Tuesday, January 30, 2007

ಇದು ಭಾರೀ ಸ್ಪೆಷಲ್ ಏನಲ್ಲ...

ಇದು ಭಾರೀ ಸ್ಪೆಷಲ್ ಏನಲ್ಲ, ಆದ್ರೂ ಹೇಳ್ಬೇಕು ಅನಿಸ್ತಿದೆ..:-)
ಬೆಳಿಗ್ಗೆ ಬೇಗ ಏಳ್ಬೇಕು ಅ೦ತ ದಿನಾ ಅ೦ದುಕೊಳ್ಳುತ್ತಿರುತ್ತೇನೆ... ಅಲಾರಂ ಇಟ್ಟು ಮಲಗಿರುತ್ತೇನೆ. ಆದರೆ,ಅದ್ಯಾಕೋ, ಬೆಳಿಗ್ಗೆ ಅಲಾರಂ ಹೊಡೆದುಕೊಂಡಿದ್ದೇ ಗೊತ್ತಾಗುವುದಿಲ್ಲ. ಚಿಕ್ಕವಳಿದ್ದಾಗ ಪರೀಕ್ಷೆಯ ದಿವಸ (ಪರೀಕ್ಷೆಯ ದಿವಸ ಮಾತ್ರ:-)) ಬೆಳಿಗ್ಗೆ ನಾಲ್ಕು ಘ೦ಟೆಗೆ ಎದ್ದು ಓದ್ತಿದ್ದ ದಿನಗಳು ನೆನಪಾದ್ರೆ ... ನಿಜವಾಗ್ಲೂ ನಾನೇನಾ.. ಅನಿಸ್ತಿದೆ..
ಈಗ ಟಿವಿಗೇ ಅಲಾರ೦ ಇಟ್ಟು ಮಲಗುತ್ತಿದ್ದೇನೆ. ನನ್ನ ದಿನ ಆರ೦ಭ ಮಾಡುವ channel - NDTV/ CNNIBN/ CNBC TV 18/ NDTV PROFIT - ಹೀಗೆ rotate ಆಗುತ್ತಿರುತ್ತದೆ.
ಅ೦ತೂ ಇ೦ತೂ ಎದ್ದು ನ್ಯೂಸ್ ಪೇಪರ್ ತೆಗೆದುಕೊಂಡು ಬ೦ದೆನೆ೦ದರೆ ಬಚಾವ್, ನಿದ್ದೆ ದೂರ ಓಡುತ್ತಾಳೆ... ದಿನ ಸಾ೦ಗವಾಗಿ ಮು೦ದೆ ಹೋಗುತ್ತದೆ.
ಕೆಲವರದಾದರೂ ದಿನ ಇದೇ ರೀತಿ ಆರ೦ಭ ಆಗ್ತಿರಬೇಕೇನೋ..?
ಹಾ೦. ಈ ದಿನಚರಿ break ಆಗಿದ್ದು ಇತ್ತೀಚೆಗೆ ಕೆಲಸದ ಮೇಲೆ ಭದ್ರಾಚಲ೦ಗೆ ಹೋಗಿದ್ದಾಗ. ಕೆಲಸದ ಪ್ರಯುಕ್ತ ದಿನವಿಡೀ ಪ್ರಯಾಣ ಮಾಡಿ, ರಾತ್ರಿ ೧೨ಕ್ಕೆ ಮಲಗಿ ಬೆಳಿಗ್ಗೆ 3ಘ೦ಟೆಗೆ ಎದ್ದು ಮತ್ತೆ ಹೊರಟಿದ್ದೂ ಇದೆ.. ಈಗ ಎಲ್ಲಾ ಕನಸು, It's unbelievable...
Now I'm back to square..!!! ಎ೦ದಿನ ಹಾಗೆ, 7 ಘ೦ಟೆ.. ಅಲಾರ೦, ಟಿವಿ, ನ್ಯೂಸ್ ಪೇಪರ್, ಚಹಾ.. ಮತ್ತೆ ಹೊಸ ದಿನ...

Monday, January 22, 2007

Khud Kahaani Ban Jaathe Hain..

Kahaani likhte hain hum..
Kahaani bechte bhi hain..
Kahaani se kahaani ko nikaalke
Nayi kahaani banaa lete hain..
Lekin Maan Lijiye..
Hum sirf Kahaani bananevale hi nahin..
Khud Kahaani ban bhi jaathe hain..!!!

Tuesday, January 16, 2007

ಮನಸು ಏಕಾಂಗಿಯಾದಾಗ...

ಮನಸು ಏಕಾಂಗಿಯಾದಾಗ
ಕಣ್ಣುಗಳೆರಡೂ ಮುಚ್ಚಿಕೋ ಗೆಳೆಯಾ...
ನಿನ್ನ ಮನದ ಬಲು ಸನಿಹವಿದ್ದು,
ನಿನಗೆ ಒಳಿತಾಗಲೆ೦ದು ಬಯಸುವ
ಈ ಬೆಚ್ಚನೆಯ ಅನುಭೂತಿಯ
ಅನುಭವ ನಿನಗಾದರೆ
ಅದಕ್ಕಿಂತ ಬೇರೇನು ಬೇಕು?
ಬದುಕು ಮೊಗೆದು ಕೊಟ್ಟಿದ್ದು
ನೀನು-ನಾನು ಪಡಕೊಂಡಿದ್ದು
ಎಲ್ಲವೂ ಸುಂದರ ಅನುಭೂತಿ...
ಉಳಿಯುವುದೂ ಅನುಭೂತಿ.

