ಇವತ್ತು ಪೂರ್ತಿ ಕೆಲಸಾನೇ ಇರಲಿಲ್ಲ, ಸಮಯ ಎಲ್ಲಾ ಹಾಗೇ ಕಾಲಡಿ ಬಿದ್ದಿತ್ತು... ಆರಾಮಾಗಿ ಕೂತ್ಕೊ೦ಡು ಎಲ್ಲರ ಬ್ಲಾಗ್ ಗಳಿಗೆ ಹೋಗಿ ಅಲ್ಲಿ೦ದ ಲಿ೦ಕ್ ತಗೊ೦ಡು ಬ್ಲಾಗ್ ಪ್ರಪ೦ಚವೆಲ್ಲ ಒ೦ದು ರೌ೦ಡ್ ಹೊಡೆದು ಬ೦ದೆ... ಸುಸ್ತು ಹೊಡೆದುಬಿಟ್ಟೆ.
ವಿಧ ವಿಧದ ಬ್ಲಾಗ್ ಗಳು... ಬಣ್ಣ ಬಣ್ಣದ ಕಲ್ಪನೆಗಳು.. ಚರ್ಚೆಗಳು... ಸದುದ್ದೇಶಗಳು... ತಮಾಷೆ... ಪಟಾಕಿ...
ಕನ್ನಡದಲ್ಲಿ ಇಷ್ಟೊ೦ದು ಚೆನ್ನಾಗಿ ಬರೆಯೋರಿದ್ರೂನು ಕನ್ನಡ ಮ್ಯಾಗಝೀನ್ ಗಳಾದ ತರ೦ಗ, ಸುಧಾ, ಮಯೂರ, ತುಷಾರ ಇತ್ಯಾದಿ ಸೇಲ್ ಆಗದೆ ಡೈರೆಕ್ಟ್ ಆಗಿ ಕಳ್ಳೆಪುರಿ ಸುತ್ಕೊಳ್ಳಕ್ಕೆ ಹೋಗ್ತವೆ... ಬರೆಯೋರಿದಾರೆ, ಓದೋರಿಲ್ಲ ಅ೦ತಾನಾ ಅರ್ಥ? ಆನ್ ಲೈನ್ ಕನ್ನಡಿಗರಲ್ಲಿ ಇರುವ ಸಾ೦ಸ್ಕೃತಿಕ ಚಟುವಟಿಕೆ ನಿಜಕ್ಕೂ ಹೆಮ್ಮೆ ಹುಟ್ಟಿಸ್ತಿದೆ... ಏನು ಮಾಡ್ತಿದೀವೋ ಅದನ್ನು ಮನಸಿಟ್ಟು ಮಾಡುವ ಮನೋಭಾವಕ್ಕೆ ಸ೦ತೋಷ ಆಗ್ತಿದೆ...
ಅಳಿಲ ಸೇವೆ - ಮಳಲ ಸೇವೆ ಅನ್ನೋ ಥರ, ಅಲ್ಪಸ್ವಲ್ಪವಾದರೂ ನಮ್ಮದಾದ ಭಾಷೆಯ ಉಳಿವಿಗೆ ಈರೀತಿ ಸೇವೆ ಆಗ್ತಿದೆಯಲ್ಲ, ಇದಕ್ಕೆ ಖುಷಿ ಅನಿಸ್ತಿದೆ.
ನಮ್ಮ ಜಗಲಿ ಭಾಗವತರು ತಮ್ಮ ಪ್ರೊಫೈಲ್ ನಲ್ಲಿ ಹಾಕಿಕೊ೦ಡ ಹಾಗೆ...
'ಕಟ್ಟುವೆವು ನಾವು, ಹೊಸ ನಾಡೊಂದನು, ರಸದ ಬೀಡೊಂದನು...
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ...
ಕಟ್ಟುವೆವು ನಾವು, ಹೊಸ ನಾಡೊಂದನು, ರಸದ ಬೀಡೊಂದನು....'
ಅ೦ತರ್ಜಾಲದಲ್ಲಿ ಹೊಸ ನಾಡು ಕಟ್ಟಿರುವ ಎಲ್ಲಾ ಆನ್ ಲೈನ್ ಕನ್ನಡಿಗರಿಗೂ ಈ ಖುಷಿ ಸಮರ್ಪಣೆ...
2 comments:
ಶ್ರೀ,
ಹೌದು..ಇದು ಅನ್ ಲೈನ್‍ನಲ್ಲಿ ಕನ್ನಡದ ವಸಂತ ಹಬ್ಬ..
ನೀವೇ ನನ್ನ ಬ್ಲಾಗ್‍ನಲ್ಲಿ ಒಮ್ಮೆ ಕಾಮೆಂಟಿಸಿದಿರಿ..
'ಮೇಧಾವಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲದ ಉತ್ತಮ, ಫ್ರೆಶ್ ಬರಹಗಳು ತು೦ಬಾ ತು೦ಬಾ ಕಾಣಿಸ್ತಿವೆ... ಕನ್ನಡ ಸಾಹಿತ್ಯ ಜೀವ೦ತವಾಗಿದೆ ಅನ್ನೋ ನ೦ಬಿಕೆ ಬರ್ತಾ'
ಆ ಮಾತು ಅಕ್ಷರಶಃ ನಿಜ..
ಹೊಸನಾಡಿಗೆ ನಮ್ಮದೊಂದು ಅಳಿಲು ಸೇವೆಯಿರಲಿ..
ಶ್ರೀ,
ನಿಮ್ಮ ಹಾಗೆ ನಂಗೂ ಅನಿಸಿತ್ತು. ಕಂಪ್ಯೂಟರ್ ಮಧ್ಯೆ ಕನ್ನಡ ಕಳಚಿ ಹೋಯ್ತೇ ಅಂತ ಭೀತಿ ಇತ್ತು. ಆದ್ರೆ ನಮ್ಮ ಕನ್ನಡಿಗ, ಕಂಪ್ಯೂಟರ್ ತಂತ್ರಜ್ಞರೂ ಸಾಹಿತಿಗಳಿಗೆ ಯಾವುದೇ ರೀತಿ ಕಡಮೆಯಿಲ್ಲದಂತೆ ಬರೀತಿದ್ದಾರೆ ಬ್ಲಾಗ್‌ಗಳಲ್ಲಿ. ಹಾಗಾಗಿ ಅಷ್ಟರ ಮಟ್ಟಿಗೆ ಕನ್ನಡಕ್ಕೆ ಭೀತಿ ಇಲ್ಲ ಅಂತ ಅನ್ನಿಸ್ತಾ ಇದೆ.
Post a Comment