Tuesday, December 11, 2007

ಬಹಳ ದಿನಗಳ ಬಳಿಕ

ಬಹಳ ದಿನಗಳ ಬಳಿಕ
ಶಕುಂತಲೆಯ ನೆನಪಾದ ದುಶ್ಯಂತ
ಕಾಡಿಗೆ ಹೋದ
ಅಲ್ಲೇ
ಆತ ಬಿಟ್ಟು ಹೋದಲ್ಲೆ
ಅದೇ ಆಶ್ರಮದಂಗಳದಲ್ಲೆ
ಕುಳಿತಿದ್ದಳು ಆಕೆ...

ಬಳಿಸಾರಿ
ಕಣ್ಣಲ್ಲಿ ಕಣ್ಣಿಟ್ಟು
ನೋಡಹೊರಟನಾತ
ಆಕೆಯ ಕಣ್ಣಲ್ಲಿ
ಅವನಿಗೆ ಕಂಡಿದ್ದು
ಅವಳಲ್ಲ...

ಸತ್ತ ಶಾಕುಂತಲೆ
ಮತ್ತು
ಶೂನ್ಯ

8 comments:

ಸಿಂಧು sindhu said...

ಶ್ರೀ....

ಶೂನ್ಯ - ಅಂದರೆ ಏನೂ ಅಲ್ಲದ್ದು ಅಥವಾ ವಾಯ್ಡ್ - ಹೇಗೆ ಇಡೀ ಬದುಕನ್ನೆ ತುಂಬಿ ಬಿಡುತ್ತದೆ ಅಲ್ಲವಾ..
ಚಿವುಟುವ ಕವಿತೆ.. ಕಣ್ತುಂಬಿದೆ.

ಪ್ರೀತಿಯಿಂದ
ಸಿಂಧು

jomon varghese said...

ಯಾವುದೇ ವಿಷಯವಿರಲಿ, ತುಂಬಾ ದಿನಗಳ ಬಳಿಕ ಒಂದು ರೀತಿಯ ಶೂನ್ಯ ಆವರಿಸಿ ಬಿಡುತ್ತೆ. ಕವಿತೆ ತುಂಬಾ ಚೆನ್ನಾಗಿತ್ತು.ಪ್ರೀತಿಯಿಂದ ಎರಡು ಬಾರಿ ಓದಿಕೊಂಡೆ.

Parisarapremi said...

ಸತ್ತ ಶಾಕುಂತಲೆ "ಮತ್ತು" ಶೂನ್ಯ - ಈ ಪರಿಕಲ್ಪನೆ ಬಹಳ ಮನ ಮುಟ್ಟುವಂತಿದೆ..

Unknown said...

ಪದ್ಯ ಮನಮುಟ್ಟಿತು ಶ್ರೀ...
ಧನ್ಯವಾದಗಳು

ಶ್ಯಾಮ್

Rohini Joshi said...

ShAkuntaleya shoonyavanna tumba hrudaysparshiyaagi bimbisiddira.
Heege barita iri :-)

Shree said...

ಸಿಂಧು,
:(
ಅರುಣ್, ಶ್ಯಾಮ್ ,
ಧನ್ಯವಾದ

ಜೋಮನ್ ಮತ್ತು ರೋಹಿಣಿ, ಸ್ವಾಗತ, ಬರ್ತಾ ಇರಿ:)

Satyajit K.T. said...

Hey How to write in Kannada ? I have no clue. Sorry for asking this question here. Please let me know.
Please mail me at ktsatyajit@gmail.com

Satyajit K.T. said...

ಗೊತ್ತಾಯ್ತು ! :)