Saturday, January 19, 2008

ಬೇಸರವಾದಾಗ..!

ಬೇಸರವಾದಾಗ ಮಾತ್ರ ಇಲ್ಲಿ ಬರುವುದಕ್ಕೆ ಇನ್ನೂ ಬೇಸರವಾಗ್ತಿದೆ!!

ಬಣ್ಣ ಹಚ್ಚುವವರು...

ಚಿತ್ರ ಯಾರದಾದರೇನು,
ನಮ್ಮದೇ ಬಣ್ಣ ಅಂದುಕೊಂಡು ಹಚ್ಚುತ್ತೇವೆ...
ಹಚ್ಚುತ್ತಿರುವ ತನಕ ನಮ್ಮದೇ ಬಣ್ಣ.
ನಮ್ಮದೇ ಚಿತ್ರ ಕೂಡ.
ಇವೆಲ್ಲ ಆಟ ನಡೆಯುವುದು
ನಮಗೆ ಬೇಕಾದ ಬಣ್ಣ
ಬೇಕಾದ ಹಾಗೆ ಹಚ್ಚಲು ಬಿಡುವವರೆಗೆ ಮಾತ್ರ!!


ಯಾಕೆ?

ಹೂಗಿಡಕ್ಕೆ ನೀರು ಹೊಯ್ದು,
ಗೊಬ್ಬರ ಹಾಕಿ,
ದಿನಾ ಅದು ಏನು ಮಾಡುತ್ತಿದೆಯೆಂದು ನೋಡಿ
ಪ್ರೀತಿಯಿಂದ ಬೆಳೆಸುವುದು
ಯಾಕೆ?
ಕೊನೆಗೊಂದು ದಿನ ಹೂಬಿಟ್ಟಾಗ
ಕೊಯ್ದು ಕೊಲ್ಲಲಿಕ್ಕೆಯೇ?


ಬದುಕು ಅಡಗಿರುವುದೇ
ಅಡಗಿರುವುದನ್ನು ಹುಡುಕುವುದರಲ್ಲಿ...


ಅಡಗಿರುವುದನ್ನು ಹುಡುಕುವುದೇ
ಒಂದು ದೊಡ್ಡ ಸಂಭ್ರಮ...
ಆದರೆ,
ಅಡಗಿರುವುದು ಎದುರಿಗೆ ತೆರೆದು ನಿಂತಾಗ
ಇನ್ಯಾವುದೋ ಅಡಗಿರುವುದರ ಕಡೆಗೆ
ಸೆಳೆಯುತ್ತದೆ ಮನ.

ನೋವು

ನೋವಿನಷ್ಟು ಸಿಹಿ ಇನ್ಯಾವುದೂ ಇಲ್ಲ ಅಂದಿದ್ದರು ಅವರು.
ನೋವು ಮನುಷ್ಯನನ್ನು ಬೆಳೆಸುತ್ತದೆ ಎಂದಿದ್ದರು ಇವರು.
ನನಗೆ ಮಾತ್ರ
ಸಿಹಿ ಬೇಕಾಗಿಲ್ಲ
ಬೆಳೆಯೋದೂ ಬೇಕಾಗಿಲ್ಲ
ಹಿಂಡಿ ತಿನ್ನೋ ಈ ನೋವು ಬೇಕಾಗಿಲ್ಲ..!! :-(

9 comments:

Parisarapremi said...

ಬೇಸರವಾದಾಗ ಇಲ್ಲಿ ಬಂದೆ... ಒಂದಷ್ಟು ಹಂಚಿಕೊಂಡೆ. ಬೇಸರವು ಈಗ ತುಸು ಕಡಿಮೆಯಾಗಿದೆ.. ಅದ್ಭುತ ಸಾಲುಗಳು.

ಸುಪ್ತದೀಪ್ತಿ suptadeepti said...

ಚಂದದ, ಅರ್ಥಗರ್ಭಿತ, ಬೇಸರ ಕಳೆಯುವ, ಚಿಂತನೆಗೆಳೆಯುವ ಸಾಲುಗಳು. ಧನ್ಯವಾದ.

