ನಾವು ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದರೆ ಆತ ನಮ್ಮ ಹಿ೦ದೆ ಬ೦ದು ನಿ೦ತಿದ್ದ.
ಕೆದರಿದ ಕೂದಲು...
ತು೦ಡು ಬೀಡಿ...
ಚಿತ್ರ-ವಿಚಿತ್ರ ಜಾಕೆಟ್... ಜುಬ್ಬಾ... ಚಳಿಗಾಲದಲ್ಲಿ ಧರಿಸುವ ಎಲ್ಲಾ ಬಟ್ಟೆಗಳ ಕಾ೦ಬಿನೇಶನ್...
ಕಪ್ಪು ತುಟಿಗಳಲ್ಲಿ ವಿಚಿತ್ರ ನಗು...
ಮತ್ತೆ...
ಆತನ ಕೊರಳಲ್ಲಿ...
ಚಿರ೦ಜೀವಿ!!!
ಪೇಪರ್ ನಲ್ಲಿ ಬ೦ದ ಫೋಟೋ ಕಟ್ ಮಾಡಿ ನೂಲಿನಲ್ಲಿ ಕಟ್ಟಿ ಕುತ್ತಿಗೆಗೆ ಸುತ್ತಿಕೊ೦ಡಿದ್ದ..
ತಾನೇ ಚಿರ೦ಜೀವಿಯೆ೦ಬ೦ತೆ ಜಗಕ್ಕೆ ಪೋಸ್ ಕೊಡುತ್ತಿದ್ದ.
ಜಗದ ಕಣ್ಣಿಗೆ ಆತ ಹುಚ್ಚ.
ಆದರೆ, ಇವತ್ತು 'ಚಿರ೦ಜೀವಿ' ಜನರ ಮನಸಲ್ಲಿ ಚಿರ೦ಜೀವಿಯಾಗಿ ಉಳಿದುಕೊ೦ಡಿದ್ದರೆ, ಆ ಘನಕಾರ್ಯದಲ್ಲಿ ಈತ, ಮತ್ತೆ ಇ೦ತಹ ನೂರಾರು ಮ೦ದಿ ಭಾಗಿಯಾಗಿರ್ತಾರೆ...
ಕೆಲವರ ಹುಚ್ಚುತನ ಕಾಣಿಸಬಹುದು, ಕೆಲವರ ಹುಚ್ಚು ಕಾಣದಿರಬಹುದು... ಅಷ್ಟೆ!!
ಅದ್ಯಾಕೋ, ಆ ಹುಚ್ಚ ಮಾತ್ರ, ಇವತ್ತಿಗೂ ನೆನಪಾಗ್ತಾನೆ.
3 comments:
ಮೌನದೊಳಗೆ ನೋವಿರುತ್ತದೆ, ನಲಿವಿರುತ್ತದೆ. ಹೊಸ ಅನುಭವಗಳು ಮೌನದೊಳಗೆ ತಳ್ಳುವುದಿದೆಯಲ್ಲ ಅದು ಭಯ ಹುಟ್ಟಿಸುತ್ತದೆ.
ಭ್ಲಾಗ್ ನ ಬರಹದ ಬಗ್ಗೆ ತಡವಾಗಿದೆ ಪ್ರತಿಕ್ರಿಯೆ. ಕಾರಣಗಳು ನನಗೆ ಗೊತ್ತಿಲ್ಲ. ನನಗೆ ಕಾಡುವಿದೊಂದೆ ನಿಮ್ಮ ಬರಹದೊಳಗಿನ ಮೌನ.
ಜಗತ್ತನ್ನ ಪೂರ್ವಾಗ್ರಹವಿಲ್ಲದೆ ನೋಡಿ, ಅದರಿ೦ದ ಕಲಿಯಲು ಆರ೦ಭಿಸಿ... ಪೂರ್ವಾಗ್ರಹಗಳಿ೦ದ ಕಳಚಿಕೊಳ್ಳಲು ಪ್ರಯತ್ನಿಸಿ... ನೀವೂ ಮೌನಿಯಾಗುತ್ತೀರ!!
ಶ್ರೀ ಅವರೇ,
ನಮ್ಮ ದಕ್ಷಿಣದ ಎಲ್ಲಾ ಸೂಪರ್‍ಸ್ಟಾರ್‍ಗಳು ಅರಾಧ್ಯ ದೈವವಾಗಿರೋದಕ್ಕೆ ನೀವು ಹೇಳಿದ ಹುಚ್ಚನಂತೆ ಕಾಣುವ ವ್ಯಕ್ತಿಗಳು ಕಾರಣ..ಅದು ಯಾಕೋ ಗೊತ್ತಿಲ್ಲಾ ದಕ್ಷಿಣಭಾರತದಲ್ಲೇ ಯಾಕೇ ಅಷ್ಟು ಕ್ರೇಜ್??
Post a Comment