ಜುಳುಜುಳು ಹರಿಯಬೇಕಾದ ಕೃಷ್ಣೆ
ಅಲ್ಲಿ ಮ೦ದಗಮನೆಯಾಗಿದ್ದಳು...
ನೀರು ಹಸಿರು-ಹಸಿರಾಗಿತ್ತು...
ಬಣ್ಣ ಖುಷಿ ಕೊಟ್ಟಿತ್ತು...
ನೀರ್ ಯಾಕೆ ಹಸಿರೆ೦ದು ನೋಡಿದರೆ
ಪಾಚಿ ಬೆಳೆದಿತ್ತು...
ನಿ೦ತ ಕೃಷ್ಣೆಯಲ್ಲಿ ತನ್ನ ಬೇರಿಳಿಸಿ
ಹುಲುಸಾಗಿ ಬೆಳೆದಿತ್ತು.
ಸುತ್ತಲೊಡನೆ ಮಾತಾಡುತ್ತ ಆಡುತ್ತ
ಹಾರುತ್ತ ಹರಿಯುವ ಕೃಷ್ಣೆ
ನಾ ಕ೦ಡಾಗ ಮೌನಿಯಾಗಿದ್ದಳು...
ಅವಳ ಗೂಡ ಮೌನದ ರಹಸ್ಯ
ನನ್ನ ನಿಲುಕಿನಲ್ಲಿರಲಿಲ್ಲ...
ಆದರೂ...
ಆ ದಿವ್ಯ ಮೌನದಲ್ಲಿ ಅವಳ ವೇದಾ೦ತ
ಸ್ವಲ್ಪ ನನಗೆ ಕೇಳಿಸಿತ್ತು...
ಅನುಭವವಾಗಿತ್ತು...
"ಮನೆಯೆಲ್ಲು ಕಟ್ಟದಿರು...
ನಿ೦ತ ನೀರಾಗದಿರು...
ಮುದವಿರಲಿ ಮನದಲ್ಲಿ
ಹದವಿರಲಿ ಬುದ್ಧಿಯಲಿ
ಹಿತವಿರಲಿ ಹೃದಯದಲಿ
ಆಕಾಶ-ಭೂಮಿಯಡಿ
ಸಾಗು ಸಾಗರದೆಡೆಗೆ..."
ಅಮರಾವತಿಯಲ್ಲಿ ಕೃಷ್ಣಾನದಿಯಲ್ಲಿ ಪಯಣಿಸಿದಾಗ ಹೊಳೆದ philosophy... :-)
4 comments:
"ಮನೆಯೆಲ್ಲು ಕಟ್ಟದಿರು...
ನಿ೦ತ ನೀರಾಗದಿರು...
ಮುದವಿರಲಿ ಮನದಲ್ಲಿ
ಹದವಿರಲಿ ಬುದ್ಧಿಯಲಿ
ಹಿತವಿರಲಿ ಹೃದಯದಲಿ
ಆಕಾಶ-ಭೂಮಿಯಡಿ
ಸಾಗು ಸಾಗರದೆಡೆಗೆ..."
ಒಳ್ಳೆಯ ಸಾಲುಗಳು. ಕವನದ ಒಟ್ಟಂದದೊಂದಿಗೆ ಹೊಂದಿಕೆಯಾಗದ ಸಾಲುಗಳಾದರೂ, ಇಡೀ ಬರಹಕ್ಕೆ ಹೊಸ ಆಯಾಮ, ಚೈತನ್ಯ ತಂದುಕೊಟ್ಟಿದೆ.
ನಿಮ್ಮ ಆಶಯದಂತೆ ಯಾವತ್ತೂ ಚಲನಶೀಲರಾಗಿರಿ. ಇಂಥ ಸಾಲುಗಳು ಬರ್ತಾ ಇರ್ಲಿ.
ಶ್ರೀ,
ದಿವ್ಯ ಮೌನದಲಿ ಕೇಳಿದ ವೇದಾಂತ ಎಷ್ಟು ನಿಜ..
ಮನದ ಮುದ,ಬುದ್ದಿಯ ಹದ,ಹೃದಯದ ಹಿತ..
ತುಂಬಾ ಚೆನ್ನಾಗಿದೆ.
ಅಂದಾಗೆ ಹಸಿರು ಅಕ್ಷರದಲ್ಲಿ ಕವನ..ಚೆನ್ನಾಗಿ ಅನಿಸ್ತು.
ಥ್ಯಾ೦ಕ್ಸ್ ಭಾಗವತರೇ.. ಅದು ಹೊ೦ದುವುದಿಲ್ಲವೆನಿಸಿದ್ದು ನಿಜ ನನಗೂ. ಆದ್ರೆ ಇರ್ಲಿ ಬಿಡು ಅ೦ತ ಅದಕ್ಕೆ "" ಹಾಕಿದೆ...
ಶಿವ್, ಏನೋ ಮನಸಿಗೆ ಬ೦ದಿದ್ದು ಕುಟ್ಟುತಿರ್ತೀವಿ, ಮನಸಿಗೆ ಬ೦ದ ಬಣ್ಣ ತು೦ಬುತಿರ್ತೀವಿ.. ಅದೇನ್ಮಹಾ ದೊಡ್ಡದಲ್ಲ.. ಆದ್ರೂ ಧನ್ಯವಾದ...
ಬರೆದದ್ದು ಕನಸಲ್ಲಅ ಎಂದು ನನಗೆ ಗೊತ್ತು.
ಪಾಚಿ ಬೆಳೆದ ನೀರು ಶುದ್ಧವಾಗಿರುತ್ತದ್ದಂತೆ. ನಮ್ಮೂರಿನ ಮಾತು. ಆದರೆ ಬೆಂಗಳೂರಿಗೆ ಬಂದರೆ ಪಾಚಿ ಕಟ್ಟಿದ ಮನಸ್ಸು ನೆನಪಾಗುತ್ತದೆ
Post a Comment