ಅವರಿಬ್ಬರೂ ಪ್ರೀತಿಸಿದರು, ಮದುವೆಯಾಗಬೇಕೆಂದುಕೊಂಡರು. ಅವಳಿಲ್ಲದೆ ಬದುಕುವುದಿಲ್ಲ ಎಂದು ಅವನೆಂದ. ಅವಳೂ ಅದನ್ನೇ ಅಂದಳು. ಆದರೆ ಹಿರಿಯರ ಜತೆ ಮಾತಾಡುವ ಹಂತದಲ್ಲಿ ಜಾತಿ ಪೆಡಂಭೂತವಾಗಿ ನಿಂತಿತು. ಅವಳ ಅಪ್ಪ ನೀನೇನಾದರೂ ಈ ಮದುವೆ ಮಾಡಿಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿದ.
ಕಟ್ಟಿಕೊಂಡಿದ್ದ ಪ್ರೀತಿಯ ಕಲ್ಪನೆ ವಾಸ್ತವವನ್ನು ಎದುರಿಸುವಷ್ಟು ಶಕ್ತಿವಂತವಿರಲಿಲ್ಲ. ಆಕೆ ಮಣಿದಳು. ಬದುಕು ಬಂದ ಹಾಗೆ ಸ್ವೀಕರಿಸಿದಳು. ಈಗ ಆಕೆ ಮದುವೆಯಾಗಿ ಸಂತೋಷವಾಗಿದ್ದಾಳೆ. ಆತ ಅವನ ಬದುಕಲ್ಲಿ ಚೆನ್ನಾಗಿದ್ದಾನೆ.
*********************
ಆತ ಲಿಂಗಾಯತ, ಆಕೆ ಮನೆಯಲ್ಲಿ ಮರಾಠಿ ಮಾತಾಡುತ್ತಾಳೆ. (ಜಾತಿ ಇಲ್ಲಿವರೆಗೆ ನಂಗೂ ಗೊತ್ತಿಲ್ಲ). ಅಂತರ್ಜಾತೀಯ ವಿವಾಹ, ಪ್ರೇಮ ವಿವಾಹ. ಗೆಳೆಯರ ಬೆಂಬಲ, ಸಹಾಯ, ಹಾರೈಕೆಗಳೊಡನೆ ಸರಳವಾಗಿ ಮದುವೆಯಾಗಲು ನಿಶ್ಚಯಿಸಿದರು. ಮದುವೆಯ ಹಿಂದಿನ ದಿನ ಸಂಜೆ ಮದುಮಗ-ಮದುಮಗಳ ಜತೆ ಶಾಪಿಂಗ್ ಮಾಡುತ್ತ ಗಾಂಧಿನಗರದಲ್ಲಿ ಸುತ್ತಾಡುತ್ತಿದ್ದೆವು. ಮದುಮಗ ಒಂದೇಸಮನೆ, ಲೇಟ್ ಆಯ್ತು, ಮಠಕ್ಕೆ ಹೋಗಬೇಕು, ಗುರುಗಳನ್ನು ನೋಡಬೇಕು ಅಂತ ಪೇಚಾಡುತ್ತಿದ್ದ.
