ನನ್ನೆದುರು ನೀನಿರುವ ಅರೆಕ್ಷಣ
ನನ್ನೊಳಗಿನ ನೋವಿನೊಡನೆ
ನನ್ನ ಹೋರಾಟ
ಬಿದ್ದರೆ ಬೀಳಬೇಕು
ನೋವಿನ ಹೆಣ, ಹಾಗೆ
ಕಣ್ಣಂಚಿನ ಕಟ್ಟೆ
ಒಡೆಯದಂತೆ ಕಾಯುತ್ತೇನೆ
ನಾನೇ ಗೆಲ್ಲುತ್ತೇನೆ
ಆದರೆ
ನೋವ ಮಾತ್ರ
ನಾ ಕೊಲ್ಲುವುದಿಲ್ಲ
ಯಾಕೆ ಗೊತ್ತಾ
ನೀನಿಲ್ಲದ ಕೊನೆಯಿಲ್ಲದ
ಯುಗಗಳಲ್ಲಿ
ಮುಳುಗಿ ತೇಲಲಿಕ್ಕೆ
ನೋವು ಬೇಕು
ನೋವಿನ ಕವನದಲ್ಲಿಯೂ ಚೆಲುವಿರುತ್ತದೆ ಎನ್ನುವುದಕ್ಕೆ ಈ ಕವನವೇ ಒಂದು ನಿದರ್ಶನ!
Post a Comment
1 comment:
ನೋವಿನ ಕವನದಲ್ಲಿಯೂ ಚೆಲುವಿರುತ್ತದೆ ಎನ್ನುವುದಕ್ಕೆ ಈ ಕವನವೇ ಒಂದು ನಿದರ್ಶನ!
Post a Comment