ಈರುಳ್ಳಿ ಕುಯ್ದರೆ ಯಾಕೆ ಕಣ್ಣೀರು ಬರುತ್ತೆ ಅನ್ನೋದಕ್ಕೆ ಈರುಳ್ಳಿ ತಪಸ್ಸು ಮಾಡಿ ಅದನ್ನು ಕುಯ್ದವರಿಗೆಲ್ಲಾ ಕಣ್ಣೀರು ಬರುವಂತೆ ವರ ಪಡೆದ ಕಥೆ ಹೇಳಿದ್ದೆ ನಮ್ಮನೆ ಪುಟ್ಟವಳಿಗೆ. ನಾನು ಹೇಳಿದ ಕಥೆಯಲ್ಲಿ ದೇವರು ಶಿವ ಆಗಿದ್ದ, ಯಾಕೆಂದರೆ ನನಗೆ ತಪಸ್ಸು ಅಂದ ಕೊಡಲೇ ನಾ ಕೇಳಿದ ಕಥೆಯಲ್ಲೆಲ್ಲ ಇದ್ದಿದ್ದು ಓಂ ನಮ: ಶಿವಾಯ, ಅದೇ ನೆನಪಿಗೆ ಬರೋದು.
ಸ್ವಲ್ಪ ಹೊತ್ತಾದ ಮೇಲೆ ಮನೆಯ ಹೊರಗಡೆ ನನ್ನ ಕಥೆ ರಿಪ್ರೊಡಕ್ಷನ್ ಆಗ್ತಿರುವುದು ಕೇಳಿಸ್ತು, ಹಾಗೇ ಒಂದು ಕಿವಿ ಆಕಡೆಗೆ ಇಟ್ಟಿದ್ದೆ. ನಮ್ಮನೆ ಪುಟ್ಟವಳು ಅವಳ ಬೇಬಿ ಸಿಟ್ಟರು ಹುಡುಗಿ, ಎದುರುಮನೆ ಅಜ್ಜಿ, ಪಕ್ಕದ ಮನೆ ಹುಡುಗನ್ನ ಸೇರಿಸಿಕೊಂಡು ಕಥೆ ಹೇಳ್ತಿದ್ದಳು. ಅವಳ ಕಥೆಯಲ್ಲಿ ದೇವರು ಶಿವ ಹೋಗಿ ವಿಷ್ಣು ಆಗಿಬಿಟ್ಟಿತ್ತು! :-)
ಓಂ ವಿಷ್ಣವೇ ನಮ: ಅಂತ ನಾ ಹೇಳ್ಕೊಟ್ಟಿರಲಿಲ್ಲವಾದ್ದರಿಂದ ಅವಳ ಕಥೆಯಲ್ಲಿ ಈರುಳ್ಳಿ 'ವಿಷ್ಣು ವಿಷ್ಣು' ಅಂತ ತಪಸ್ಸು ಮಾಡ್ತಿತ್ತು. ಪಕ್ಕಾ ಮಾಧ್ವ ಸಂತತಿ :-) ನಮ್ಮಲ್ಲಿ ಗೌರಿ ಪೂಜೆ ಮಾಡ್ಬೇಕಾದ್ರೆ ಒಂದೊಂದ್ಸಲ ಹಿರಿಯರು ಲಕ್ಷ್ಮಿ ಹಾಡು ಹಾಡ್ತಾರೆ! ಶಿವ ಭಜನೆ ಮಾಡ್ಬೇಕಾದ್ರೆ "ಕೈಲಾಸವಾಸ ಗೌರೀಶ ಈಶ.. ತೈಲಧಾರೇಯಂತೆ ಮನಸು ಕೊಡು ಹರಿಯಲ್ಲಿ ಶಂಭೋ.." ಅಂತಾರೆ...
ಸದ್ಯ.. ಶಿವ ದೇವ್ರು narrow-minded ಆಗಿದ್ದಿದ್ದರೆ ಎಲ್ಲಾರ್ನೂ ಲಯ ಮಾಡ್ಬಿಡ್ತಾ ಇದ್ನೇನೋ!!! :-)

2 comments:
ಒಳ್ಳೆ ಮಜವಾಗಿದೆ ನಿಮ್ಮ ಪುಟ್ಟಿಯ ಕಥೆ. ಶಿವಧ್ಯಾನದ ಬಗೆಗಿನ ನಿಮ್ಮ ರೀಸರ್ಚು ಸತ್ಯವೋ ಸತ್ಯ ;-)
ಶ್ರೀ ನಮ್ಮ ಸರ್ ಒಬ್ಬರು ಹೇಳೋರು. ಮುಸುರೆ ತಿಕ್ಕಬೇಕಾರೆ ಮಾದ್ವರು ಪಾತ್ರೇನಾ ಉದ್ದುದ್ದ ಉಜ್ದಿದರೆ, ಸ್ಮಾರ್ತರು ಅಡ್ಡಡ್ಡ ಉಜ್ಜುತ್ತಾರಂತೆ.
ಈ ಮಾದ್ವ, ಸ್ಮಾರ್ತ ವೈರತ್ವದ ಬಗ್ಗೆ ಇನ್ನೊಂದು ಬೀಚಿ ಹೇಳೋ ಕಥೆ ಇದೆ.
ಬೀಚಿಗೆ ಯಾರೋ ಹೇಳಿದ್ರು, ಯಾವತ್ತೂ ಶಿವಾ ಅನ್ನದ ಮಾದ್ವರು ಶಿವರಾತ್ರಿ ದಿನ ಮಾತ್ರ ತಪ್ಪದೆ ಶಿವಾಲಯಕ್ಕೆ ಹೋಗ್ತಾರೆ. ಇಲ್ಲ ಅಂದ್ರೆ ಮುಂದಿನ ಜನ್ಮದಲ್ಲಿ ಕತ್ತೆ ಆಗಿ ಹುಟ್ಟಬೇಕಾಗುತ್ತೆ ಅಂತ.
ಅದಕ್ಕೆ ಬೀಚಿ ಉತ್ತರ- ಓಹೋ ಹಾಗಿದ್ರೆ ಈಗಿರೋ ಕತ್ತೆಗಳೆಲ್ಲಾ ಹಿಂದಿನ ಜನ್ಮದಲ್ಲಿ ಮಾದ್ವರಾಗಿದ್ರೋ?
ನಾನಲ್ಲಪ್ಪ ಮಾದ್ವರಾದ ಬೀಚೀನೇ ಹೇಳಿದ್ದು.
Post a Comment