ಕೇಳಿ ಕೇಳಿ ಸಾಕೆನಿಸಿದಾಗ ನಾನು ಕೇಳಿದೆ, ಯಾಕೆ ಮಠಕ್ಕೆ ಈ ಅಪರಾತ್ರಿಯಲ್ಲಿ ಅಂತ. ಆತ ಹಾರಿಕೆಯ ಉತ್ತರವಿತ್ತ. ನನಗೆ ಕುತೂಹಲ ಹೆಚ್ಚಿತು. ಮೆಲ್ಲನೆ ಮದುಮಗಳಿಗೆ ಕೇಳಿದರೆ, ಆಕೆ ಬಿದ್ದು ಬಿದ್ದು ನಗಲಾರಂಭಿಸಿದಳು, 'ಅವನನ್ನೇ ಕೇಳು, ಹೇಳ್ತಾನೆ' ಅಂದಳು. 'ಕೇಳಿದೆ, ಹೇಳಿಲ್ಲ' ಎಂದೆ. 'ಹೇಳಿದ್ರೆ ಬೈತೀಯ ಅಂತ ಹೇಳಿಲ್ಲ ಅನ್ಸತ್ತೆ, ನಂಗೆ ಲಿಂಗಧಾರಣೆ ಮಾಡ್ಬೇಕಲ್ಲ, ಅದಕ್ಕೆ ಕರಕೊಂಡು ಹೋಗ್ತಿದಾನೆ' ಅಂದಳು. 'ನಿಂಗ್ಯಾಕೆ ಲಿಂಗಧಾರಣೆ' ಅಂತ ಕೇಳಿದೆ. 'ನನ್ನನ್ನ ಅವನ ಮನೆಯಲ್ಲಿ ಒಪ್ಕೋಬೇಕು ಅಂದ್ರೆ ನಾನು ಅವನ ಜಾತಿಗೆ ಸೇರಬೇಕು, ಅದಕ್ಕೆ' ಅಂತ ನಕ್ಕಳು. ಅವರೆಣಿಸಿದಂತೆ ನಾನು ಬೈಯಲಿಲ್ಲ...
*********************
ಆತ ಕ್ರಿಸ್ಚಿಯನ್, ಆಕೆ ಹಿಂದು. ಮದುವೆಯಾಗುವುದಲ್ಲಿದ್ದಾರೆ. ಆತನ ಮನೆಯಲ್ಲಿ ಹುಡುಗಿಯನ್ನು ಒಪ್ಪಿದ್ದಾರೆ. ಮದುವೆಗೆ ಯಾರ ಅಡ್ಡಿಯೂ ಇಲ್ಲ. ಆದರೆ, ರಿಜಿಸ್ಟರ್ ವಿವಾಹ ಆತನ ಮನೆಯವರಿಗೆ ಇಷ್ಟವಿಲ್ಲ. ಅದಕ್ಕೆ ಚರ್ಚ್ ನಲ್ಲಿ ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ. ಚರ್ಚಿನಲ್ಲಿ ಮದುವೆಯಾಗಬೇಕಾದರೆ ಹುಡುಗಿ ಬಾಪ್ಟಿಸ್ಟ್ ದೀಕ್ಷೆ ತೆಗೆದುಕೊಂಡಿರಬೇಕು, ಇಲ್ಲದಿದ್ದರೆ ಮದುವೆಯಾಗುವಹಾಗಿಲ್ಲ ಎಂಬ ನಿಯಮ ಎದುರಾಗಿದೆ.
ಆಕೆ ದೀಕ್ಷೆಗೆ ಒಪ್ಪಿಕೊಂಡಿದ್ದಾಳೆ. ಈಗ ಆತ ಆಕೆಗೆ ಬಾಪ್ಟಿಸ್ಟ್ ದೀಕ್ಷೆ ಕೊಡಿಸಲು ಸಿದ್ಧತೆ ನಡೆಸಿದ್ದಾನೆ. 'ನಾನೇನ್ ಅವ್ಳಿಗೆ ಹಿಂಗೇ ಇರು ಹಂಗೇ ಇರು ಅಂತ ಹೇಳಲ್ಲರಿ, ಮದುವೆ ಆಗ್ಬೇಕಲ್ಲ ಅದ್ಕೆ ಈ ಅಡ್ಜಸ್ಟ್ ಮೆಂಟ್', ಅಷ್ಟೆ...' ಅಂತ ಹಲ್ಲುಕಿರಿಯುತ್ತಾನೆ.
*********************
Caste is a Social Reality. But it'z Individuals who form the Society.
