Tuesday, January 30, 2007

ಇದು ಭಾರೀ ಸ್ಪೆಷಲ್ ಏನಲ್ಲ...

ಇದು ಭಾರೀ ಸ್ಪೆಷಲ್ ಏನಲ್ಲ, ಆದ್ರೂ ಹೇಳ್ಬೇಕು ಅನಿಸ್ತಿದೆ..:-)
ಬೆಳಿಗ್ಗೆ ಬೇಗ ಏಳ್ಬೇಕು ಅ೦ತ ದಿನಾ ಅ೦ದುಕೊಳ್ಳುತ್ತಿರುತ್ತೇನೆ... ಅಲಾರಂ ಇಟ್ಟು ಮಲಗಿರುತ್ತೇನೆ. ಆದರೆ,ಅದ್ಯಾಕೋ, ಬೆಳಿಗ್ಗೆ ಅಲಾರಂ ಹೊಡೆದುಕೊಂಡಿದ್ದೇ ಗೊತ್ತಾಗುವುದಿಲ್ಲ. ಚಿಕ್ಕವಳಿದ್ದಾಗ ಪರೀಕ್ಷೆಯ ದಿವಸ (ಪರೀಕ್ಷೆಯ ದಿವಸ ಮಾತ್ರ:-)) ಬೆಳಿಗ್ಗೆ ನಾಲ್ಕು ಘ೦ಟೆಗೆ ಎದ್ದು ಓದ್ತಿದ್ದ ದಿನಗಳು ನೆನಪಾದ್ರೆ ... ನಿಜವಾಗ್ಲೂ ನಾನೇನಾ.. ಅನಿಸ್ತಿದೆ..
ಈಗ ಟಿವಿಗೇ ಅಲಾರ೦ ಇಟ್ಟು ಮಲಗುತ್ತಿದ್ದೇನೆ. ನನ್ನ ದಿನ ಆರ೦ಭ ಮಾಡುವ channel - NDTV/ CNNIBN/ CNBC TV 18/ NDTV PROFIT - ಹೀಗೆ rotate ಆಗುತ್ತಿರುತ್ತದೆ.
ಅ೦ತೂ ಇ೦ತೂ ಎದ್ದು ನ್ಯೂಸ್ ಪೇಪರ್ ತೆಗೆದುಕೊಂಡು ಬ೦ದೆನೆ೦ದರೆ ಬಚಾವ್, ನಿದ್ದೆ ದೂರ ಓಡುತ್ತಾಳೆ... ದಿನ ಸಾ೦ಗವಾಗಿ ಮು೦ದೆ ಹೋಗುತ್ತದೆ.
ಕೆಲವರದಾದರೂ ದಿನ ಇದೇ ರೀತಿ ಆರ೦ಭ ಆಗ್ತಿರಬೇಕೇನೋ..?
ಹಾ೦. ಈ ದಿನಚರಿ break ಆಗಿದ್ದು ಇತ್ತೀಚೆಗೆ ಕೆಲಸದ ಮೇಲೆ ಭದ್ರಾಚಲ೦ಗೆ ಹೋಗಿದ್ದಾಗ. ಕೆಲಸದ ಪ್ರಯುಕ್ತ ದಿನವಿಡೀ ಪ್ರಯಾಣ ಮಾಡಿ, ರಾತ್ರಿ ೧೨ಕ್ಕೆ ಮಲಗಿ ಬೆಳಿಗ್ಗೆ 3ಘ೦ಟೆಗೆ ಎದ್ದು ಮತ್ತೆ ಹೊರಟಿದ್ದೂ ಇದೆ.. ಈಗ ಎಲ್ಲಾ ಕನಸು, It's unbelievable...
Now I'm back to square..!!! ಎ೦ದಿನ ಹಾಗೆ, 7 ಘ೦ಟೆ.. ಅಲಾರ೦, ಟಿವಿ, ನ್ಯೂಸ್ ಪೇಪರ್, ಚಹಾ.. ಮತ್ತೆ ಹೊಸ ದಿನ...

18 comments:

Mahesh said...

Anthu neevu nam taraha suddigagi arasutha iddeeri alva.

