Friday, January 12, 2007

ಕನಸು...

ಗೊತ್ತಿದ್ದವರು
ಹೇಳುತ್ತಾರೆ,
ಕನಸಿಗೆ ಬಣ್ಣವಿಲ್ಲವ೦ತೆ...
ಆದರೆ...
ಬಣ್ಣವಿಲ್ಲದ ಕನಸು
ಬದುಕಿಗೆ ಬಣ್ಣ ತು೦ಬುತ್ತದಲ್ಲ,
ಅದು ಹೇಗೆ?

6 comments:

ಶ್ರೀನಿಧಿ.ಡಿ.ಎಸ್ said...

ಬದುಕಿಗೆ ಬಣ್ಣ
ತುಂಬೀ
ತುಂಬೀ,
ಕನಸಿನ ಬಣ್ಣ
ಖಾಲಿಯಾಗಿದೆ!
ಮತ್ತು,
ಬದುಕಿಗೆ ಬಣ್ಣ
ತುಂಬ ಬೇಕಾದಾಗೆಲ್ಲ
ಬಣ್ಣವುಕ್ಕುತ್ತದೆ, ಕನಸಿಗೆ!

Shree said...

ಚೆನ್ನಾಗಿದೆ..!!! ಕಪಿಗಳು ಕವಿಗಳಿಗೆ ಯಾವತ್ತೂ ಸ್ಪೂರ್ತಿಯಾಗಿರ್ತಾರ೦ತೆ.. ಅದು ನಿಜ ಅನಿಸ್ತಿದೆ ನ೦ಗೆ...:-)

ಶ್ರೀನಿಧಿ.ಡಿ.ಎಸ್ said...

"ಕಪಿಗಳು ಕವಿಗಳಿಗೆ"-- ಏನ್ರೀ ಇದು?!! ಯಾರು ಕಪಿ? ಯಾರು ಕವಿ?

Shree said...

ನಾವೇ ಕಪಿ, ನೀವೇ ಕವಿ!!!! (ಬೇರೇನು ಹೇಳಿದ್ರೂ ನಿಮಗೆ ಸಿಟ್ಟು ಬ೦ದೀತು!!)

ಆದ್ರೆ ಏನೇ ಹೇಳಿ ಶ್ರೀನಿಧಿ, ನೀವು ಚೆನ್ನಾಗಿ ಬರೀತೀರಾ ಅನ್ನೂದು ಪ್ರತಿಶತ ನೂರರಷ್ಟು ನಿಜ.. ಬೇರೆಲ್ಲ immaterial!!! ನನ್ನ ಸಾಲುಗಳನ್ನ ಅರ್ಥಪೂರ್ಣವಾಗಿ ಮು೦ದುವರಿಸಿದ್ದಕ್ಕೆ ಧನ್ಯವಾದ.

ಸಿಂಧು sindhu said...

ಕನಸು ನನಸಿನ ನಡುವಿನಚ್ಚರಿಯೇ ಬದುಕು?! ಅಂತ ಬರೆದಿದ್ರು ಕಣವಿಯವರು..
ನೀವು ಸೊಗಸಾಗಿ ಬಣ್ಣ ತುಂಬಿದೀರಿ ಆ ಭಾವಕ್ಕೆ.

ನಿಮ್ಮ ಬದುಕಿನ ಭಾವಚಿತ್ತಾರದಲ್ಲಿ ಯಾವಾಗಲೂ ಸಪ್ತವರ್ಣದ ಕನಸುಗಳರಳಲಿ...
ಬಣ್ಣ ಖಾಲಿಯಾದಾಗ ಎದೆಗೆಡದಿರಲಿ..
ಹೊಸ ಬಣ್ಣದ ಕಣಜಕ್ಕೆ ಲಗ್ಗೆ ಹಾಕುವ ಉತ್ಸಾಹವಿರಲಿ..

Shree said...

ಧನ್ಯವಾದ ಸಿ೦ಧು.. ಮತ್ತೆ ಮತ್ತೆ ಬರ್ತಿರಿ...