5 comments:
ಶ್ರೀ,
ಬೇರೆ ಬೇರೆ ಹೂವುಗಳಿಂತ ಇರೋ ಈ ದೃಷ್ಟಾಂತಗಳನ್ನು ನಿಮ್ಮ ಕೊನೆ ಸಾಲು ಎಷ್ಟು ಸೊಗಸಾಗಿ ಹಿಡಿದಿಟ್ಟಿದೆ..
ಹೌದಲ್ಲವಾ..
ನನ್ನ ಅತ್ಯಂತ ಆಪ್ತಮಿತ್ರ ದಂಪತಿಗಳು-ಹಿಂದು ಮತ್ತು ಮುಸ್ಲಿಮ್..ಆದರೆ ಅವ್ರು ಯಾವಾತ್ತು ದೀಕ್ಷೆ-ಮತಾಂತರದ ಬಗ್ಗೆ ಯೋಚನೆ ಮಾಡಲಿಲ್ಲ..
ಪ್ರೀತಿ ದೀಕ್ಷೆ ಇದ್ದಾ ಮೇಲೆ ಬೇರೆ ಬೇಕೇ?
http://gaurish-kanasu.blogspot.com/
ds is gourish blog
ಚೆನ್ನಾಗಿದೆ ..ಆದರೆ ಬರೀ ಹುಡುಗಿಯರೇ ಕೊನೆಗೆ
ಆಡ್ಜಸ್ಟ ಆಗುತ್ತಾರೆ ಅಂತ ಹೇಳುವುದು ಸರಿ ಅಲ್ಲ. ಅನೇಕ ಪ್ರಸಂಗದಲ್ಲಿ ನಾನು ಹುಡುಗ ಪರಜಾತಿಗೆ ಮದುವೆಯಾದ ಉದಾಹರಣೆ ಇದೆ. ಧರ್ಮಶ್ರೀ ಕಥೆಯನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿ. ಎನೇ ಇರಲಿ, ಪ್ರೀತಿಯನ್ನು ಮಾಡುವಾಗ ಯೋಚಿಸದ ಜಾತಿ ,ಕುಲ ಮದುವೆಯಾಗುವಾಗ ಬರುವುದು ನಿಜಕ್ಕೂ ಶೋಚನೀಯವೇ ಸರಿ.
ಧನ್ಯವಾದ ಶಿವ್, ಪವ್ವಿ...
ಯಾರು ಸರಿ, ಯಾರು ತಪ್ಪು ಅಂತಲ್ಲ, ನಾನು ಹೇಳಹೊರಟಿದ್ದು ಇಲ್ಲಿ ಏನಂದರೆ, ಪ್ರೀತಿ ಬದುಕಲ್ಲಿ ಉಳಿಯಬೇಕೆಂದರೆ ಇಂತಹ ಪುಟ್ಟ ಅಡ್ಜಸ್ಟ್ಮೆಂಟ್ಸ್ ಅಗತ್ಯ, ಅದನ್ನ ಹೆದರದೆ ಮಾಡುವವರ ಪಾಲಿಗೆ ಬದುಕಲ್ಲಿ ಪ್ರೀತಿ ಉಳಿಯುತ್ತದೆ... ಅಡ್ಜಸ್ಟ್ ಆಗಲು, ಅಥವಾ ಪರಿಸ್ಥಿತಿಗಳನ್ನು ಎದುರಿಸಲು ಹೆದರುವವರು, ಹೇಗಿದ್ದಾರೋ ಹಾಗೇ ರಾಜಿ ಮಾಡಿಕೊಳ್ಳುತ್ತಾರೆ... ಅವರವರ ಪಾಲಿಗೆ ಅವರವರು ಮಾಡಿದ್ದು ಸರಿಯಿರುತ್ತದೆ... ಯಾಕಂದ್ರೆ ಅವರವರ ಬದುಕು ಅವರವರದೇ ತಾನೆ?
architects as architecural Read more about Green eco architectural designs are reusable materials, green designs etc.. ..… Create an Eco friendly Green design… Save Earth.. interior designers Bangalore as of natural materials interior designers in Bangalore with almost modern concepts architects bangalore tumbha chanagida
Post a Comment