ಅಸತ್ಯ ಅನ್ವೇಷಿ said...

ಶ್ರೀ ಅವರೆ,
ನೀವು ಏಳು ಗಂಟೆಯನ್ನೇ ಏಳೋ ಗಂಟೆಯಾಗಿಸುವ ಪರಿಪಾಠ ಬೆಳೆಸಿಕೊಂಡಿದ್ದೀರಿ.

ಬೆಳಗ್ಗೆ ಬೇಗ ಹೇಗೆ ಏಳಬೇಕು ಅನ್ನುವುದರ ಬಗ್ಗೆ ಒಂದು ಸಲಹೆ. ಪ್ರಯತ್ನಿಸಿ ನೋಡಿ.

ಏನೆಂದರೆ, ಯಾವಾಗಲೂ ನೀವು ಅಲಾರಂ ಆನ್ ಮಾಡೋದು ರಾತ್ರಿಯಲ್ವಾ? ಬೆಳಗ್ಗೆ ಅದು ಹೊಡೆದುಕೊಂಡ ತಕ್ಷಣ ಆಫ್ ಮಾಡ್ತೀರಲ್ವಾ. ಹಾಗಾಗಿ ಏಳೋದು ತಡವಾಗುತ್ತೆ.

ಅದಕ್ಕಾಗಿ, ಬೆಳಗ್ಗೆಯೇ ಅಲಾರಂ ಆನ್ ಮಾಡಿ, ರಾತ್ರಿ ಆಫ್ ಮಾಡಿ!!! :)

SHREE said...

@Mahesh...
ಸುದ್ದಿಮಾಧ್ಯಮದಲ್ಲಿ ಕೆಲಸ ಮಾಡಿದವರದೆಲ್ಲಾ ಇದೇ ಹಣೆಬರಹ...!!!
@ಅಸತ್ಯ...
tried n' tested method.. is it? :-)

ಅಸತ್ಯ ಅನ್ವೇಷಿ said...

No tried and tired method !!

Jagali Bhagavata said...

ಒಂದು ಕೋಳಿ ಸಾಕ್ಕೊಳ್ಳಿ. ಬೆಳಿಗ್ಗೆ ೬ ಗಂಟೆಗೆ ಎಬ್ಬಿಸತ್ತೆ:-))Just kidding.

ರಾಧಾಕೃಷ್ಣ ಆನೆಗುಂಡಿ. said...

ಕೋಳಿ ಸಾಕುವ ಸಲಹೆ ಚೆನ್ನಾಗಿದೆ.
ಕೋಳಿಗೆ ವಯಸ್ಸಾದ ಮೇಲೆ ನಮ್ಮ ಮನೆಗ ಕಳುಹಿಸಿ ಕೊಡಿ. ಹೊಸ ದಿನ..... ಅಂದ ಹಾಗೆ ಮತ್ತೆ........
ಹೊಸ ಕೋಳಿ.
ಹಳೆ ಕೋಳಿಯ ಕಥೆ ನಮ್ಗೆ ಬಿಡಿ

ಅಸತ್ಯ ಅನ್ವೇಷಿ said...

ಏನಿದು... ಜಗಲಿಯಲ್ಲಿ ಭಾಗವತರು ಮತ್ತು ರಾಧಾಕೃಷ್ಣರು ಸೇರಿ ಆನೆಗುಂಡಿಯಲ್ಲಿ ಕೋಳಿ ಹೂತುಹಾಕುವ ಯೋಜನೆ ರೂಪಿಸ್ತಾ ಇದ್ದಾರಲ್ಲಾ...?

ಕೋಳಿ.. ನಮ್ ನಮ್ ಹೊಟ್ಟೆಯೊಳಗೇ ಇದ್ರೆ ಯಾವತ್ತೂ ಎಬ್ಬಿಸತ್ತೆ ಅನ್ನೋ ಸಂಶೋಧನೆಯೇ?

SHREE said...

