ಕಾಡು ಕಪ್ಪಿತ್ತು, ಅದರಾಳ ಘನವಿತ್ತು
ಬೇಕಿರುವುದರ ಹುಡುಕಾಟದಲ್ಲಿ
ಹೊರಟಿದ್ದ ಬೇಟೆಗಾರನಿಗೆ
ಕಾಡಲ್ಲಡಗಿದ್ದರ ಸುಳಿವು ಸಿಕ್ಕಿತ್ತು
ಕಿವಿ ನಿಮಿರಿಸಿ ಕೇಳಿದ...
ಕಾಡಿನಾಳದ ಕತ್ತಲಲ್ಲಿ ಕಣ್ಣು ತೂರಿಸಿದ...
ಮೂಗುಹೊಳ್ಳೆಯರಳಿಸಿ ಅರಸಿದ...
ಪೊದೆಗಳನ್ನೆಲ್ಲ ಸರಿಸಿ ಹುಡುಕಿದ...
ಲೆಕ್ಕಹಾಕಿ ಎಲ್ಲೆಡೆ ಜಾಲಾಡಿದ ಬೇಟೆಗಾರನಿಗೆ
ಕೊನೆಗೂ ಅದು ಸಿಕ್ಕಿತ್ತು...
ತಿನ್ನಬೇಕಿರುವ ಚಿಗರೆಯ ಬದಲು
ಬೇಡವಾಗಿದ್ದ ದೈತ್ಯ ಬೆನ್ಹತ್ತಿ ಬಂದಿತ್ತು...
ಕೋರೆಹಲ್ಲುಗಳ, ಚೂಪಿನುಗುರುಗಳ,
ಹಸಿದ ದೈತ್ಯನಿಗೆ ಆಹಾರ ಕಂಡಿತ್ತು
ಅದು ಅವನನ್ನೇ ಬೇಟೆಯಾಡಹೊರಟಿತ್ತು,
ಈಗ ಅದನ್ನವನು ಕೊಲ್ಲಲೇಬೇಕಿತ್ತು!!!
6 comments:
ತುಂಬಾ ದಿನದ ನಂತರ ಕವನ ಓದಿದೆ. ಎಲ್ಲಾ ಬಿಟ್ಟು ಬೇಟೆಗಾರ ನಿಮ್ಮನ್ನೇಕೆ ಕಾಡಿದ.
"ಬೇಟೆ"ಯ ವಿಷಯ ಸದಾ ಪ್ರಸ್ತುತ. ನಮ್ಮೆಲ್ಲರೊಳಗಿನ ಒಂದು ಹೋರಾಟ ಅದೇ ತಾನೆ.
ಸ್ವಲ್ಪ ವಾಚ್ಯವೆನಿಸಿತು.. ನೀವು ಇನ್ನೊಂದೆರಡು ನಿಮಿಷ ಜಾಸ್ತಿ ಕೊಟ್ಟಿದ್ರೆ ಸಾಕಿತ್ತು ಅನ್ನಿಸಿತು.
ಆದ್ರೆ ಕವಿತೆ,ನೋಟ,ಬೇಟೆ ಎಲ್ಲ ತುಂಬ ಚನ್ನಾಗಿದೆ. ಅರ್ಜಂಟಲ್ಲೂ ಇಷ್ಟ್ ಚನ್ನಾಗ್ ಬರದ್ರೆ, ನಿಧಾನ ಬರೆದ್ರೆ ಹೇಗಿರಬಹುದು ಅಂತ ಯೋಚಿಸ್ತಿದೀನಿ.. :)
"ಅದು ಅವನನ್ನೇ ಬೇಟೆಯಾಡ ಹೊರಟಿತ್ತು.."
ನೀವು ಮತ್ತು ನಿಮ್ ನೋಟಗಳು,ಭಾವದೋಟಗಳು ನಂಗೆ ಇಷ್ಟ.
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com
verygood poem sri. Yaava bete? Yenu hudukaata?
ರಾಧಾ, ಸುಪ್ತದೀಪ್ತಿ ಹೇಳಿದ ಹಾಗೆ. ಬೇಟೆ ಜೀವನದಲ್ಲಿ ಯಾವತ್ತೂ ಪ್ರಸ್ತುತ.
ಸುಪ್ತದೀಪ್ತಿ, ನೀವು ಹೇಳಿದ್ದು ಸಾರ್ವಕಾಲಿಕ ಸತ್ಯ
ಸಿಂಧು,ಥ್ಯಾಂಕ್ಸ್, ಸೇಮ್ ಹಿಯರ್:)
ಗುರು, ಇಲ್ಲಿ ಭೇಟಿ ನೀಡಿದ್ದಕ್ಕೆ ಧನ್ಯವಾದ, ್ಲ್ಲೂ ಬರ್ತಿರ್ತೀವಿ.
ಮಿನುಗುತಾರೆ, ಆಕಾಶ ಬಿಟ್ಟು ಅಂತರ್ಜಾಲದಲ್ಲಿ ಸುತ್ತಾಡ್ಬೇಡ, ಸಿಗಾಕ್ಕೋತೀಯ ಅಷ್ಟೆ :)
Post a Comment