ಮೊಗತುಂಬಿದ ಗತ್ತು ಕರಗಿಸಿ
ನಗುವಿನ ಮುಖವಾಡ ಸರಿಸುತ್ತ
ಖಾಲಿಖಾಲಿಯ ಹೊತ್ತುಬರುವ
ನೀಲಿನೀಲಿಯ ಈ ಹೊತ್ತು
ನೀ ನನ್ನೊಡನಿರಬೇಕಿತ್ತು...
ನಾನಲ್ಲದ ನಾನು
ನನ್ನಿಂದ ಹೊರಬಂದು
ನಾನು ನಾನಾಗುವ ಹೊತ್ತು
ನೀ ನನ್ನೊಡನಿರಬೇಕಿತ್ತು...
ಮನತುಂಬಿದ ಸೊನ್ನೆಗೆ ಅರಿವಿದೆ
ಕಣ್ಣಂಚಲರಳಿದ ಹನಿಗೆ ಅನಿಸಿದೆ
ಸೋಗಲಾಡಿ ನಗುವಿಗೂ ಬೇಕಿದೆ
ನೀನಿದ್ದರೆ ಚೆನ್ನಾಗಿತ್ತು...
ನೀನಿರಬೇಕಿತ್ತು...
ನೀ ನನ್ನೊಡನಿರಬೇಕಿತ್ತು...
12 comments:
ಶ್ರೀ...
ಪ್ರತಿಪದವನ್ನೂ ಪ್ರೀತಿಸಬೇಕೆನ್ನಿಸಿತು.
ಕೊನೆಯಲ್ಲಿ ನನಗೂ ಹಾಗೆನ್ನಿಸಿತು ‘ಈ ಹೊತ್ತು ನೀ ನನ್ನೊಡನಿರಬೇಕಿತ್ತು.’
ಚಂದ ಬರ್ದಿದೀರಾ....
nice :)..very touchy.
ಶ್ರೀಯವರೆ...
ಭಾವ,ಲಯಗಳ.. ಗತ್ತು...
ನಿಮ್ಮ ಕವನದ ಗುಟ್ಟು...
ತುಂಬಾ ಚೆನ್ನಾಗಿದೆ...
ಅಭಿನಂದನೆಗಳು...
nice poem shree..
ಶ್ರೀ,
ತುಂಬಾ ಸೊಗಸಾದ ಗೀತೆ.
ಶ್ರೀ,
ನಾನು ನಾನಾಗುವ ಹೊತ್ತು
ನೀ ನನ್ನೊಡನಿರಬೇಕಿತ್ತು..
ಸೊಗಸಾಗಿದೆ ಈ ಸಾಲುಗಳು..
"ಒಲಿದ ಜೀವ ಜೊತೆಯಲಿರಲು ಬಾಳೇ ಸುಂದರ...." ಅಲ್ಲವಾ? ಚೆನ್ನಾಗಿದೆ.
ಹಾಯ್ ಶ್ರೀಯವರೆ,
ಬರೀ 'ಚೆಂದದ ಕವಿತೆ' ಎನ್ನುವುದಕ್ಕಿಂತಲೂ ಮತ್ತೇನೋ ಇದೆಯೆನಿಸಿತು ..
ಕನಸುಗಳ ನನ್ನ ಬ್ಲಾಗುಗಳನ್ನೊಮ್ಮೆ (ಕನ್ನಡ & ಇಂಗ್ಲಿಷ್) ಬಿಡುವಾದಾಗ ನೋಡಿ.
~ಸುಷ್ಮಸಿ೦ಧು
ಕವನ ತುಂಬಾ ಚೆನ್ನಾಗಿದೆ. ಇಷ್ಟವಾಯಿತು.
ಶ್ರೀ,
ರೀ ನೀವು
ಕವಿತೆ ಚೆನ್ನಾಗಿ ಬರೆಯುತ್ತಿರಿ
ಧನ್ಯವಾದಗಳು.
ಅಂತಃಸ್ಸತ್ವ ಕದಡುವ, ಕಾಡುವ ಕವನ.
-ಚಂದಿನ
asdddddddddddddddddddddd
Post a Comment