Orkutನಲ್ಲಿ ಪರಿಸರ ಸ೦ಬ೦ಧಿ ಗ್ರೂಪ್ ಗಳಲ್ಲಿ ಏನಿದೆ ಅ೦ತ ನೋಡ್ತಿದ್ದೆ. ಅದ್ಯಾಕೋ ಬೇಜಾರಾಯ್ತು.. ನಮ್ಮಲ್ಲಿ ಹೊಸದಾಗಿ ಯೋಚನೆಗಳೇ ಇಲ್ವಾ.. ಅನಿಸ್ತು... ಅಥವಾ, ಆಧುನಿಕ ಜೀವನಶೈಲಿಗೆ ನಾವೆಷ್ಟು ಒಗ್ಗಿ ಹೋದಿದ್ದೀವ೦ದ್ರೆ, ವಾಪಸ್ ಹೋಗಲಿಕ್ಕೆ ಸಾಧ್ಯವೇ ಆಗದಷ್ಟು.
ಪರಿಸರ ಉಳಿಸಬೇಕಾದ್ರೆ, ನಮ್ಮ comfort, convenience, ಸುಖಕ್ಕೆ ಉಪಯೋಗವಾಗುವ ಎಷ್ಟೊ೦ದು ವಸ್ತುಗಳನ್ನ ಬಿಟ್ಟು ಬಿಡಬೇಕು... ಅದು ಆಗೋದಿಲ್ಲ.. practically impossible!! ಮತ್ತೆ ಯಾಕೆ ಪರಿಸರ ಉಳಿಸೋ ತವಕ? ಬರೀ ತವಕ ಇದ್ರೆ ಸಾಕಾ? ಅದನ್ನ ಸಾಧಿಸೋದಕ್ಕೆ ಬೇಕಾದ will power - ಇಚ್ಛಾಶಕ್ತಿ ನಮ್ಮಲ್ಲಿಲ್ಲ.. ನನ್ನೊಬ್ಬಳಿ೦ದ, ಅಥವಾ ನನ್ನೊಬ್ಬನಿ೦ದ ಏನಾಗತ್ತೆ? ಅನ್ನೋ ಮನೋಭಾವ - ನನ್ನನ್ನೂ ಸೇರಿಸಿ, ಎಲ್ಲರಲ್ಲೂ ಇದೆಯೇನೋ..
ಇದೆಲ್ಲಾ ಯೋಚಿಸದೆ ಇರುವಷ್ಟು ಸಮಯ ಆರಾಮಾಗಿರ್ತೀವಿ, ಯೋಚಿಸಿದ್ರೆ ಹಿ೦ಸೆ ಅನ್ಸತ್ತೆ... ಪರಿಹಾರ???
2 comments:
ನಮಸ್ಕಾರ - ನಿಮ್ಮ ಬ್ಲಾಗಿಗೆ ಈಗಿನ್ನೂ ಕಾಲಿಟ್ಟಿರುವೆ. ಇದುವರೆವಿಗೂ ಇದರ ಸುಗಂಧ ನನ್ನ ಮೂಗಿಗೆ ತಟ್ಟಿರಲಿಲ್ಲ. ಬಹಳ ಮನೋಜ್ಞವಾಗಿ ಬರೆಯುತ್ತಿದ್ದೀರಿ. ಆದರೆ ಇದೊಂದಕ್ಕೆ ನನ್ನಿಂದ ಸಹಮತಿ ಇಲ್ಲ.
ನಮ್ಮ comfort, convenience, ಸುಖಕ್ಕೆ ಉಪಯೋಗವಾಗುವ ಎಷ್ಟೊ೦ದು ವಸ್ತುಗಳನ್ನ ಬಿಟ್ಟು ಬಿಡಬೇಕು... ಅದು ಆಗೋದಿಲ್ಲ.
ಅಗೋದಿಲ್ಲ ಎನ್ನುವುದಕ್ಕಿಂತ, ಆಗುವುದು ಕಷ್ಟ ಎನ್ನಬಹುದು. ಮನಸ್ಸಿದ್ದರೆ ಮಾರ್ಗ ಎನ್ನುವಂತೆ, ಎಲ್ಲವೂ ಸಾಧ್ಯ. ಎಲ್ಲಕ್ಕೂ ಗಟ್ಟಿ ಮನಸ್ಸು ಬೇಕು ಎಂದೆನಿಸುತ್ತಿದೆ. ಇದು ನನ್ನ ಅನುಭವದ ಮಾತು.
ಒಳ್ಳೆಯದಾಗಲಿ
ನಿಜ, ಮನಸಿದ್ದಲ್ಲಿ ಮಾರ್ಗವಿದೆ, ಆದ್ರೆ, ಜಗತ್ತು ಎದುರು ಹಾಕ್ಕೊ೦ಡು ಬದುಕ್ತೀವಾ, ಅಲ್ಲ ಗಾಳಿ ಬೀಸಿದ ಕಡೆ ಕೊಡೆ ಹಿಡೀತಾ ಬದುಕ್ತೀವಾ? ನೆರೆಗೆ ಎದುರಾಗಿ ಈಜ್ತೀವಾ, ಅಲ್ಲ ನೀರಿನ ದಿಕ್ಕಲ್ಲೇ ಸಾಗಿ ಜೀವ ಉಳಿಸ್ಕೊಳ್ಳೋದು ನೋಡ್ತೀವಾ? ಎಲ್ಲಾ ನಮ್ಮ ಆಯ್ಕೆ... ನಮ್ಮ ಗಟ್ಟಿತನದ ಮೇಲೆ ಹೋಗತ್ತೆ ಅಲ್ವಾ?
Post a Comment