Saturday, April 14, 2007

ಈ ಬರಹಕ್ಕೆ ಹೆಸರಿಲ್ಲ...

ಅಡಿಗರು ಹೇಳಿದಂತೆ... 'ಮರದೊಳಡಗಿದ ಬೆಂಕಿಯಂತೆ' ಎಲ್ಲೋ ಮಲಗಿತ್ತು ಬೇಸರ...
........................................................
ಬೇಸರ ಹೋಗಲು ಏನ್ಮಾಡ್ಬೇಕೋ ತಿಳಿಯದೆ ಹಾಗೇ ಸುಮ್ಮನೆ ಅಲ್ಲಿ ಇಲ್ಲಿ ಸುತ್ತಾಡ್ತಾ ಇದ್ದೆ.
'ಸುರ್' ಚಿತ್ರ ದ ಲಕ್ಕಿ ಆಲಿ ಹಾಡು... ' जाने क्या डूंढ्ता है यॆ तॆरा दिल, तुझ्कॊ क्या चाहियॆ जिंदगी... रास्तॆ ही रास्तॆ हैं कैसा है यॆ सफर...' ಮತ್ತೆ ಮತ್ತೆ ಮನದೊಳಗಿ೦ದ ಹೊರಟು ಗುನುಗಾಗಿ ಹೊರಬರುತ್ತಿತ್ತು..
........................................................

ಹಾಗೇ ಹೋಗ್ತಾ ಹೋಗ್ತಾ 'ತುಳಸೀವನ' ಸಿಕ್ತು...
ಹಳೆಯ, ಮರೆತ ಕವನಗಳು... ಯಾವುದೋ ಲೋಕದಲ್ಲಿ ಮೈಮರೆಸಿತು.

ಅಡಿಗರ 'ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿದೋಣಿ' ...

'ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ
ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು'

ಜಗತ್ತಲ್ಲಿ ಬಹುಶ: ಅನುಭವಿಸದೇ, ಯೋಚಿಸದೇ, ವಿಶ್ಲೇಷಿಸದೇ ಬಿಟ್ಟ ಭಾವನೆಗಳು, ಯೋಚನೆಗಳು, ವಿಚಾರಗಳು... ಯಾವುದೂ ಇಲ್ವೇನೋ... Perhaps JK was very much right when he said 'we are second hand people'....? Or is there anything left unexplored?

Lord Tennyson ಹೇಳ್ತಾನೆ, 'All experience is an arch wherethrough gleams that untravelled world whose margin fades for ever and for ever when I move'... ಇದೆರಡು contradicting, ಅಲ್ವಾ?
........................................................

ದಾರ್ಶನಿಕರು, ವೇದಾ೦ತಿಗಳು, ಕವಿಗಳು, ಹಿರಿಯರು - ಅವರ ಬದುಕಿನ ದರ್ಶನವನ್ನು, ಅನುಭವ ಸಾರವನ್ನು ಜಗತ್ತಿಗೆ ಹೇಳಿದ್ದಾರೆ... ಬಹುಶ: ಯಾರೋ ಕೇಳಬೇಕು ಎಂಬ ಇರಾದೆ ಅವರಿಗೆ ಇದ್ದಿರಬಹುದು, ಅಥವಾ ಇಲ್ಲದಿದ್ದಿರಬಹುದು. ಅದು ಸೂರ್ಯನ ಬೆಳಕಿನಷ್ಟೇ, ಮಳೆಯ ತ೦ಪಿನಷ್ಟೇ ಸ್ವಾಭಾವಿಕವಾಗಿರಬಹುದು. ಅಷ್ಟು ಮಾತ್ರವಲ್ಲ, So called 'ಲಕ್ಷಣ ರೇಖೆ'ಗಳನ್ನ ಮೀರಿದ ಬದುಕಿನ ಬಗ್ಗೆಯು ಮಾತಾಡಿದ ಕವಿಗಳು, ದಾರ್ಶನಿಕರು ಕೂಡಾ ಇದ್ದಾರಲ್ಲ..?
ಆದರೆ, ಕೊನೆಗೆ ಬರುವುದು individual exploration of life... ಅವರವರ ಭಾವಕ್ಕೆ, ಅವರವರ ಬುದ್ಧಿಗೆ ನಿಲುಕುವ ಸತ್ಯಗಳನ್ನು ಕಂಡುಕೊಳ್ತಾ, ಅವರವರ ಹಾದಿಯಲ್ಲಿ ನಡೆಯುವುದೇ ಬದುಕು... ಅ೦ತ ಹೇಳ್ಬಹುದೇನೋ? ಬದುಕು ಹೀಗೇ ಇರಬೇಕು ಎಂಬ set patterns ಇದೆಯಾ? ಇರಬೇಕಾ? ನಾವು ಬದುಕಿದ್ದೇ ಬದುಕಲ್ವಾ?
........................................................
ಇವಳಿಗೇನಾಯಿತು ಇದ್ದಕ್ಕಿದ್ದಂತೆ... ಅಂದ್ಕೋತಿದೀರಾ?
ಹೀಗೇ ಅಗ್ತಿರತ್ತೆ ಒಮ್ಮೊಮ್ಮೆ, ನನ್ನೆಲ್ಲಾ ತಲೆಹರಟೆ ಬರಹಗಳ ಜತೆ ಹೀಗೇ ಒ೦ದಷ್ಟು ವೇದಾ೦ತ ಅವಾಗಾವಾಗ ಬರ್ತಿರತ್ತೆ... ಏನ್ಮಾಡಕ್ಕಾಗಲ್ಲ!! ಹೆದರ್ಕೋಬೇಡಿ... :-)

ಆದ್ರೂ ಇದ್ಯಾಕೋ ಅತಿಯಾಯ್ತೇನೋ!!! ಬ್ಲಾಗಿಂಗ್ ಕಡಿಮೆ ಮಾಡಬೇಕು.
........................................................

2 comments:

Shiv said...

ಶ್ರೀ,

ನೀವು ಎಲ್ಲಾ ಬಿಟ್ಟು ವಿಷು ಹಬ್ಬದ ಸಡಗರದ ಮಧ್ಯೆ ಈ ರೀತಿ ವೇದಾಂತಿಗಳಾಗಿದ್ದೇಕೆ?

ಇರಲಿ..ಹಾಗೆ ಅನಿಸಿಬಿಡುತ್ತೆ ಕೆಲವೊಮ್ಮೆ..

ಬಹುಷಃ ಮತ್ತದೇ ಸಂಜೆ..ಮತ್ತದೇ ಬೇಸರವೇ?

ಇಲ್ಲಾ ಬದುಕಿಗೆ set patterns ಇಲ್ಲಾ..ಇರಲೂಬಾರದು..

ಅಳುವ ಕಡಲಿನಲ್ಲಿ ನಗೆಯ ಹಾಯಿದೋಣಿ ತೇಲಿ ಬರಲಿ !
Cheer up !

Satish said...

'ಇದೆಲ್ಲಾ' ನಾರ್ಮಲ್, ನಿಮ್ಮ ರೋಗ ಇನ್ನೂ ಉಲ್ಬಣಿಸಿ ಹೆಚ್ಚು ಹೆಚ್ಚು ಕುಟ್ಟಿ ಕೀ ಬೋರ್ಡ್ ಮುರಿಯುವಂತಾಗಲಿ!