ಸಲಹೆಗೆ ಧನ್ಯವಾದ ಭಾಗವತರೆ... :-) ಆದ್ರೇನ್ಮಾಡ್ಲಿ.. ನಾನು ನನ್ನನ್ನ ಸಾಕ್ಕೊಳ್ಳಕ್ಕೇ ಕಷ್ಟ ಪಡ್ತಿದೀನಿ, ಇನ್ನು ಕೋಳಿ ಹೇಗೆ ಸಾಕ್ಲಿ ಸಾರ್!!!!

ರಾಧಾ, ಕೋಳಿ ತಿನ್ನೋದಕ್ಕೆ ಆಶೆ ಆಗ್ತಿದ್ರೆ ತಿನ್ನಪ್ಪಾ.. ಓಸಿ ಹೊಡ್ಯೋ ಆಲೋಚನೆ ಯಾಕೆ?:-)

ಸುಶ್ರುತ ದೊಡ್ಡೇರಿ said...

ಥೋ.. ಯಾಕ್ರೀ ಎಲ್ರೂ ಇಲ್ಲಿ ಸೇರ್ಕೊಂಡು ಕೋಳಿ ಜಗಳ ಮಾಡ್ತಿದೀರ..? ಹೋಯ್, ಇವತ್ತಷ್ಟೇ ಬಂದೆ ಇಲ್ಲಿಗೆ. ಬ್ಲಾಗ್ ಚೆನ್ನಾಗಿದೆ.

md said...

"ಇದೇನೂ ಭಾರಿ ಸ್ಪೆಷಲ್ ಏನಲ್ಲ್" ಅಯ್ಯೋ ಹಾಗನ್ನಬೇಡ್ರಿ.
ಕೋಳಿ ಕೂಗಿಗೆ ನೀವು ಏಳದೆ ಹೋದ್ರೂ ಪರವಾಗಿಲ್ಲ. ಆದರೆ ಆ ಕೋಳಿಗೆ ವಯಸ್ಸಾದ ಮೇಲೆ ನಮ್ಮಲ್ಲಿ ಯಾರಿಗಾದರೂ ಕೊಟ್ಟು ಬಿಡಿ. ಆ ಕೋಳಿ ಜನುಮ ಸಾರ್ಥಕವಾಗುತ್ತೆ (ನಿಮಗೆ ಏಳಿಸುವ ಪ್ಲಾನ್ ಅಂತೂ ಫ್ಲಾಪ್ ಆಗಿರುತ್ತೆ).
ನಾನೂ ಕೂಡ ಇವತ್ತಷ್ಟೆ ಬಂದೆ ಇಲ್ಲಿಗೆ, ಬ್ಲಾಗ್ ನಿಜವಾಗ್ಲೂ "ಭಾರಿ ಸ್ಪೆಷಲ್" ಆಗಿದೆ

ರಾಧಾಕೃಷ್ಣ ಆನೆಗುಂಡಿ. said...

ಕನ್ನಡದಲ್ಲಿ ಕುಟ್ಟುವ ಮನಸ್ಸು ಕನ್ನಡ ಕಟ್ಟಲು ಕೋಳಿ ಜಗಳದಲ್ಲಿಯಾದರೂ ಒಂದೇ ಕಡೆ ಸೇರಿದೆಯಲ್ಲ. ಖುಷಿಪಡಿ ಮಾರಾಯರೇ.

ಸುಮ್ಮನೇ ಟೀಕಿಸಬೇಡಿ ಕೋಪ ಬಂದರೆ ಶ್ರೀ ಮನೆಯಿಂದ ಕೋಳಿ ಕಂದುಕೊಂಡು ಹೋಗಬೇಕಾಗುತ್ತದೆ. ಬೆಳ್ಳಿಗೆ ಬೇಗ ಏಳದಿದ್ದರೆ ಪರವಾಗಿಲ್ಲ. ಕಚೇರಿ ಸಮಸ್ಯೆ ಅವರಿಗೆ ತಾನೇ.
ಕೋಳಿ ಸಾಂಬಾರಿನ ದಿನ ಹತ್ತಿರ ಬಂದಾಗ ತಿಳಿಸುತ್ತೇನೆ. ಪರಿಮಳ ಬಂದರೆ ನೀವೇ ಬನ್ನಿ. ಶ್ರೀ ಯವರಿಗೆ ದಯವಿಟ್ಟು ಹೇಳಬೇಡಿ. ಹೇಳಿದರೆ.... ಕೋಳಿಯಾಣೆ... ನನಗೊತ್ತಿಲ್ಲ.

