ಕಾವೇರಿ ಥರಾ ಹೆವಿಡ್ಯೂಟಿ ಸ್ಟಫ್ ಜನಕ್ಕೆ ಹೆಚ್ಚು ಇಷ್ಟ ಆಗಲ್ಲ ಅ೦ತ ತಿಳೀತು ಬಿಡಿ.
ಆದ್ರೆ ಒ೦ದು ವಿಷಯ ಗೊತ್ತಾ, ಇದು ಕನಸುಗಳಿಗೋಸ್ಕರ ಕಟ್ಕೊ೦ಡ ಬ್ಲಾಗ್, ಕನಸು ಬಿಟ್ಟು ಇನ್ನೆಲ್ಲಾ ಇದೆ ಇದರಲ್ಲಿ..!!! ಯಾಕೆ.... ಅ೦ತ ನ೦ಗೇ ಅರ್ಥ ಆಗ್ತಿಲ್ಲ...!!!
ಬಹುಷ: ಕನಸು ಖಾಲಿ ಆಗಿದೆ, ಅಥವಾ ಹೇಳ್ಕೋಬೇಕು ಅನ್ಸ್ತಿಲ್ಲ... ಎರಡರಲ್ಲಿ ಒ೦ದು ನಿಜ.
6 comments:
ನಿಮಗೆ ನೆನಪಿರಬೇಕು ಅಂದುಕೊಂಡಿದ್ದೇನೆ. ಕನಸು ಕಾಣುತ್ತಲೇ ಇರಬೇಕು. ನಾಳೆಯ ಬಗ್ಗೆ ಕನಸುಗಳು ನಮ್ಮನ್ನು ತುಂಬಿರಬೇಕು ಎನ್ನುವ ಮಾತು.
ನಾನು ಕನಸು ಕಾಣುವುದನ್ನು ತಪ್ಪಿಸುವುದಿಲ್ಲ. ನನ್ನ ಬ್ಲಾಗ್ ಅಷ್ಟೇ ಕನಸು ಯೋಚನೆಗಳನ್ನು ತುಂಬಿಸಲು ಕಟ್ಟಿದ್ದು. ಇಲ್ಲಿ ಎಲ್ಲರಿಗಿಂತ ಎತ್ತರ ನಾನು ಬೆಳೆಯಬೇಕು ಎನ್ನುವ ಕನಸು ಹೊಂದಿದ್ದೇನೆ.
ನಮ್ಮೊಳಗಿನ ಕನಸುಗಳಿಗೆ ಅಕ್ಷರದ ರೂಪ ಕೊಡಲು ಇದೊಂದು ಸೂಕ್ತ ವೇದಿಕೆ ಅಂದುಕೊಂಡಿದ್ದೇನೆ. ಹಳೆಯ ಕನಸುಗಳನ್ನು ದಾಟಿ ಹೊಸ ಕನಸುಗಳತ್ತ ಹಾದಿ ಸಾಗಿದೆ ತಾನೇ. ಕನ್ನಡದಲ್ಲಿ ಕುಟ್ಟಲು ಹೇಳಿ ಕೊಟ್ಟ ನಿಮ್ಮ ಅಂತವರೊಂದಿಗೆ ಜೊತೆ ಬ್ಲಾಗಿನೊಳಗೆ ಭಾವನೆ ಹಂಚಿಕೊಳ್ಳುವುದೇ ನನ್ನ ಕನಸು.
ಕೋಳಿ ಕೂಗದಿದ್ದರೂ ಪರವಾಗಿಲ್ಲ, ಅಲರಾಂ ಬಡಿಯದಿದ್ದರೂ ಪರವಾಗಿಲ್ಲ ಕನಸು ಕಾಣೋನ. ನನಸು ಮಾಡೋಣ.
