Monday, December 29, 2008

ಹಕ್ಕಿ ಗೂಡು ಮರೆತು ಹಾರಿದಾಗ...

ವಲಸೆ ಹಕ್ಕಿ ಸಮಯ ಬಂದಾಗ ತನ್ನ ಪಾಡಿಗೆ ತಾನು ಹಾರಿ ಹೋಗುತ್ತದೆ... ಆದರೆ ಹಕ್ಕಿಯ ಗೂಡು ಮಾತ್ರ ಮತ್ತೆಂದಾದರೂ ಹಕ್ಕಿ ಮರಳುವುದೆಂಬ ಆಸೆಯಲ್ಲಿ ಕಾಯುತ್ತದೆ...
--------
ಗೂಡು ನಿರ್ಜೀವ. ಅದಕ್ಕೆ ಹಾರಲಾಗದು.
--------
ಹಾರಲಾಗದ್ದೆಲ್ಲಾ ನಿರ್ಜೀವವಲ್ಲ... ಹಕ್ಕಿಯೇ ಶ್ರದ್ಧೆಯಿಂದ ಕಟ್ಟಿದ ಗೂಡದು, ಬೇಕಾದಾಗ ಬೆಚ್ಚನೆಯ ಮನೆಯಾಗಿತ್ತು... ಹಕ್ಕಿಗೆ ಎಷ್ಟು ಗೂಡೋ? ಆದರೆ ಗೂಡಿಗೆ ಅದೊಂದೇ ಹಕ್ಕಿ...!
--------
ಹಕ್ಕಿಯೇ ಕಟ್ಟಿದ್ದು ಗೂಡನ್ನ!
--------
ಹೌದು, ಹಕ್ಕಿಯೇ ಕಟ್ಟಿದ್ದು ಗೂಡನ್ನ! ಮತ್ತೆ ಬರೋದಿಲ್ಲ ಅಂತ ಗೊತ್ತಿದ್ಮೇಲೆ ಕಟ್ಬೇಕು ಯಾಕೆ?
--------
ಹಕ್ಕಿಗೆ ಬಯಲಲ್ಲಿ ಮಲಗಲಾಗದು! ಮನೆ ಬೇಕು, ಅದರ ಶ್ರಮ, ಅದರ ಆಸಕ್ತಿ, ಗೂಡು ಕಟ್ಟಿತು.
--------
ಬಯಲಲ್ಲಿ ಮಲಗಲಾಗದಿದ್ದ ಮೇಲೂ ಬಯಲಿನ ಮೋಹ ಹಕ್ಕಿಯನ್ನು ಬಿಡಲಿಲ್ಲ... ಈಗೇನೋ ಇರುವುದೆಲ್ಲವ ಬಿಟ್ಟು ಹಾರಿಹೋಗಿದೆ ಹಕ್ಕಿ, ಎಷ್ಟಂದರೂ ವಲಸೆ ಹಕ್ಕಿ, ಮರಳಿ ಬಂದೀತು ಒಂದು ದಿನ, ಆಗ ಗೂಡಿರದು, ಮತ್ತೆ ಹೊಸ ಗೂಡು ಕಟ್ಟುವ ಸಂಭ್ರಮದ ಹಕ್ಕಿಗೆ ಗೂಡಿನ ನೆನಪೂ ಇರದು!
----------
ಅದು ಜೀವನ ಚಕ್ರ...
----------

8 comments:

ಸಿಮೆಂಟು ಮರಳಿನ ಮಧ್ಯೆ said...

ತುಂಬಾ ಚಂದದ ಬರಹ...

ನನ್ನ ವ್ರತ್ತಿಗೆ ತುಂಬಾ ಹತ್ತಿರವಾಗಿದೆ..

ಮನ ತಟ್ಟುವಂತಿದೆ...

ನನಗಿಷ್ಟವಾಯಿತು..

ಧನ್ಯವಾದಗಳು..

sunaath said...

ಗೂಡೂ ಸಹ ಹಕ್ಕಿಗಾಗಿ ಕಾಯುವದೆ? ಸುಂದರವಾದ ಕಲ್ಪನೆ.

ಹರೀಶ ಮಾಂಬಾಡಿ said...

’ಗೂಡಾರ್ಥ’ ಚಿಂತನೆಗೆ ಹಚ್ಹುತ್ತಿದೆ..
ಚೆನ್ನಾಗಿದೆ..

sapna said...

channagide, tumba yochne maadbeku alva idella baryakke, nangantui kavana kathegalu baryoke baralla. but its very nice to read and also to imagine.

Lakshmi S said...

very profound

Satyajit K.T. said...

ಹಾರಲು ಕಲಿತ ಗೂಡೊ೦ದನ್ನು ನೋಡಿದೆ..ಶ್ರೀ.....

http://www.architectsban.webs.com said...

Well said.. i do believe him

http://www.architectsban.webs.com said...

ಗೂಡೂ ಸಹ ಹಕ್ಕಿಗಾಗಿ ಕಾಯುವದೆ? ಸುಂದರವಾದ ಕಲ್ಪನೆ.