ಇಲ್ಲ
ಎತ್ತೆತ್ತ ನೋಡಿದರೂ ನೀರೇ ನೀರು... ಆದರೆ, ನನಗೆ ಕುಡಿಯಲಿಕ್ಕೆ ಗುಟುಕು ನೀರಿಲ್ಲ.ಸುತ್ತಲಿರುವುದು ಬಲುದೊಡ್ಡದಾದ ಸಮುದ್ರ... ಉಪ್ಪುನೀರು, ಎಷ್ಟಿದ್ದರೇನು, ಬಾಯಾರಿಕೆ ಹಿಂಗೀತೇ?
---------
ಮಾತು
ಹೋಗಬೇಕಾದ ದಾರಿಯಿನ್ನೂ ಬಲುದೂರ ಬಾಕಿಯುಳಿದಿದೆ. ಮಾತಾಡಿದ್ದು ಹೆಚ್ಚೇನಿಲ್ಲ, ಆದರೆ ಮನಸೆಲ್ಲ ಖಾಲಿಯಾಗಿದೆ, ಮಾತು ಮುಗಿದುಹೋಗಿದೆ. ಮೌನದಲ್ಲಿ ಮಾತಾಡುವಾತ ನೀನಲ್ಲದಿರುವಾಗ, ಇನ್ನುಳಿದ ದೂರ ಮೌನದಲ್ಲಿ ಹೇಗೆ ಕ್ರಮಿಸಲಿ?
2 comments:
ಸಮುದ್ರದ ಸನಿಹ ಹೋಗಬೇಡಿ..
ಸಿಹಿನೀರ ತೊರೆಯಾದರೂ ಸಾಕು
ಹೊಟ್ಟೆತುಂಬಾ ಕುಡಿಯಬಹುದು :)
ಕುಡಿದ ಬಳಿಕ ಯಾವ ಮಾತಾದರೂ
ಸಲೀಸಾಗಿ ಬರುತ್ತೆ, ಮೌನ ಒಡೆದು ಹೋಗಿ
ಮನಸ್ಸೇ ಹೇಳುತ್ತೆ ಎಲ್ಲಿಗೆ ಪಯಣವೆಂದು
:)
chennagide boss :)
Post a Comment