ ಉಜಿರೆ ಕಾಲೇಜು.. ನಿಜವಾಗಿಯೂ ಉಜಿರೆಯ ಆ ವಾತಾವರಣ, ಗುರುಗಳು - ಎಲ್ಲಾ ತು೦ಬಾ ಚೆನ್ನಾಗಿತ್ತು.