Saturday, January 13, 2007

ಹಸಿರು - ಮನಸು

Orkutನಲ್ಲಿ ಪರಿಸರ ಸ೦ಬ೦ಧಿ ಗ್ರೂಪ್ ಗಳಲ್ಲಿ ಏನಿದೆ ಅ೦ತ ನೋಡ್ತಿದ್ದೆ. ಅದ್ಯಾಕೋ ಬೇಜಾರಾಯ್ತು.. ನಮ್ಮಲ್ಲಿ ಹೊಸದಾಗಿ ಯೋಚನೆಗಳೇ ಇಲ್ವಾ.. ಅನಿಸ್ತು... ಅಥವಾ, ಆಧುನಿಕ ಜೀವನಶೈಲಿಗೆ ನಾವೆಷ್ಟು ಒಗ್ಗಿ ಹೋದಿದ್ದೀವ೦ದ್ರೆ, ವಾಪಸ್ ಹೋಗಲಿಕ್ಕೆ ಸಾಧ್ಯವೇ ಆಗದಷ್ಟು.

ಪರಿಸರ ಉಳಿಸಬೇಕಾದ್ರೆ, ನಮ್ಮ comfort, convenience, ಸುಖಕ್ಕೆ ಉಪಯೋಗವಾಗುವ ಎಷ್ಟೊ೦ದು ವಸ್ತುಗಳನ್ನ ಬಿಟ್ಟು ಬಿಡಬೇಕು... ಅದು ಆಗೋದಿಲ್ಲ.. practically impossible!! ಮತ್ತೆ ಯಾಕೆ ಪರಿಸರ ಉಳಿಸೋ ತವಕ? ಬರೀ ತವಕ ಇದ್ರೆ ಸಾಕಾ? ಅದನ್ನ ಸಾಧಿಸೋದಕ್ಕೆ ಬೇಕಾದ will power - ಇಚ್ಛಾಶಕ್ತಿ ನಮ್ಮಲ್ಲಿಲ್ಲ.. ನನ್ನೊಬ್ಬಳಿ೦ದ, ಅಥವಾ ನನ್ನೊಬ್ಬನಿ೦ದ ಏನಾಗತ್ತೆ? ಅನ್ನೋ ಮನೋಭಾವ - ನನ್ನನ್ನೂ ಸೇರಿಸಿ, ಎಲ್ಲರಲ್ಲೂ ಇದೆಯೇನೋ..

ಇದೆಲ್ಲಾ ಯೋಚಿಸದೆ ಇರುವಷ್ಟು ಸಮಯ ಆರಾಮಾಗಿರ್ತೀವಿ, ಯೋಚಿಸಿದ್ರೆ ಹಿ೦ಸೆ ಅನ್ಸತ್ತೆ... ಪರಿಹಾರ???

Friday, January 12, 2007

ಇ೦ದು...

ಅದ್ಯಾಕೋ
ನೆನಪಿನ ಬುಟ್ಟಿ
ಕೆದಕುತ್ತಾ ಕುಳಿತಿದ್ದೆ...
ಅಲ್ಲೊ೦ದು ನೋವಿನ ಕ್ಷಣವಿತ್ತು
ಅದು
ಸಿಹಿಯಾಗಿ ಮಿಡಿದಿತ್ತು
ಹಾಡಾಗಿ ಹರಿದಿತ್ತು
ಚಿತ್ತಾರ ಬರೆದಿತ್ತು
ಹೂವಾಗಿ ಅರಳಿತ್ತು...

ಕನಸು...

ಗೊತ್ತಿದ್ದವರು
ಹೇಳುತ್ತಾರೆ,
ಕನಸಿಗೆ ಬಣ್ಣವಿಲ್ಲವ೦ತೆ...
ಆದರೆ...
ಬಣ್ಣವಿಲ್ಲದ ಕನಸು
ಬದುಕಿಗೆ ಬಣ್ಣ ತು೦ಬುತ್ತದಲ್ಲ,
ಅದು ಹೇಗೆ?

Wednesday, January 10, 2007

ಕನ್ನಡದಲ್ಲಿ ಬರಿಯೂದ೦ದ್ರೆ ಅದೇನೋ ಖುಷಿ!!!

ಹೌದು ಕಣ್ರೀ... ಕನ್ನಡದಲ್ಲಿ ಬರಿಯೂದ೦ದ್ರೆ ಅದೇನೋ ಖುಷಿ!!!

ನಮ್ಗೆ ಬೇಕಾಗಿರೂದು ನಮ್ಮ ಆಡು ಭಾಷೆಯಲ್ಲಿ ಬೇಕಾದ ಹಾಗೆ ಹೇಳೋ ಹುಚ್ಚು... ಅದನ್ನ ನಮ್ ಥರದವ್ರೇ ಓದ್ತಾರೆ ಅನ್ನೋದ೦ತೂ ಗ್ಯಾರ೦ಟಿ...

ಹಾ... ಬರೀ ಕನ್ನಡಾನೇ ಯಾಕೆ, ಇದರಲ್ಲಿ ಭಾಷೆಯ ಮಿತಿ ಇಲ್ವೇ ಇಲ್ಲ... ಒ೦ಥರಾ ಚೆನ್ನಾಗಿದೆ ಕಣ್ರೀ...!!!