SHREE said...

ಸುಶ್ರುತ, ಧನ್ಯವಾದ, ಬರ್ತಿರಿ.. ನಿಮ್ಮ ಬ್ಲಾಗ್ ಕೂಡ ಚೆನ್ನಾಗಿದೆ..

MD, ಧನ್ಯವಾದ, ಬ್ಲಾಗಿಗೆ ಸ್ವಾಗತ... ಆಗಾಗ ಹೀಗೆ ಮನಸಿಗೆ ಬ೦ದಿದ್ದು ಕುಟ್ಟುತಿರ್ತೀನಿ, ತಪ್ಪದೆ ಇಲ್ಲಿ ಬರ್ತಾ ಇರಿ..

Jagali Bhagavata said...

ಕೋಳಿ ಸಾಕೋದ್ರಿಂದ ತುಂಬ ಲಾಭ ಇದೆ. 'ಕೋಡಗನ ಕೋಳಿ ನುಂಗಿತ್ತಾ' ಅಂತ ಕೇಳಿದೀರಾ? ಕೋಳಿ ಸಾಕ್ಕೊಂಡು 'ಇಲ್ಲಿ ಕೋಡಗನನ್ನು ನುಂಗಲಾಗುತ್ತದೆ. ಕೇವಲ ನೂರು ರೂಪಾಯಿ' ಅಂತ ಮನೆ ಮುಂದೆ ಬೋರ್ಡ್ ಹಾಕ್ಕೊಳ್ಳಿ. ಒಳ್ಳೆ business ಆಗತ್ತೆ:-)) novel idea, ಒಳ್ಳೆ line of business. ಏನಂತೀರ?
TBTILV - To Be Taken In Lighter Vein

SHREE said...

ಕೋಳಿ ಜಗಳ ಇನ್ನೂ ಮುಗಿದಿಲ್ಲ... ಆದ್ರೆ ಬೆ೦ಗಳೂರಲ್ಲಿ ಈಗ ಕಾವೇರಿ ಬಿಸಿ... ಅದು ಬ್ಲಾಗ್ ಗೂ ಹತ್ತಿದೆ... can't help it!!!

ರಾಧಾಕೃಷ್ಣ ಆನೆಗುಂಡಿ. said...

ಯಾಕೋ ಅತಿಯಾಯಿತು. ಕೋಳಿ ಜಗಳ ಮಾಡಿದರೆ ತಪ್ಪೇನು. ಕಟ್ಟೆ ನಿಮ್ಮದಿರಬಹುದು.

SHREE said...

ತಪ್ಪಲ್ಲ... ಭಾಗವತರು ಭಯ೦ಕರ ಬಿಸಿನೆಸ್ಸ್ ಐಡಿಯ ಹಿಡ್ಕೊ೦ಡು ಬ೦ದಿದ್ದಾರಲ್ಲ.. ನಮ್ಮನೆ ಕಟ್ಟೇಲಿ ಕೋಳಿ ಸಾಕಿ ಬಿಸಿನೆಸ್ಸ್ ಮಾಡಿದ್ರೆ ನಮ್ಮಮ್ಮ ಬೆತ್ತ ಹಿಡಿದು ಓಡಿಸ್ತಾರೆ ಅಷ್ಟೆ..!!!

Enigma said...

alaram ste maadi malagikondu kayige sigde iro jagakke idi. neevu eddu odadi off mado tahar idi :)
but nan tahar nidde maado dare, kastah. nange fire alram fire engien bandrunu chenagi nidde amdthirthene :P

SHREE said...

ದೂರ ಇಟ್ರೆ ಕೇಳೂದಿಲ್ಲ ಮಾರಾಯ್ರೆ.. ಟೀವಿ ದೂರ ಇದ್ದಿದ್ದಕ್ಕೇ ಪ್ರಾಬ್ಲಮ್!!!
ಬ್ಲಾಗ್ ಗೆ ಸ್ವಾಗತ, ಬರ್ತಾ ಇರಿ...:-)