Monday, April 2, 2007

ನೋವಲ್ಲಿ ಹುಟ್ಟುವ ಕವಿತೆ...

Our sweetest songs are those that tell of saddest thoughts...
- Percy Bysshe Shelley

ನೋವಲ್ಲಿ ಹುಟ್ಟುವ ಕವಿತೆಗೆ
ಅದೇನು ಶಕ್ತಿ...
ಅರಳಿ ನಳನಳಿಸುತ್ತದೆ...
ಜಗವ ಘಮಿಸುತ್ತದೆ...
ನೋವು ಹೀರುತ್ತದೆ...
ಸ೦ಗಾತಿಯಾಗುತ್ತದೆ...
ಸಾ೦ತ್ವನವಾಗುತ್ತದೆ...
ಮನವ ಬೆಳಗುತ್ತದೆ...
ಅಮೃತವಾಗುತ್ತದೆ...
ಅಮರವಾಗುತ್ತದೆ...

( ಇದು ಕವಿತೆಯಲ್ಲ :-) )

3 comments:

Shiv said...

ಇಲ್ಲಿಯವರೆಗೆ..
.....
ಅಮರವಾಗುತ್ತದೆ

ಮುಂದುವರಿದ ಭಾಗ :)

ಅಮರವಾಗಿ ಹಾಡಾಗುತ್ತದೆ
ಮನದ ಮಾತಾಗುತ್ತದೆ
ಮಾತಾಗಿ ಮೌನವಾಗುತ್ತದೆ
ಮೌನಕ್ಕೆ ಮನೆಯಾಗುತ್ತದೆ
ಮತ್ತೆ ನೋವಿನ ಮನೆ ಕಾಣುತ್ತದೆ

Shree said...

ನೋವಿನ ಮನೆ ಕ೦ಡಾಗ
ಮತ್ತೆ ಕವಿತೆ ಹುಟ್ಟುತ್ತದೆ,
ಮತ್ತೆ ಅಮರವಾಗುತ್ತದೆ!! :-)

ಭಾವಜೀವಿ... said...

ಕವಿತೆಯಲ್ಲದಿದ್ದರೂ ಅದ್ಭುತವಾಗಿದೆ ಬಿಡಿ...!!
ಅದಕ್ಕೆ ಅಲ್ಲವೆ ಹೆಚ್ಚಿನ "ದರ್ದ್ ಬರೆ ನಗ್ಮೆ" ಹಿಟ್ ಆಗಿರೋದು!!
ನೋವಿಗಿರೋ ಶಕ್ತಿಯೇ ಅಂತಹುದು.. ಬೇಗ ಓದುಗರ ಒಳತೋಟಿಯನ್ನು ತಡವುತ್ತದೆ!!