Monday, July 16, 2007

ಆರೋ ಬರೆದ ಚಿತ್ರಕ್ಕಾಗಿ...

ಆರೋ ಬರೆದ ಚಿತ್ರಕ್ಕೆ
ಬಣ್ಣ ತುಂಬುವ ಸಂಭ್ರಮದಲ್ಲಿ
ಎದೆಯೊಳಗಿನ ಕನಸಿನ ಬಣ್ಣ
ಖಾಲಿಯಾಗಿದ್ದು ಯಾವಾಗಲೋ
ಗೆರೆಗಳು ಮಾಸಿದ್ದು ಯಾವಾಗಲೋ

ಕನಸು ಬರಿದಾಗಿದ್ದು ಯಾವಾಗಲೋ

ತಿಳಿಯಲೇ ಇಲ್ಲ...

3 comments:

Shrilatha Puthi said...

how true!!

ಸಿಂಧು sindhu said...

:(

ಶ್ರೀ..

ನಿಮ್ಮ ಕನಸುಗಳ ಪಾತ್ರೆ ಅಕ್ಷಯ.. ನೋಡಿ ಸುಮ್ಮನೆ ಹೀಗೆ ನಿಮ್ಮ ಭಾವದ ಬೆರಳದ್ದಿ, ಕುಂಚವೇನು ಬೇಡ, ಒಳಭಾಗವನ್ನೊಮ್ಮೆ ಒರಸಿ, ಕ್ಯಾನ್ವಾಸಿಗೆ ಕಾಯದೆ ಮೂಡಿಸಿ.. ನೀಲಿಬಾನಿನ ಬಣ್ಣಗಳು ದಂಗಾಗಿ ಕೂತು ನೋಡುತ್ತವೆ.. ಹಾಗೆ ಬಣ್ಣ ತುಂಬುತ್ತಾ ಹೋಗಿ, ಗೆರೆಗಳು ಜೀವ ಪಡೆಯುತ್ತವೆ..ಕನಸು ನನಸಿಗಿಂತ ಸೊಗಸಾಗಿ ಹೊಳೆದು.. ಇನ್ನೇನು ಬೇಕು.. ಕೆಲವು ಸಲ ತಿಳಿದುಕೊಳ್ಳಬಾರದು..

ಪ್ರೀತಿಯಿಂದ
ಸಿಂಧು

veena said...

ಹೀಗಾಗಬಾರದಿತ್ತು ಅಂಥ ಹೇಳಲ್ಲ:)