ಇಲ್ಲಿ ಸ್ವಲ್ಪ ದಿನದ ಹಿಂದೆ ಕಾವೇರಿ ಹರೀತಾ ಇದ್ಲಲ್ವ? ಮಾಯ ಆಗ್ಬಿಟ್ಲಾ? ಎಲ್ಲಿ? ಏಕೆ? ಹೇಗೆ? ಯಾರಿಂದ? ಯಾರಿಗಾಗಿ? ಸಂದರ್ಭ ಸಹಿತ ವಿವರಿಸಿ:-))
@ರಾಧಾ-
ನಿಜ ಕಣ್ರೀ.. ಅದ್ಕೇನೆ ಈ ಬ್ಲಾಗ್ ಬರೀ ಕನಸಿಗೇ ರಿಸರ್ವ್ ಅ೦ತ ನಿರ್ಧಾರ ಮಾಡಿದ್ದೇನೆ.
@ಜಗಲಿ ಭಾಗವತ
ಕಾವೇರಿ ಹರೀತಾ ಇರ್ತಾಳೆ, ಅವಳು ಶಿಫ್ಟ್ ಆಗ್ಬಿಟ್ಟಿದ್ದಾಳೆ ತಮಿಳ್ನಾಡಿಗಲ್ಲ, ನನ್ನ ಇನ್ನೊ೦ದು ಬ್ಲಾಗ್ ಗೆ!! :-)
ಈ ಬ್ಲಾಗ್ ಕನಸಿಗೆ ರಿಸರ್ವ್ ಮಾಡಿಡ್ಬೇಕು ಅ೦ದ್ಕೊ೦ಡಿದ್ದೇನೆ...
ಹೌದು ಹೌದು, ಕನಸಿಗೊಂಡು ಬ್ಲಾಗು ಇರಲಿ.
ಕನ್ನಡದ ಧೀಮಂತ ರಾಜಕಾರಣಿಗಳ ಕೃಪಾಕಟಾಕ್ಷದಿಂದ ಕಾವೇರಿ ನಮ್ಮೂರಿಗೆ ಬಂದಿದ್ದಾಳೆ. ಏನೂ ಹೆದರ್ಬೇಡಿ, ಚೆನ್ನಾಗಿ ನೋಡ್ಕೋತೀವಿ. :)
ಸರಿಯಪ್ಪ. ಕಾವೇರಿ ಎಷ್ಟ೦ದ್ರೂ ನಿಮ್ಮವಳು ತಾನೆ? :-)
ಕನಸು ಎಂದರೇನು? ಎಚ್ಚರದ ಸ್ಥಿತಿಯಲ್ಲಿ ಮನದ ಚಿಂತನೆ ಪೂರ್ಣವಾಗದೇ ಇದ್ದರೆ, ಅದು ಕನಸಿನ ಮೂಲಕ ವ್ಯಕ್ತವಾಗುವುದಂತೆ (ಎಲ್ಲಿಯೋ ಓದಿದ್ದು). ಬಹುಶಃ ನಿಮಗೆ ಅಂದಿನ ಚಿಂತನೆಗಳೆಲ್ಲಾ ನಿದ್ರೆ ಬರುವ ಮೊದಲೇ ಸಂಪೂರ್ಣವಾಗುತ್ತಿರಬೇಕು.
ಆದರೂ ನಮ್ಮ ಮನಗಳನ್ನು ತಣಿಸಲು ಏನಾದರೂ ಬರೆಯುತ್ತಿರಿ. ಈ ಬ್ಲಾಗು ನಿಮ್ಮ ಕನಸುಗಳಿಗೆ ಮಾತ್ರ ಸೀಮಿತವಾಗಿರುವುದು ಬೇಡ. ನಾನು ಈಗೀಗ ಪ್ರತಿನಿತ್ಯ ಒಂದು ಸುತ್ತು ಸುತ್ತುವಾಗ ಈ ಮನೆಗೂ ಬಂದು ಹಣಿಕಿ ನೋಡುತ್ತಿರುವೆ.
ಬರಹ ಕಾಯಕ ಅನವರತ ಸಾಗುತ್ತಿರಲಿ.
ಒಳ್ಳೆಯದಾಗಲಿ
Post a Comment