GENERAL PLEDGE
India is my country. All Indians are my brothers and sisters. I Love my country. I am proud of its rich and varied culture. I shall always strive to be worthy of it. I shall love and respect my parents, teachers and elders. To my country and my people I pledge my devotion. In their well being and prosperity alone lies my happiness.
NATIONAL INTEGRATION PLEDGE
I solemnly pledge to work with dedication to preserve and strengthen the freedom and integrity of the nation. I further affirm that I shall never resort to violence and that all differences and disputes relating to religion, language, region or other political or economic grievances should be settled by peaceful and constitutional means.
ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿತಿದ್ದು
ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಅದರ ಸಂಪನ್ನ ಹಾಗೂ ವೈವಿಧ್ಯಪೂರ್ಣ ಪರಂಪರೆಗೆ ನಾನು ಹೆಮ್ಮೆ ಪಡುತ್ತೇನೆ. ಅದಕ್ಕೆ ಅರ್ಹನಾಗಲು ನಾನು ಸದಾ ಪ್ರಯತ್ನಿಸುತ್ತೇನೆ. ನಾನು ನನ್ನ ತಂದೆತಾಯಿ ಮತ್ತು ಗುರುಹಿರಿಯರನ್ನು ಗೌರವಿಸುತ್ತೇನೆ ಹಾಗೂ ಅವರೊಡನೆ ಸೌಜನ್ಯದಿಂದ ವರ್ತಿಸುತ್ತೇನೆ. ನಾನು ನನ್ನ ದೇಶ ಮತ್ತು ಜನರಿಗೆ ನನ್ನ ಶ್ರದ್ಧೆಯನ್ನು ಮುಡಿಪಾಗಿಡುತ್ತೇನೆ. ಅವರ ಕ್ಷೇಮ ಮತ್ತು ಸಮೃದ್ಧಿಯಲ್ಲೇ ನನ್ನ ಆನಂದವಿದೆ.
ನಾವೆಲ್ಲ ಚಿಕ್ಕವರಿರುವಾಗ, ನಾ ಕಲಿತ ಕೇರಳದ ಕಾಸರಗೋಡಿನಲ್ಲಿರುವ ಸರಕಾರಿ ಶಾಲೆಯಲ್ಲಿ ದಿನವೂ ಬೆಳಿಗ್ಗೆ ಪ್ರತಿಜ್ಞೆ ಮತ್ತು ಪ್ರಾರ್ಥನೆಗಳ ನಂತರವೇ ಪಾಠಗಳು ಆರಂಭವಾಗುತ್ತಿದ್ದವು. ಕರ್ನಾಟಕದಲ್ಲೂ ಹಾಗೆಯೇ ಇತ್ತಾ? ಈಗಲೂ ಈ ಪದ್ಧತಿ ಇದೆಯಾ? ಬೇರೆ ರಾಜ್ಯಗಳಲ್ಲಿ ಕೂಡ ಪ್ರತಿಜ್ಞೆ ಬೋಧಿಸುವ ಪದ್ಧತಿ ಇದೆಯಾ? ನೀವೆಲ್ಲಾ ನನ್ನ ಹಾಗೆ ದಿನವೂ ಪ್ರತಿಜ್ಞೆ ಮಾಡಿಕೊಂಡೇ ಬೆಳೆದವರಾ? :-)
ಗೊತ್ತಿದ್ದವರಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ.
10 comments:
ಹೌದು..ಶಾಲೆ ಬಿಡುವಾಗ ಜನಗಣಮನ ಹೇಳಿಯೇ ಮನೆಗೆ ಹೋಗ್ತಿದ್ದದ್ದು
ನಮ್ಮ ಶಾಲೆಯಲ್ಲಿ ಈ ಪ್ರತಿಜ್ಞೆಗಳೆಲ್ಲ ಇರಲಿಲ್ಲ. ಬೆಳಿಗ್ಗೆ ರಾಷ್ಟ್ರಗೀತೆ/ನಾಡಗೀತೆ/ಶಾಂತಿ ಮಂತ್ರಗಳನ್ನು ಹೇಳಿ ತರಗತಿಗಳಿಗೆ ಹೋಗುತ್ತಿದ್ದೆವು.
ಖಂಡಿತ ಇರಲಿಲ್ಲ ಶ್ರೀ. ಇರಬೇಕಿತ್ತು
ಇಲ್ಲ ನಮ್ಮ ಶಾಲೆಗಳಲ್ಲಿ ಈ ಪ್ರತಿಜ್ಞೆಗಳು ಇರಲಿಲ್ಲ..