ಶಾಂತಲಾ ಭಂಡಿ (ಸನ್ನಿಧಿ) said...

shreeಅವರೆ
ತುಂಬ ಚೆನ್ನಾಗಿವೆ ಸಾಲುಗಳು. ಚುರುಕು ಅರ್ಥಗಳ ಚುಟುಕು ಸಾಲುಗಳು. "ಏನ ಹೇಳಿದೆವು" ಎಂಬ ಪ್ರಶ್ನೆಯನ್ನು ಓದುಗನ ಮುಂದಿಡುತ್ತವೆ.
ತುಂಬ ಇಷ್ಟವಾದವು. ಬರೆಯುತ್ತಿರಿ.

veena said...

ಶ್ರೀಯವರೇ ತುಂಬಾ ಅರ್ಥಗರ್ಬಿತ ಕವನಗಳನ್ನೇ ಬರೆದಿದ್ದೀರಿ.
ಮ್ ಮ್.... ನೋವು ಕವನದಲ್ಲಿ ಬರೆದರ ಅರ್ಥ ಸಿಹಿ ಇರುವಂಥಹ ನೋವು ಹಿಂಡಿ ತಿನ್ನುತ್ತೆ ಅಂಥನಾ ?

ಬಾನಾಡಿ said...

ನಮ್ಮದೇ ಚಿತ್ರ ನಮ್ಮದೇ ಬಣ್ಣ
ಇದ್ದಾಗ
ನಾವು ನದೆಸುವ ಆಟ
ನಮಗೆ ಬೇಕಾದಂತೆ ಆಡಬಹುದು

ಅದಕ್ಕೆ
ಮೊದಲು ಚಿತ್ರ ಬರೆಯೋಣ
ಬಣ್ಣ ಬರೆಯೋಣ
ಆಟ ಆಡೋಣ
ನಮಗೆ ಬೇಕಾದಂತೆ ಇರೋಣ

ಒಲವಿನಿಂದ
ಬಾನಾಡಿ

ನಾವಡ said...

ಶ್ರೀ ಅವರೇ
ಕವನ ಚೆನ್ನಾಗಿದೆ. ನಮ್ಮದೇ ಚಿತ್ರದ ಬಣ್ಣ....
ಇಷ್ಟವಾಯಿತು.
ನಾವಡ

ಸಿಂಧು sindhu said...

ಶ್ರೀ,

ನಿಮಗೆ ಬೇಸರವಾದರೆ ಇಷ್ಟೊಳ್ಳೆಳ್ಳೆ ಕವಿತೆ ಬರೀತೀರ ಅಂದ್ರೆ ಆಗ ಈಗ ಬೇಜಾರ್ ಮಾಡ್ಕೊಳ್ರೀ ಅಂತನ್ನೋ ಧೂರ್ತತನದ ಆಸೆ.

ಕವಿತೆಗೆಳು ಅರ್ಥಪೂರ್ಣವಾಗಿವೆ. ಮನ ಮುಟ್ಟುತ್ತವೆ. ಬಣ್ಣ ಮತ್ತು ಯಾಕೆ ತುಂಬ ತುಂಬ ಇಷ್ಟವಾಯಿತು.

ಪ್ರೀತಿಯಿಂದ
ಸಿಂಧು

Ashwini Kumar Bhat said...

Baduku aDagiruvude aDagiruvudannu huDukuvudaralli.... adbhuta saalugaLu... sooryanashte sathya!

DhanyavaadagaLu...

-Sumasuta

Shree said...

ಅರುಣ್, ಜ್ಯೋತಿಅಕ್ಕ- ಧನ್ಯವಾದ:)
ಶಾಂತಲಾ, ಬಾನಾಡಿ, ನಾವಡ, ಅಶ್ವಿನಿಕುಮಾರ್, ಬ್ಲಾಗಿಗೆ ಸ್ವಾಗತ, ಬರ್ತಾ ಇರಿ..
ಸಿಂಧು, ಅದ್ಯಾಕೋ ಬೇಜಾರ್ ಅನ್ನೋದು ದಿನದ ಹಾಡಾಗಿ ಬಿಟ್ಟಿದೆ! :(
ವೀಣಾ, ನಿಮಗೆ ಬೇಕಾದಂತೆ ಅರ್ಥ ಮಾಡಿಕೊಳ್ಳಿ ;-)