ನಮ್ಮ ಯಾವ ಶಾಲೆಗಳಲ್ಲೂ (ಹಲವಾರು ಶಾಲೆಗಳನ್ನು ಹೊಕ್ಕು ಬಂದಿದ್ದೇನೆ, ಅಪ್ಪನಿಗೆ ವರ್ಗವಾಗುತ್ತಿತ್ತಲ್ಲ) ಇಂಥ ಪ್ರತಿಜ್ಞೆಗಳಿರಲಿಲ್ಲ. ಆದರೆ ಪ್ರಾರ್ಥನಾ ಶ್ಲೋಕಗಳಿದ್ದವು. ದಿನದ ಕೊನೆಗೆ ಕೆಲವೇ ಶಾಲೆಗಳಲ್ಲಿ ರಾಷ್ಟ್ರಗೀತೆ ಹೇಳುವದಿತ್ತು.
ಬಹುತೇಕ ಶಾಲೆಗಳಲ್ಲಿದ್ದ ಪ್ರಾರ್ಥನೆಯ ಕೊನೆಯಲ್ಲಿದ್ದ ಶಾಂತಿಮಂತ್ರ- ಲೋಕಾ ಸಮಸ್ತಾ ಸುಖಿನೋ ಭವಂತು- ನನ್ನ ದಿನನಿತ್ಯದ ಪ್ರಾರ್ಥನೆಯಾಗಿ ಉಳಿದಿದೆ. ಬೇರೇನೂ ಇಲ್ಲ.
ಹೌದು...ನನಗೆ ನೆನಪು ಇದೆ. ..ನನ್ನ ಮನೆಯವರು ಕಲಿತ ಕರ್ನಾಟಕ ದ ಶಾಲೆಗಳಲ್ಲಿ ಕೂಡ ಇತ್ತಂತೆ. ನನ್ನ ಮಗಳಿಗೂ ಕೂಡ ಈ ರೀತಿ ಪ್ರತಿಜ್ಞೆ ಇದೆ. I pledge allegiance to the flag of the United States of America and to the republic for which it stands: one nation under God, indivisible, with liberty and justice for all.
ನಮಗೆ ದಿನಾ ಹೇಳಿಸುತ್ತಿರಲಿಲ್ಲ.
ವಿಶೇಷ ದಿನಗಳಲ್ಲಿ ಇದೇ ತರದ್ದು ಹೇಳಿಸುತ್ತಿದ್ದರು.
ಅದು ಬಿಟ್ರೆ ದಿನವೂ ನಾಡಗೀತೆ,ಜನಗಣಮನ, ಸರ್ವಧರ್ಮಗಳ ಹಾಡೊಂದನ್ನ ಹೇಳಿಸ್ತಿದ್ರು.
ಪ್ರತಿಕ್ರಿಯೆಗೆ ಧನ್ಯವಾದ, ಕೇರಳದವರಿಂದ ಹೌದು-ಗಳೂ ಕರ್ನಾಟಕದವರೆಲ್ಲರಿಂದ ಇಲ್ಲಗಳೂ ಹೆಚ್ಚಾಗಿ ಕಾಣಿಸ್ತಿವೆ... ಅಕ್ಕಪಕ್ಕದ ಎರಡು ಅಮೆರಿಕಾವನ್ನು ನಾವು ಎಲ್ಲದರಲ್ಲೂ ಅನುಸರಿಸಹೊರಟವರು, ಇದರಲ್ಲೂ ಅನುಸರಿಸಹೊರಟರೆ ಚೆನ್ನಾಗಿರುತ್ತದೆ. ಚಿಕ್ಕವರಿರುವಾಗ ನಾವು ಏನು ಕಲಿಯುತ್ತೇವೋ ಅದು ಜೀವನಪರ್ಯಂತ ಬರುತ್ತದೆ ಅಂತ ನಂಬುವವಳು ನಾನು, ಪ್ರತಿಜ್ಞೆಯನ್ನು ನಮಗಿದ್ದ ಹಾಗೆ ಎಲ್ಲಾ ರಾಜ್ಯಗಳಲ್ಲೂ ಮಕ್ಕಳಿಗೆ ಕಡ್ಡಾಯ ಮಾಡಬೇಕಿದೆ, ಇವತ್ತಿನ ಪರಿಸ್ಥಿತಿಗೆ ಅಗತ್ಯವಿದೆ ಅದು ಅನಿಸ್ತು ನಂಗೆ...
Namaste SHREE
idannu nODi, shAlA dinagaLa prayer nenesikonDidde...
haudu, ee bageya pratijne namma Rashtra shakti kendrda meeting hAgU shibiragaLalli mADtEve.
but jAgO BhArat programme nalli mass ge ee pratijneya deekshe neeDuva yochane nijakkU atyuttama. KhanDita idannu kAryagatagoLisuttEve.
salahege bahaLa bahaLa dhanyavaada.
nalme,
Chetana
ಗೂಡೂ ಸಹ ಹಕ್ಕಿಗಾಗಿ ಕಾಯುವದೆ? ಸುಂದರವಾದ ಕಲ್ಪನೆ.
http://www.interiordesignersbangalore.com
http://www.interiordesignersinbangalore.com
http://www.architectsbangalore.com
http://www.seekangroup.com
http://www.architectsban.webs.com
Post a Comment